ಎಮ್.ಕೆ ಗುಡಿಮನಿ ಅವರಿಗೆ ರಾಷ್ಟ್ರ ಮಟ್ಟದ – ಭಾರತ ಸಿಂಧೂರ ಪ್ರಶಸ್ತಿ ಪ್ರಧಾನ.
ಢವಳಗಿ ಆ.01


ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದ ಗ್ರಾಮ ಪಂಚಾಯತಿ ದ್ವೀತಿಯ ದರ್ಜೆಯ ಲೆಕ್ಕ ಸಹಾಯಕರಾದ ಎಮ್.ಕೆ ಗುಡಿಮನಿ ಅವರು ಸಾಮಾಜಿಕ ಹಾಗೂ ಶೈಕ್ಷಣಿಕ ಮತ್ತು ಕ್ರೀಡೆಯ ಕ್ಷೇತ್ರದಲ್ಲಿ ಸಲ್ಲಿಸಿದ ಅಗಾಧ ಸೇವೆಯನ್ನು ಪರಿಗಣಿಸಿ ಶ್ರೀ ಮಹರ್ಷಿ ವಾಲ್ಮೀಕಿ ಗುರು ಪೀಠ ದೊಡ್ಡಬಳ್ಳಾಪುರ ಹಾಗೂ ಕರ್ನಾಟಕ ವಾಲ್ಮೀಕಿ ನೌಕರರ ಒಕ್ಕೂಟ(ರಿ) ರಾಜ್ಯ ಸಮಿತಿ ವತಿಯಿಂದ ಕಾರ್ಗಿಲ್ ಯುದ್ಧದ ಜಯದ ಅಂಗವಾಗಿ ವಿಜಯ ದಿವಸ್ ನಿಮಿತ್ತವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಮೆಳೇಗೋಟೆ ಕ್ರಾಸ್, ಮಹರ್ಷಿ ವಾಲ್ಮೀಕಿ ಗುರು ಪೀಠದ ಸಮುದಾಯ ಭವನದಲ್ಲಿ ಜುಲೈ 31 ರಂದು ಜರುಗಿದ.

ಕಾರ್ಯಕ್ರಮದಲ್ಲಿ ರಾಷ್ಟ್ರ ಮಟ್ಟದ ಭಾರತ್ ಸಿಂಧೂರ ಪ್ರಶಸ್ತಿಯನ್ನು ಪೀಠದ ಸ್ವಾಮೀಜಿಗಳು, ಗಣ್ಯರು, ರಾಜಕಾರಣಿಗಳ ಮತ್ತು ಕರ್ನಾಟಕ ವಾಲ್ಮೀಕಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಪಿ.ಮೋಹನ್ ಕಿಶೋರ್ ಅವರು ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದರು.
ವರದಿ:ಜಿ.ಎನ್ ಬೀರಗೊಂಡ.ಢವಳಗಿ.ಮುದ್ದೇಬಿಹಾಳ