ವಿವಿಧ ಕ್ಷೇತ್ರದ ಸಾಧಕರಿಗೆ ‘ನಿಜಸುಖಿ ಪ್ರಶಸ್ತಿ ಪ್ರಧಾನ’ ಜಿಲ್ಲಾ ಹಡಪದ ಸಮಾಜ – ಹಾಗೂ ನಿಜಸುಖಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ. ‌ ‌

ಕಲಬುರ್ಗಿ ಆ.02

‌ಕಲಬುರ್ಗಿ ನಗರದಲ್ಲಿ, ಹಡಪದ ಸಮಾಜದ ಜಿಲ್ಲಾಧ್ಯಕ್ಷರಾದ, ಶ್ರೀ ಈರಣ್ಣ.ಸಿ ಹಡಪದ್ ಸಣ್ಣೂರ್ ಅವರ, 41 ನೇ. ಹುಟ್ಟು ಹಬ್ಬ ಸಮಾರಂಭ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ‘ನಿಜಸುಖಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಹಾಗು ಉಚಿತವಾಗಿ ಆರೋಗ್ಯ ಶಿಭಿರ ಕಾರ್ಯಕ್ರಮ ಮಣ್ಣೂರ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ಆಡಳಿತ ಮಂಡಳಿಯ ವತಿಯಿಂದ ಆರೋಗ್ಯ ಶಿಭಿರ ಕಾರ್ಯಕ್ರಮ ನಡೆಸಲಾಯಿತು. ಹೀಗೆ ಸಮಾಜ ಮುಖಿ ಕಾರ್ಯಕ್ರಮವಾಗಿ ಆಚರಣೆ ಮಾಡಲಾಯಿತು. ದಿವ್ಯ ಸಾನಿಧ್ಯವನ್ನು, ಶ್ರೀ ಷ.ಬ್ರ ಸೋಮಶೇಖರ್ ಶಿವಾಚಾರ್ಯ ಮಹಾ ಸ್ವಾಮಿಗಳು ಕಂಬಳೇಶ್ವರ ಶ್ರೀಗಳು ವಹಿಸಿ 2025 ನೇ. ಸಾಲಿನ ಜಿಲ್ಲಾ ಹಡಪದ ಸಮಾಜ ಹಾಗೂ ಚಾರಿಟೇಬಲ್ ಟ್ರಸ್ಟ್ ವತಿಯಿಂದ. ವಿವಿಧ ಕ್ಷೇತ್ರದ ಸಾಧಕರಿಗೆ ‘ನಿಜಸುಖಿ ಪ್ರಶಸ್ತಿ ಪ್ರಧಾನ’ ಉಚಿತವಾಗಿ ಮಣ್ಣೂರ ಆಸ್ಪತ್ರೆಯ ವತಿಯಿಂದ ಆರೋಗ್ಯ ಶಿಬಿರ ಕಾರ್ಯಕ್ರಮ ಮತ್ತು ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಹರ ಮುನಿದರೂ ಸಹ ಗುರು ಮಾತ್ರ ಕಾಯುವನು ಎಂದರು. ಗುರು ಬಲದಿಂದ ಸರ್ವ ಕಾರ್ಯಗಳು ಸಕಲ ಸಿದ್ಧಿಯಾಗಲಿವೆ. ಸಂಘದ ಅಧ್ಯಕ್ಷ ಈರಣ್ಣ.ಸಿ ಹಡಪದ ಸಣ್ಣೂರ ಅವರು ಕೈಗೊಂಡಿರುವ ಸಮಾಜದ ಸಂಘಟನಾ ಹೋರಾಟ ಕಾರ್ಯಕ್ರಮಗಳ ಹಿಂದೆ ಗುರುಬಲ ಇದೆ. ಹೀಗಾಗಿ ಅವರು ಕೈಗೊಳ್ಳುವ ಎಲ್ಲ ಕೆಲಸ ಕಾರ್ಯಗಳು ಯಶಸ್ವಿ ಯಾಗಲಿವೆ. ಇಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯವಾಗಿವೆ. ಇಂತಹ ಕಾರ್ಯಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಜರುಗಲಿ ಎಂದು ಕಂಬಳೇಶ್ವರ ಮಠದ ಪೂಜ್ಯರು