ತುಳಸೀದಾಸರ ರಚನೆಗಳು ಭಕ್ತಿರಸ ಪ್ರಧಾನವಾದವು – ಮಾತಾಜೀ ಅಮೂಲ್ಯಮಯೀ ಅಭಿಮತ.
ಚಳ್ಳಕೆರೆ ಆ.01

ಸಂತ ತುಳಸೀದಾಸರು ರಚಿಸಿದ ರಾಮಚರಿತ ಮಾನಸ, ಹನುಮಾನ್ ಚಾಲೀಸಾ ಕೃತಿಗಳು ಭಕ್ತಿರಸ ಪ್ರಧಾನವಾದವು ಎಂದು ಹುಬ್ಬಳ್ಳಿಯ ಶ್ರೀಮಾತಾ ಆಶ್ರಮದ ಪೂಜ್ಯ ಮಾತಾಜೀ ಅಮೂಲ್ಯಮಯೀ ತಿಳಿಸಿದ್ದಾರೆ. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ “ಸಂತ ತುಳಸೀದಾಸರ ಜಯಂತ್ಯುತ್ಸವ” ದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ವಿಶೇಷ ಭಜನೆ ನಡೆಸಿ ಕೊಟ್ಟು ಅವರು ಆಶೀರ್ವಚನ ನೀಡಿದರು. ತುಳಸೀದಾಸರ ರಚನೆಗಳು ಅತ್ಯಂತ ಅದ್ಭುತವಾಗಿ ಮೂಡಿ ಬಂದಿದ್ದು ಅವು ನಮ್ಮಲ್ಲಿ ಭಕ್ತಿಯನ್ನು ಹೆಚ್ಚಿಸುತ್ತವೆ. ಆದ್ದರಿಂದ ಅವುಗಳ ನಿತ್ಯ ಪಾರಾಯಣ ಮಾಡಬೇಕು. ಅದರಿಂದ ಮನಃ ಶಾಂತಿ ಸಿಗುತ್ತದೆ. ಸಾಧಕರಿಗೆ ಸೇವೆಯೇ ಸಾಧನೆ ಯಾಗಬೇಕು, ವಿಷಯ ವಾಸನೆಗಳಿಂದ ದೂರವಿದ್ದು ಭಗವಂತನ ಸ್ಮರಣೆ ಮಾಡಬೇಕು ಎಂದು ಹೇಳಿದರು.

ಸತ್ಸಂಗದ ದಿವ್ಯ ಸಾನಿಧ್ಯವನ್ನು ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಮತ್ತು ನವಲಗುಂದದ ಶ್ರೀಶಾರದೇಶ್ವರಿ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಅನನ್ಯಮಯೀ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಸಿ.ಎಸ್ ಭಾರತಿ ಚಂದ್ರಶೇಖರ್, ಲಕ್ಷ್ಮೀ ವೆಂಕಟಾಚಲಂ, ನಳಿನ, ವಾಸವಿ ಸತ್ಯನಾರಾಯಣ, ಸುನೀತ ಗೋಪಾಲಕೃಷ್ಣ, ಮಾಕಂಸ್ ಲಕ್ಷ್ಮೀ, ಪ್ರೇಮಲೀಲಾ ರಾಮಣ್ಣ, ಕವಿತಾ ಗುರುಮೂರ್ತಿ, ವಿಜಯಲಕ್ಷ್ಮಿ, ಯತೀಶ್ ಎಂ ಸಿದ್ದಾಪುರ, ರಶ್ಮಿ ವಸಂತ, ಸರಸ್ವತಿ ಪಾಂಡು, ಮಂಜುಳ ಉಮೇಶ್, ಚೇತನ್, ಪುಷ್ಪಲತಾ, ಉಷಾ ಶ್ರೀನಿವಾಸ್, ನಾಗರಾಜ್, ಪಾಲಕ್ಕ, ಬೋರಣ್ಣ, ಗೀತಾ ವೆಂಕಟೇಶರೆಡ್ಡಿ, ಯಶಸ್ವಿ, ಸಂತೋಷ್, ಚೆನ್ನಕೇಶವ, ವನಜಾಕ್ಷಿ ಮೋಹನ್, ಮಾಣಿಕ್ಯ ಸತ್ಯನಾರಾಯಣ, ರತ್ನಮ್ಮ ಸೇರಿದಂತೆ ಸದ್ಭಕ್ತರು ಹಾಜರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.