“ಸ್ವಾತಂತ್ರ್ಯವು ಜನ ಗಣ ಮನದ ಸಿರಿ”…..

ಸ್ವಾತಂತ್ರ್ಯದ ಕಹಳೆ
ಭಾರತ ಜನಮನ ಕಳೆ
ಸಮಾನತೆ ಮಾನವೀಯತೆ ಸೆಲೆ
ನೊಂದವರ ವಂಚಿತರ ನೆಲೆ
ದರ್ಪ ದೌಲತಗಳ ಕೊನೆ
ಸಂಸ್ಕಾರ ಸಂಸ್ಕೃತಿ ಪಾಲನೆ
ಆಚಾರ ವಿಚಾರ ಬೆಳೆ
ದೇಶ ನಾಡ ನುಡಿ ಹೊಳೆ
ಸ್ವಾತಂತ್ರ್ಯ ಅಭಿವ್ಯಕ್ತಿ ಸ್ವಾತಂತ್ರ್ಯದ ಶಕ್ತಿ
ಅನ್ಯರ ನಿರ್ಬಂಧಗಳಿಗೆ ಮುಕ್ತಿ
ಸ್ವಾತಂತ್ರ್ಯ ಸವಿ ರುಚಿ
ಸ್ವಾತಂತ್ರ್ಯವು ಜನ ಗಣ ಮನದ ಸಿರಿ
ಹೋರಾಟಗಾರರ ಸ್ಮರಣೆ
ಅನುಭವದಾರರ ಕರ್ತವ್ಯ
ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