ಸತ್ಸಂಗ ಸಾಧುಸಂಗ ದಿಂದ ಮೋಕ್ಷ ಪ್ರಾಪ್ತಿ – ಮಾತಾಜೀ ಅಮೂಲ್ಯಮಯೀ ಅಭಿಪ್ರಾಯ.
ಚಳ್ಳಕೆರೆ ಜು.30

ಸತ್ಸಂಗ ಸಾಧುಸಂಗ ದಿಂದ ಮಾನವ ಜನ್ಮದ ಪ್ರಧಾನ ಗುರಿಯಾದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹುಬ್ಬಳ್ಳಿಯ ಶ್ರೀಮಾತಾ ಆಶ್ರಮದ ಪೂಜ್ಯ ಮಾತಾಜೀ ಅಮೂಲ್ಯಮಯೀ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಿಶೇಷ ಸತ್ಸಂಗ ಸಭೆಯ ದಿವ್ಯ ಸಾನಿಧ್ಯ ವಹಿಸಿ ಅವರು ವಿಶೇಷ ಭಜನೆ ನಡೆಸಿ ಕೊಟ್ಟು “ಭಾಗವತದಲ್ಲಿ ಬರುವ ಕಪಿಲ ಉಪದೇಶ” ಎಂಬ ವಿಷಯವಾಗಿ ಪ್ರವಚನ ನೀಡಿದರು. ಶ್ರೀಮದ್ ಭಾಗವತದಲ್ಲಿ ಬರುವ ಕಪಿಲ ಮುನಿಗಳ ಉಪದೇಶ ಬಹಳ ಮಹತ್ವ ಪಡೆದಿದ್ದು ಅವರು ಭಕ್ತಿಯ ಶ್ರೇಷ್ಠತೆಯನ್ನು ಪ್ರತಿಪಾದಿಸಿದ್ದರು. ಆದ್ದರಿಂದ “ಭಾಗವತದ ಜೀವಾಳವೇ ಭಕ್ತಿ” ಎಂದು ಹೇಳಬಹುದೆಂದು ತಿಳಿಸಿದರು. ಭಗವಂತನನ್ನು ಪರಮ ಪ್ರೇಮದಿಂದ ಕರೆಯಬೇಕು. ಅವನಿಂದ ಪಡೆಯುವ ಭಗವದಾನಂದ ಅವರ್ಣಾನೀಯವಾದದ್ದು, ನಿರಂತರ ಸತ್ಸಂಗದಲ್ಲಿ ಪಾಲ್ಗೊಳ್ಳುವಿಕೆ ಮತ್ತು ಸಾಧುಸಂಗ ದಿಂದ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಸ್ವಾಗತ ವಂದನಾರ್ಪಣೆಯನ್ನು ಸದ್ಭಕ್ತರಾದ ಶ್ರೀಮತಿ ಸಿ.ಎಸ್ ಭಾರತಿ ಚಂದ್ರಶೇಖರ್ ನಡೆಸಿ ಕೊಟ್ಟರು. ಈ ವಿಶೇಷ ಸತ್ಸಂಗದ ದಿವ್ಯ ಸಾನಿಧ್ಯವನ್ನು ಚಳ್ಳಕೆರೆ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಮತ್ತು ನವಲಗುಂದದ ಶ್ರೀಶಾರದೇಶ್ವರಿ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಅನನ್ಯಮಯೀ ಅವರು ವಹಿಸಿದ್ದರು. ಸತ್ಸಂಗ ಸಭೆಯಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಲತಾ ಭಕ್ತವತ್ಸಲ, ಸರಸ್ವತಿ ಗೋವಿಂದರಾಜು, ಬಸವರಾಜ್, ಅಜ್ಜಪ್ಪ, ಕಾಲುವೆಹಳ್ಳಿ ಪಾಲಕ್ಕ, ಬೋರಣ್ಣ, ತಿಪ್ಪೇಸ್ವಾಮಿ, ಸಿದ್ದೇಶ್, ವನಜಾಕ್ಷಿ, ಮಾಣಿಕ್ಯ ಸತ್ಯನಾರಾಯಣ, ಗೀತಾ ನಾಗರಾಜ್, ಗೀತಾ ವೆಂಕಟೇಶರೆಡ್ಡಿ, ಚೇತನ್, ಯತೀಶ್.ಎಂ ಸಿದ್ದಾಪುರ, ಸಂತೋಷ್, ಗೀತಾ ಭಕ್ತವತ್ಸಲ, ರತ್ನಮ್ಮ, ವಿಜಯಲಕ್ಷ್ಮಿ, ಉಷಾ ಶ್ರೀನಿವಾಸ್, ಅಂಬುಜಾ, ಶುಭಾ, ತಿಪ್ಪಮ್ಮ, ಮೋಹಿನಿ, ಸುಧಾಮಣಿ, ಚೆನ್ನಕೇಶವ ಸೇರಿದಂತೆ ಸದ್ಭಕ್ತರು ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.