ಇಂಗಳೇಶ್ವರ ಗ್ರಾಮಕ್ಕೆ ನಿವೃತ್ತ ಸೈನಿಕ ಆಗಮಿಸುವ ಹಿನ್ನೆಲೆ – ಬಾರಿ ವಿಜೃಂಭಣೆ ಯಿಂದ ಸ್ವಾಗತ.

ಇಂಗಳೇಶ್ವರ ಜು.31

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಬಸವ ಜನ್ಮ ಸ್ಥಳ ಇಂಗಳೇಶ್ವರ ಗ್ರಾಮದ ಅದೊಂದು ಬಡ ಕುಟುಂಬ ಕೂಲಿ ನಾಲಿ ಮಾಡಿ ಜೀವನ ನಡೆಸುತ್ತಿದ್ದ ಸಿದ್ದಪ್ಪ ಕಲಬುರ್ಗಿ. ಇವರು ಕೂಲಿ ಯಿಂದ ಬಂದ ಆದಾಯದಲ್ಲಿಯೇ ಜೀವನ ನಡೆಸುತ್ತಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಇವರಲ್ಲಿ ಹಿರಿಯ ಮಗ ತೀರಿ ಹೋಗಿದ್ದು ಕಿರಿಯ ಮಗನಾದ ಬೀರಪ್ಪ ಸಿದ್ದಪ್ಪ ಕಲಬುರ್ಗಿ ಇವರು ಭಾರತೀಯ ಸೇನೆಯಲ್ಲಿ ಸುದಿರ್ಘ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ನಿವೃತ್ತ ಹೊಂದಿ ಅವರ ಹುಟ್ಟೂರಾದ ವಿಜಯಪುರ ಜಿಲ್ಲೆಯ ಬಸವ ಜನ್ಮಸ್ಥಳ ಇಂಗಳೇಶ್ವರ ಗ್ರಾಮಕ್ಕೆ ಆಗಮಿಸುತ್ತಿದ್ದು ಅವರ ಆಗಮನಕ್ಕೆ ಇಂಗಳೇಶ್ವರವು ಗ್ರಾಮವು ಸಜ್ಜಾಗಿದೆ. ಬಡತನದ ಪರಿಸ್ಥಿತಿಯಲ್ಲಿ ಬೆಳೆದ ಇವರು ಬಾಲ್ಯದಲ್ಲಿಯೇ ಕುರಿ ಕಾಯುತ್ತಾ ಹೊರಟ ಇವರು ಶಾಲೆಯ ಕಡೆಗೆ ಮುಖ ಮಾಡದೇ ಇದ್ದರು. ಮುಂದೆ ಚಿನ್ನರಂಗಳ ಶಾಲೆ ಮುಖಾಂತರ ನೇರವಾಗಿ 5 ನೇ. ತರಗತಿಗೆ ಸೇರಿದರು.

