79 ನೇ. ಸ್ವಾತಂತ್ರ್ಯ ದಿನಾಚರಣೆಯ – ಪೂರ್ವಭಾವಿ ಸಭೆ.
ಕೊಟ್ಟೂರು ಜು.30

ಪಟ್ಟಣದ ತಾಲೂಕ ಕಚೇರಿಯಲ್ಲಿ ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕೆ.ನೇಮಿರಾಜ ನಾಯ್ಕ ಇವರ ಅಧ್ಯಕ್ಷತೆಯಲ್ಲಿ 79 ನೇ. ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಕೊಟ್ಟೂರಿನಲ್ಲಿ ಎಲ್ಲಾ ಶಾಲಾ ಕಾಲೇಜಿನಲ್ಲಿ ಬೆಳಿಗ್ಗೆ 7.00 ಗಂಟೆಗೆ ಧ್ವಜಾರೋಹಣ ನೆರವೇರಿಸಿ ಕೊಂಡು ತಾಲೂಕ ಮಟ್ಟದಲ್ಲಿ ಕ್ರೀಡಾಂಗಣದಲ್ಲಿ ಬೆಳಿಗ್ಗೆ 8.00 ಗಂಟೆಗೆ ಸರಿಯಾಗಿ ಧ್ವಜಾರೋಹಣ ನೆರವೇರಿಸಲು ಸಿದ್ದತೆ ಮಾಡಿ ಕೊಳ್ಳುವಂತೆ ಸೂಚಿಸಿದರು. ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಬೇಕು. ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಹಾಜರಿದ್ದು ಕಾರ್ಯಕ್ರಮ ಮುಗಿಯುವ ವರೆಗೂ ಇರಬೇಕು. ತಮಗೆ ವಹಿಸಿದ ಜವಾಬ್ದಾರಿಗಳನ್ನು ನಿರ್ಲಕ್ಷ್ಯ ವಹಿಸದೇ ನಿರ್ವಹಿಸುವಂತೆ ತಿಳಿಸಿದರು. ದೇಶ ರಕ್ಷಣೆಗೆ ದುಡಿದು ನಿವೃತ್ತಿಯಾದ ಸೈನಿಕರಿಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರಿಗೆ ತಾಲೂಕಿನಲ್ಲಿ ಅತಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸುವಂತೆ ತಿಳಿಸಿದರು.

ತಹಶೀಲ್ದಾರರಾದ ಅಮರೇಶ ಜಿ.ಕೆ ಇವರು ಹಾಜರಾದ ಎಲ್ಲರಿಗೂ ಸ್ವಾಗತವನ್ನು ಕೋರುತ್ತಾ, ನಿಗದಿತ ಸಮಯಕ್ಕೆ ಧ್ವಜಾರೋಹಣ ನೆರವೇರಿಸಲು ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರು ಹಾಜರಿರುವಂತೆ ಕೋರುತ್ತಾ, ಕಾರ್ಯಕ್ರಮ ಯಶಸ್ವಿಗೆ ಎಲ್ಲರೂ ಸಹಕರಿಸುವಂತೆ ವಿನಂತಿಸಿದರು.ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯಿತಿಯ ಎ.ಡಿ ವಿಜಯಕುಮಾರ್ ಹೆಚ್, ಜೆಸ್ಕಾಂ ಎಇಇ ನಾಗರಾಜ್ ಆರ್ ಉಪ ಪ್ರಾಚಾರ್ಯರಾದ ವಿಠಲ್ ಕುಲಕರ್ಣಿ, ಪಿಎಸ್ಐ ಗೀತಾಂಜಲಿ ಸಿಂಧೆ, ಸಹಾಯಕ ಕೃಷಿ ನಿರ್ದೇಶಕರಾದ ಮಹಾಂತೇಶ.ಜಿ, ಪಿ.ಆರ್.ಇ ಉಪ ವಿಭಾಗದ ಜೆ.ಇ ರುದ್ರೇಶ.ಬಿ, ಪ್ರಭಾರೆ ಕ್ಷೇತ್ರಶಿಕ್ಷಣಾಧಿಕಾರಿ ಜಗದೀಶ್, ಎಪಿಎಂಸಿ ಕಾರ್ಯದರ್ಶಿ ಎ.ಕೆ ವೀರಣ್ಣ ಹಾಗೂ ಇತರೆ ಅಧಿಕಾರಿಗಳು, ಕಸಪ ಅಧ್ಯಕ್ಷರಾದ ದೇವರಮನಿ ಕೊಟ್ರೇಶ್, ನೌಕರರ ಸಂಘದ ಅಧ್ಯಕ್ಷರ ಯೋಗೀಶ್ವರ ದಿನ್ನೆ, ಡಿ.ಎಸ್.ಎಸ್ ಮುಖಂಡರಾದ ಬದ್ದಿ ಮರಿಸ್ವಾಮಿ, ಕಂದಗಲ್ಲು ಪರಶುರಾಮ, ಹಾಗೂ ವಿವಿಧ ಸಂಘಟನೆಯ ಮುಖಂಡರು, ಶಿಕ್ಷಣ ಇಲಾಖೆಯ ಇಸಿಒ ನಿಂಗಪ್ಪ, ಬಿ.ಆರ್.ಪಿ ಸಿ.ಆರ್.ಪಿಗಳು ಹಾಜರಿದ್ದರು. ಸಿ.ಮ ಗುರುಬಸವರಾಜ ಕಾರ್ಯಕ್ರಮ ನಿರ್ವಹಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು