ದೀಪಗಳ ಹಬ್ಬ ದೀಪಾವಳಿ…..

ಅಂಧಕಾರದ ಕಾರ್ಮೋಡದಲಿ
ದಿವ್ಯ ಚೇತನದ ಬೆಳಕು ಬೆಳಗಿಸಿ
ಅಜ್ಞಾನದ ಮೂಢನಂಬಿಕೆಯಲಿ
ಜ್ಞಾನದ ನಂಬಿಕೆಯ ಜ್ಯೋತಿ ಹೊತ್ತಿಸಿ
ಬೆಳಕಿನ ಹಬ್ಬ ದೀಪಾವಳಿಯ ಆಚರಿಸಿ
ಸುಳ್ಳು ಮಾತುಗಳ ಲೋಕದಲಿ
ಸತ್ಯದ ನುಡಿ ದೀಪ ಹತ್ತಿಸಿ
ಸ್ವಾರ್ಥ ತುಂಬಿದ ತಲೆಯಲಿ
ನಿಸ್ವಾರ್ಥದ ಜ್ಯೋತಿಯ ಬೆಳಕು ಮೂಡಿಸಿ
ದೀಪದಿಂದ ದೀಪವ ಹಚ್ಚಿ ದೀಪಾವಳಿಯ
ಆಚರಿಸಿ
ನೋವು ದುಃಖಗಳ ನಡುವಿನಲಿ
ಸುಖ ನೆಮ್ಮದಿಗಳ ದೀಪ ಹೆಚ್ಚಿಸಿ
ಕತ್ತಲೆಯ ಬದುಕಿನ ಮಧ್ಯದಲಿ
ಭವ್ಯ ಭವಿಷ್ಯದ ದೀಪವ ಕಾಣಿಸಿ
ದೀಪಗಳ ಹಬ್ಬವ ಸಂಭ್ರಮದಿ ಆಚರಿಸಿ
ಸದಾ ಸೋಲುಗಳ ನಡುವಿನಲಿ
ಗೆಲುವಿನ ಚಪ್ಪಾಳೆಯ ದೀಪ ಸ್ವೀಕರಿಸಿ
ದ್ವೇಷ ವೈಶಮ್ಯಗಳ ಆಕ್ರೋಶಗಳಲಿ
ಸ್ನೇಹ ಪ್ರೀತಿಯ ಜ್ಯೋತಿಯ ತೋರಿಸಿ
ಪಟಾಕಿಗಳ ಹಬ್ಬ ದೀಪಾವಳಿಯ ಆಚರಿಸಿ
ಅನ್ಯಾಯ ಅಕ್ರಮಗಳ ಜಗತ್ತಿನಲಿ
ನ್ಯಾಯ ನೀತಿಯ ದೀಪ ಬೆಳಗಿಸಿ
ಅಧರ್ಮ ಅಹಂಕಾರದ ಈ ದಿನದಲಿ
ಧರ್ಮ ಸೌಜನ್ಯದ ದೀಪ ಜಗಕೆ ತೋರಿಸಿ
ಈ ದಿನ ಈ ಕ್ಷಣ ನಲಿವಿನ ದೀಪಾವಳಿಯ
ಆಚರಿಸಿ
ಸರ್ವರಿಗೂ ದೀಪಾವಳಿ ಹಬ್ಬದ ಪ್ರೀತಿಯ
ಶುಭಾಶಯಗಳು…..
ಶ್ರೀ ಮುತ್ತು.ಯ.ವಡ್ಡರ
( ಶಿಕ್ಷಕರು, ಹಿರೇಮಾಗಿ)
ಬಾಗಲಕೋಟ
Mob-9845568484