5 ನೇ. ತರಗತಿಯಿಂದ 10 ನೇ. ತರಗತಿ ವರೆಗೆ ಸ್ವಗ್ರಾಮವಾದ ಇಂಗಳೇಶ್ವರದಲ್ಲಿ ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಸಿಂದಗಿಗೆ ಹೋಗಿ ಪಿಯುಸಿಯ ಮೊದಲ ವರ್ಷದಲ್ಲಿಯೇ ಇವರಿಗೆ ಸೈನ್ಯದಲ್ಲಿ ಭಾರತಾಂಬೆ ಸೇವೆ ಮಾಡುವ ಅವಕಾಶ ಲಭಿಸಿದ್ದರಿಂದ ಅವರು ಮುಂದಿನ ವಿದ್ಯಾಭ್ಯಾಸವನ್ನು ಮೊಟಕು ಗೊಳಿಸಿ ಭಾರತಾಂಬೆಯ ಸೇವೆಗೆ ಸಿದ್ದರಾಗಿ ಶಿಸ್ತಿನ ಸಿಪಾಯಿಯಾಗಿ ಸೇರಿಕೊಂಡು ತದ ನಂತರದ ದಿನಗಳಲ್ಲಿ ಎನ್.ಎಸ್‌.ಜಿ ಕಮಾಂಡರ್ ಆಗಿ ನೇಮಕವಾಗಿ ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿ ಹಲವು ಯುದ್ಧದ ಸನ್ನಿವೇಶಗಳಲ್ಲಿ ಪಾಲ್ಗೊಂಡು ಇದೀಗ ಭೀರಪ್ಪ ಸಿದ್ದಪ್ಪ ಕಲಬುರ್ಗಿ ಇವರು ಸೇವೆಯಿಂದ ನಿವೃತ್ತ ಹೊಂದಿದ್ದು ಅವರ ಸ್ವಗ್ರಾಮವಾದ ಇಂಗಳೇಶ್ವರಕ್ಕೆ ಇದೇ ಆಗಸ್ಟ್ 1 ರಂದು ಆಗಮಿಸುತ್ತಿದ್ದು ಊರಿನ ಗ್ರಾಮಸ್ಥರು ಸ್ನೇಹಿತರ ಬಳಗ ಯುವಕ ಮಿತ್ರರು ಕುಟುಂಬಸ್ಥರು ಹಾಗೂ ದೇಶಾಭಿಮಾನಿಗಳು ಬಸವನ ಬಾಗೇವಾಡಿ ಇಂದ ಸುಮಾರು 10 ಕಿ.ಮೀ ವರೆಗೆ ಬೈಕ್ ರ್ಯಾಲಿ ಮೆರವಣಿಗೆ ಮೂಲಕ ಅವರನ್ನು ಸ್ವಾಗತ ಕೋರಲಿದ್ದಾರೆ. ತದ ನಂತರ ಇಂಗಳೇಶ್ವರದ ಪ್ರಮುಖ ರಸ್ತೆಗಳಲ್ಲಿ ಭವ್ಯವಾದ ಮೆರವಣಿಗೆ ಹಮ್ಮಿಕೊಂಡಿದ್ದು.

ಮೆರವಣಿಗೆಯಲ್ಲಿ ವಿವಿಧ ಜನಪದ ಕಲಾತಂಡಗಳು ಹಾಗೂ ಶ್ರೀರಾಮ್ ಡಿಜೆ ಸೇರಿದಂತೆ ಗ್ರಾಮದ ಎಲ್ಲಾ ಶಾಲೆಯ ಮುದ್ದು ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದು ನಂತರ ಸಾಯಂಕಾಲ 5:00 ಗಂಟೆಗೆ ಬಸ್ ನಿಲ್ದಾಣದ ಆವರಣದಲ್ಲಿ ವಿಜೃಂಭಣೆಯಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು. ಇಂಗಳೇಶ್ವರ ಗ್ರಾಮದ ಎಲ್ಲ ಭಾರತಾಂಬೆಯ ಮಡಿಲಲ್ಲಿ ಸೇವೆ ಸಲ್ಲಿಸಿದ ಪುತ್ರರಿಗೆ ಹಾಗೂ ನಿವೃತ್ತ ಹೊಂದಿದ ಮಾಜಿ ಯೋಧರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಸಮಸ್ತ ಗುರು ಹಿರಿಯರು ಗ್ರಾಮಸ್ಥರು ಯುವಕ ಮಿತ್ರರು ಸ್ನೇಹಿತರ ಬಳಗ ಹಾಗೂ ದೇಶಾಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಗೊಳಿಸಬೇಕೆಂದು ಇಂಗಳೇಶ್ವರದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬನ್ನೇಪ್ಪ ಡೊಣೂರ ಅವರು ತಿಳಿಸಿರುತ್ತಾರೆ.

ತಾಲ್ಲೂಕು ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ. ಹಚ್ಯಾಳ.ದೇವರಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button