ಭಕ್ತನಾದವನು ಅಪೇಕ್ಷೆ ರಹಿತ ನಾಗಿರಬೇಕು – ಮಾತಾಜೀ ಅಮೂಲ್ಯಮಯೀ.
ಚಳ್ಳಕೆರೆ ಜು.31

ನಿಜವಾದ ಭಕ್ತನಾದವನು ಅಪೇಕ್ಷೆ ರಹಿತ ನಾಗಿರಬೇಕು ಎಂದು ಹುಬ್ಬಳ್ಳಿಯ ಶ್ರೀಮಾತಾ ಆಶ್ರಮದ ಪೂಜ್ಯ ಮಾತಾಜೀ ಅಮೂಲ್ಯಮಯೀ ತಿಳಿಸಿದರು. ಚಳ್ಳಕೆರೆ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅವರ ಶಿವ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಆಯೋಜಿಸಿದ್ದ ವಿಶೇಷ ಸತ್ಸಂಗ ಸಭೆಯ ದಿವ್ಯ ಸಾನಿಧ್ಯ ವಹಿಸಿ ಅವರು “ಭಕ್ತನ” ಲಕ್ಷಣಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಭಕ್ತ ಹೆಸರು ಕೀರ್ತಿ ಗೌರವವನ್ನು ಬಯಸದೆ ಸರಳನಾಗಿರ ಬೇಕು. ವಿನಮ್ರತೆಯಿಂದ ಕೂಡಿರಬೇಕು. ಶ್ರೀರಾಮಕೃಷ್ಣರು ಮತ್ತು ಸ್ವಾಮಿ ವಿವೇಕಾನಂದರ ಮಧ್ಯೆ ನಾವು ಅನಂತ ಪ್ರೇಮದ ಪರಾಕಾಷ್ಠೆತೆಯನ್ನು ಕಾಣುತ್ತೇವೆ. ಆದ್ದರಿಂದ ಮಹಾತ್ಮರ ಜೀವನದ ಘಟನೆಗಳನ್ನು ಅವಲೋಕಿಸಿ ಅವರ ಸಂದೇಶಗಳನ್ನು ಅನುಸರಣೆ ಮಾಡಬೇಕು ಎಂದು ತಿಳಿ ಹೇಳಿದರು.

ಈ ಸತ್ಸಂಗದ ಪ್ರಯುಕ್ತ ನವಲಗುಂದದ ಶ್ರೀಶಾರದೇಶ್ವರಿ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಅನನ್ಯಮಯೀ ಅವರು ವಿಶೇಷ ಭಜನಾ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್, ಶಾಂತಮ್ಮ, ವಸಂತ, ಸುಮನಾ ಕೋಟೇಶ್ವರ್, ಮಂಜುಳ ಉಮೇಶ್, ಮಾಣಿಕ್ಯ ಸತ್ಯನಾರಾಯಣ, ಯತೀಶ್ ಎಂ ಸಿದ್ದಾಪುರ, ಭ್ರಮರಂಭಾ, ವನಜಾಕ್ಷಿ ಮೋಹನ್, ರಶ್ಮಿ ವಸಂತ, ಸಂಗೀತ ವಸಂತಕುಮಾರ್, ಕೃಷ್ಣವೇಣಿ ವೆಂಕಟೇಶ್, ವೀರಮ್ಮ, ಪಂಕಜ ಚೆನ್ನಪ್ಪ, ದ್ರಾಕ್ಷಾಯಣಿ, ಜಯಮ್ಮ, ಶಾರದಾಮ್ಮ, ಬಿ.ಟಿ ಗಂಗಾಂಬಿಕೆ, ವಿಶಾಲಾಕ್ಷಿ ಪುಟ್ಟಣ್ಣ, ಗೀತಾಲಕ್ಷ್ಮೀ, ವಿಜಯಲಕ್ಷ್ಮಿ, ಉಷಾ ಶ್ರೀನಿವಾಸ್, ಭಾಗ್ಯಲಕ್ಷ್ಮೀ, ವಿದ್ಯಾ ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.