ಡೆಂಗ್ಯೂ ರೋಗ ತಡೆಗೆ, ಲಾರ್ವಾ ಉತ್ಪತ್ತಿ ತಾಣಗಳ ಸಮೀಕ್ಷೆ – ಆರೋಗ್ಯ ಅರಿವು ಜನ ಜಾಗೃತಿ.
ಅಮೀನಗಡ ಜು.31

ಹುನಗುಂದ ತಾಲೂಕಿನ ಅಮೀನಗಡದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ ತಾಲೂಕಾ ಆರೋಗ್ಯ ಅಧಿಕಾರಿಗಳು ಹುನಗುಂದ ಪ್ರಾಥಮಿಕ ಆರೋಗ್ಯ ಕೇಂದ್ರ ಅಮೀನಗಡ ಸಹಯೋಗದಲ್ಲಿ ಅಮೀನಗಡ ವಿವಿಧ ವಾರ್ಡುಗಳಲ್ಲಿ “ಡೆಂಗ್ಯೂ ರೋಗ ತಡೆಗೆ ಸಮೀಕ್ಷೆ ಜನ ಜಾಗೃತಿ ಆರೋಗ್ಯ ಅರಿವು ಕಾರ್ಯಕ್ರಮ” ಆಯೋಜಿಸಲಾಗಿತ್ತು, ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು “ಕಡಿತ ಚಿಕ್ಕದು ಹಾನಿ ದೊಡ್ಡದು” ಡೆಂಗ್ಯೂ ರೋಗ ತಡೆಗೆ ಸಾರ್ವಜನಿಕರು ಕೖಜೋಡಿಸಿರಿ ಎಂಬ ಘೋಷ ವಾಕ್ಯಯೊಂದಿಗೆ ಅಮೀನಗಡದ ವಿವಿಧ ವಾರ್ಡಗಳಲ್ಲಿ ಆಶಾ ವಿವಿಧ ಹಂತದ ಆರೋಗ್ಯ ಅಧಿಕಾರಿಗಳು ಲಾರ್ವಾ ಸಮೀಕ್ಷೆ ಜನ ಸಮೂಹದಲ್ಲಿ ಆರೋಗ್ಯ ಅರಿವು ಜನ ಜಾಗೃತಿ ಮೂಡಿಸಿದರು. ಡೆಂಗ್ಯೂ ರೋಗವು ವೈರಾಣು ರೋಗವಾಗಿದ್ದು. ಈಡೀಜ್ ಇಜಿಪ್ತೆ ಸೊಳ್ಳೆಗಳು ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುವುದು. ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ ಮಾಡುವುದು ಮುಖ್ಯ. ಸ್ವಚ್ಛ ನೀರಿನ ಸಂಗ್ರಹಗಳಲ್ಲಿ ಈಡೀಸ್ ಇಜಿಪ್ತೆ ಲಾರ್ವಾ ಉತ್ಪತ್ತಿ ಮಾಡುವುದು, ಮಳೆಗಾಲವಾದ್ದ ರಿಂದ ಟೆಂಗಿನ ಚಿಪ್ಪು, ಟಾಯರ್ ಟ್ಯೂಬ್, ಒಡೆದ ಬಾಟಲ್ ನೀರಿನ ಸಂಗ್ರಹದಲ್ಲಿ ಲಾರ್ವ ಉತ್ಪತ್ತಿ ಯಾಗುತ್ತವೆ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ ಮಾಡುವುದು ಕುಟುಂಬದ ಸದಸ್ಯರ ಜವಾಬ್ದಾರಿ ಯಾಗಿರುತ್ತದೆ. ಸೊಳ್ಳೆಗಳ ಕಡಿತ ದಿಂದ ಮಲೇರಿಯಾ, ಆನೆಕಾಲು ರೋಗ, ಡೆಂಗ್ಯೂ ಚಿಕೂನ್ ಗುನ್ಯಾ ಮೆದಳು ಜ್ವರ ಝಿಕಾ ತಡೆಗೆ, ಸೊಳ್ಳೆ ಪರದೆ ಸೊಳ್ಳೆ ಬತ್ತಿ ನೀರಿನ ಸಂಗ್ರಹಗಳ ಮೇಲೆ ತಪ್ಪದೇ ಮುಚ್ಚಳಿಕೆ ಹಾಕಬೇಕು. ಸ್ವಯಂ ರಕ್ಷಣಾ ಕ್ರಮಗಳನ್ನು ಅನುಸರಿಸ ಬೇಕು ಯಾವುದೇ ತರಹ ಜ್ವರ ಕಾಣಿಸಿದರೆ ನಿರ್ಲಕ್ಷ್ಯ ಬೇಡ ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಚಿಕಿತ್ಸೆ ಉಚಿತವಾಗಿರುತ್ತದೆ.ಡೆಂಗ್ಯೂ ರೋಗ ತಡೆ ಲಾರ್ವಾ ಸಮೀಕ್ಷೆ ಆರೋಗ್ಯ ಅರಿವು ಜನ ಜಾಗೃತಿ ಕಾರ್ಯಕ್ರಮದಲ್ಲಿ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಕಮಲಾ, ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಸನ್ನ ಜಮಖಂಡಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸಿ.ಎಚ್ ಕೊಲ್ಕಾರ, ಆಶಾ ಕಾರ್ಯಕರ್ತೆ ಶೈನಾಜ್ ಜಂಗಿ ವಿವಿಧ ವಾರ್ಡಗಳ ಮುಖಂಡರು ಯುವಕರು ಭಾಗವಹಿಸಿದ್ದರು.