ಸುಳ್ಳು ಸುದ್ದಿ ಪ್ರತಿಕ್ರಿಯೆ ನೀಡುವಾಗ ಜಾಗೃತವಾಗಿರಿ – ಮಾಜಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ.

ಮುದ್ದೇಬಿಹಾಳ ಜು.31

ಸಂವಹನ ಯುಗದಲ್ಲಿ ಪ್ರತಿಯೊಬ್ಬರೂ ಸುದ್ದಿ ಹಂಚಿ ಕೊಳ್ಳುತ್ತಿದ್ದಾರೆ. ತಮ್ಮತನವನ್ನು ತೋರಲು ಬಯಸುತ್ತಾರೆ. ಕ್ಷಣಾರ್ಧದಲ್ಲಿ ಜಗತ್ತಿಗೆ ಪರಿಚಯವಾಗಿ ಹಣ. ಕೀರ್ತಿ. ಹಾಗೂ ಜನಪ್ರಿಯತೆಯನ್ನು ಗಳಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಅಭಿವ್ಯಕ್ತಿ ಸಾಮರ್ಥ್ಯ ಎಂದು ಮಾಜಿ ಶಾಸಕ ಎ.ಎಸ್ ಪಾಟೀಲ್ (ನಡಹಳ್ಳಿ) ಹೇಳಿದರು. ಆಲಮಟ್ಟಿ ರಸ್ತೆ ಪಕ್ಕದ ಹರಿಹಂತ ಗಿರಿಯಲ್ಲಿರುವ ಹರಿಹಂತ ಸಮೂಹ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ನಡೆದ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ವಾರ್ಷಿಕ ಪ್ರಶಸ್ತಿ ಪ್ರಧಾನ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದ ಅವರು. ಆಧುನಿಕ ಜಗತ್ತು ಮೊಬೈಲ್ ಬಳಕೆಯಿಂದ ಡಿಜಿಟಲ್ ಗ್ರಂಥಾಲಯವಾಗಿ ಪರಿವರ್ತನೆಯಾಗಿದೆ. ವಿಜ್ಞಾನ ತಂತ್ರಜ್ಞಾನ ಜೊತೆಗೆ ಮಾಹಿತಿ ಜ್ಞಾನ ಇಲ್ಲದಿದ್ದರೆ ಪೂರ್ಣವಾಗುವುದಿಲ್ಲ. ಹಾಗೆಯೇ ಸುಳ್ಳು ಮಾಹಿತಿ ಹಬ್ಬಿಸುವುದರಿಂದ ಒಂದು ದೇಶ. ಒಬ್ಬ ವ್ಯಕ್ತಿಯನ್ನು ಹಾಳು ಮಾಡಬಹುದು. ಹಾಗಾಗಿ ಸುಳ್ಳು ಸುದ್ದಿಗಳನ್ನು ಹರಡಬಾರದು ಮತ್ತು ನಂಬಬಾರದು ಎಂದು ಮಾತನಾಡಿದರು. ಪತ್ರಿಕೋದ್ಯಮದ ಮತ್ತು ಪತ್ರಕರ್ತರ ಕಾರ್ಯ ಶೈಲಿ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಪ್ರೊ.ರಾಜನಾರಾಯಣ ನಲವಡೆ ಅವರು ಪತ್ರಿಕೋದ್ಯಮ ಸದಾ ಕಾಲ ಸಮಾಜ ಮುಖಿ ಕಾರ್ಯ ನಿರ್ವಹಿಸಿದೆ. ಸ್ವತಂತ್ರ ಹೋರಾಟಗಾರರು. ಸಾಹಿತಿಗಳು. ಕರಪತ್ರ ರೂಪದಲ್ಲಿ ಪ್ರಕಟಣೆ ಮಾಡಿದ ಸಾಹಿತ್ಯ ಇಂದು ಸಮೂಹ ಮಾಧ್ಯಮ. ತಂತ್ರಜ್ಞಾನ ಬಳಕೆಯಿಂದ ಸಮಾಜವನ್ನು ಬದಲಿಸಿದೆ. ಪತ್ರಕರ್ತರಾದವರು ಸದಾ ಸಮಾಜದ ಓರೆ ಕೋರೆಗಳನ್ನು ತಿದ್ದುತ್ತಾ. ಸತ್ಯದ ಪರವಾಗಿ ಬರೆಯಬೇಕು ಎಂದು ಮಾತನಾಡಿದರು. ಹರಿಹಂತ ಸಂಸ್ಥೆಯ ಅಧ್ಯಕ್ಷರಾದ ಮಹಾವೀರ್ ಸಗರಿ. ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ.ಬಿ ಮಡವಡಗಿ. ಪ್ರಧಾನ ಕಾರ್ಯದರ್ಶಿ ರವೀಂದ್ರ ನಂದಪ್ಪನವರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭ ವಿದ್ಯಾರ್ಥಿನಿ ಭಾಗ್ಯಶ್ರೀ ಬಸವರಾಜ್ ಕುಂಬಾರ್ ವಿದ್ಯಾರ್ಥಿನಿಗೆ ಪ್ರತಿಭಾ ಪುರಸ್ಕಾರ ತಾಲೂಕು ಮಟ್ಟದ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿರುವ ಪತ್ರಕರ್ತರಾದ. ರಿಯಾಜ್ ಅಹ್ಮದ್ ಮುಲ್ಲಾ. ಹನುಮಂತ್ ಬೀರಗೊಂಡ್. ಈಶ್ವರ್ ಇಳಿಗೇರ್. ಹನುಮಂತ ಟಕ್ಕಳಕಿ. ಕೃಷ್ಣ ಕುಂಬಾರ್. ಅವರಿಗೆ ವಾರ್ಷಿಕ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ಬೆನ್ನೂರ್. ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಪುಲ್ ಸಗರಿ. ವೇದಿಕೆ ಮೇಲೆ ಇದ್ದರು. ಸಂಘದ ತಾಲೂಕು ಅಧ್ಯಕ್ಷ ಆರ್.ಬಿ ವಡವಡಗಿ. (ಮುತ್ತು) ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಸಿದ್ದು ಚಲವಾದಿ. ಕಂಜಾಚಿ ಲಾಡ್ಲೆ ಮಶಾಕ್ ನದಾಫ್. ಅಮೀನ್ ಸಾಬ್ ಮುಲ್ಲಾ. ಪುಂಡಲೀಕ್ ಮುರಾಳ. ಬಸವರಾಜ್ ಹುಲಗನ್ನಿ. ಮಹಿಬೂಬ್ ಹಳ್ಳೂರ್. ಅದೇ ವೇಳೆಯಲ್ಲಿ ಭಾಜಪಾ ಮಂಡಲ ಅಧ್ಯಕ್ಷರಾದ ಜಗದೀಶ್ ಪಂಪಣ್ಣವರ ಉಪಸ್ಥಿತರಿದ್ದರು. ಹಾಗೂ ಇನ್ನೂ ಅನೇಕ ಪತ್ರಕರ್ತರು ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button