ಶುಭ ಹಾರೈಸಿದರು. ಸಂಘ ಕಟ್ಟುವುದು ಸುಲಭ. ಆದಾಗ್ಯೂ, ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಕಷ್ಟ. ಹಾಗಾಗಿ ಸುಮಾರು ವರ್ಷಗಳಿಂದ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜ ಸಂಘದ ಕಾರ್ಯ ಚಟುವಟಿಕೆಗಳು ಶ್ಲಾಘನೀಯ. ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿ ‘ನಿಜಸುಖಿ ಪ್ರಶಸ್ತಿ ಪ್ರಧಾನ’ ಮಾಡುವ ಮೂಲಕ ಇತರರಿಗೆ ಈರಣ್ಣ.ಸಿ ಹಡಪದ ಸಣ್ಣೂರ ಅವರು ಪ್ರೇರಣೆ ಹಾಗೂ ಸ್ಫೂರ್ತಿ ಆಗಿದ್ದಾರೆ. ಸಂಘ ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಯಲಿ ಎಂದು ಶ್ರೀ ಕಂಬಳೇಶ್ವರ ಶ್ರೀಗಳು ಅವರು ಹೇಳಿದರು. ಶಹಬಾದ ಶ್ರೀ ಭಾಲ ಬ್ರಹ್ಮಚಾರಿ ರಾಜಶಿವಯೋಗಿ ಶ್ರೀಗಳು, ಮತ್ತು ಶ್ರೀ ಷ.ಬ್ರ ಅಭಿನವ ಸಿದ್ದಲಿಂಗ ಶಿವಾಚಾರ್ಯ ಮಹಾ ಸ್ವಾಮಿಗಳು ಮುಗಳನಾಗಾಂವ ಪೂಜ್ಯರು ಮಾತನಾಡಿ ಅಭಿನಂದನೆ, ಸನ್ಮಾನ, ಸತ್ಕಾರಗಳು ವ್ಯಕ್ತಿಗೆ ಪ್ರೋತ್ಸಾಹಿಸುವುದರ ಜತೆಗೆ ಸಾಧನೆ ಮಾಡಲು ಸಮಾಜ ಮುಖಿ ಯಾಗಲು ಪ್ರೇರಣೆ ನೀಡುತ್ತದೆ ಎಂದು ಹೇಳಿದರು. ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಜಿಲ್ಲಾ ಹಡಪದ ಸಮಾಜ ಹಾಗೂ ನಿಜಸುಖಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ಕ್ಷೇತ್ರದ ಸಾಧಕರಿಗೆ ಸಮ್ಮಾನ ಕಾರ್ಯಕ್ರಮದ ದಿವ್ಯ ಸ್ಥಾನ ವಹಿಸಿ ಮಾತನಾಡಿದ ಅವರು ಹಲವಾರು ಅಡೆ ತಡೆಗಳನ್ನು ದಾಟಿಕೊಂಡು ಬಂದು ಸಾಧನೆ ಮಾಡಿದವರಿಗೆ ಯಾರೋ ಈ ರೀತಿ ಸನ್ಮಾನ ಮಾಡಿದಾಗ ಇನ್ನೂ ಒಂದಷ್ಟು ಒಳ್ಳೆಯ ಕೆಲಸ ಮಾಡಲು ಹುಮ್ಮಸ್ಸು ಬರುತ್ತದೆ ಮತ್ತು ಪ್ರಶಸ್ತಿ ಪಡೆದವರನ್ನು ನೋಡಿ ಯುವ ಜನರಿಗೂ ಸ್ಫೂರ್ತಿ ಬರುತ್ತದೆ. ಇದು ಶ್ಲಾಘನೀಯ ಕೆಲಸ ಎಂದು ಮುಗಳನಾಗಾಂವ ಪೂಜ್ಯರು ಬಣ್ಣಿಸಿದರು. ಮತ್ತು ಜ್ಯೋತಿ ಬೆಳಗಿಸಿದವರು ಕಲಬುರಗಿ ಗ್ರಾಮೀಣ ಮತ ಕ್ಷೆತ್ರದ ಬಿಜೆಪಿ ಶಾಸಕ ಶ್ರೀ ಬಸವರಾಜ ಮತ್ತಿಮೂಡ್, ಹಾಗೂ ಜ್ಯೋತಿ ಬೆಳಗಿಸಿದವರು.

ಕಲಬುರಗಿ ಉತ್ತರ ಮತ ಕ್ಷೇತ್ರದ ಬಿಜೆಪಿ ಜಿಲ್ಲಾಧ್ಯಕ್ಷರು ಚಂದು ಪಾಟೀಲ್, ಮತ್ತು ಅಧ್ಯಕ್ಷತೆ ಕಲಬುರಗಿ ಜಿಲ್ಲೆಯ ಗ್ರಾಮೀಣ ಮತ ಕ್ಷೇತ್ರದ ಬಿಜೆಪಿ ಜಿಲ್ಲಾಧ್ಯಕ್ಷರು ಅಶೋಕ ಬಗಲಿ ಹಾಗೂ ಕಲಬುರಗಿ ಜಿಲ್ಲೆಯ ಲೋಕಸಭಾ ಬಿಜೆಪಿ ಮಾಜಿ ಸಂಸದರು ಡಾ, ಉಮೇಶ್ ಜಾಧವ್. ಸೇಡಂ ತಾಲ್ಲೂಕು ಮಾಜಿ ಬಿಜೆಪಿ ಶಾಸಕರು ರಾಜಕುಮಾರ್ ಪಾಟೀಲ್ ತೇಲ್ಕೂರ, ಹಾಗೂ ಮುದ್ದೇಬಿಹಾಳ ಬಿಜೆಪಿ ಮಾಜಿ ಶಾಸಕರು ಎ.ಎಸ್ ನಡಹಳ್ಳಿ, ಮುಖ್ಯ ಅತಿಥಿಗಳು ಕಲಬುರಗಿ ಜಿಲ್ಲೆಯ ಬಸವ ಸಮಿತಿಯ ಜಿಲ್ಲಾಧ್ಯಕ್ಷರು ಡಾ, ವಿಲಾಸವತಿ.ಖೊಭಾ ತಾಯಿ, ಹಾಗೂ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರ ಶಿವರಾಜ್ ಪಾಟೀಲ ರದ್ದೇವಾಡ್ಗಿ. ಬಿಜೆಪಿ ಎಸ್ಸಿ ಮೂರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ್ ಅಷ್ಟಗಿ, ಬಿಜೆಪಿ ರಾಜ್ಯ ಓಬಿಸಿ ಪ್ರ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ. ಹಾಗೂ ನಾಗರಾಜ ಸರ್ಜಾಪೂರ. ಅಣ್ಣಾರಾವ ನರಿಬೋಳ. ಶಿವಪ್ಪ ವಾರಿಖ ಖಜೂರ್ಗಿ. ವಿಜಯಕುಮಾರ್ ತೇಗಲತಿಪ್ಪಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು. ಬಸವರಾಜ ಹಡಪದ ಸುಗೂರ ಎನ್ ಗೌರವಾಧ್ಯಕ್ಷರು. ಮಹಾತೇಶ ಕಲಕೇರಿ. ಬಸವರಾಜ ಗೆದ್ದಲಮರಿ. ಬಸವರಾಜ ಹಡಪದ ಹಳ್ಳಿ ‌ಶಹಾಬಾದ, ರಮೇಶ ಹಡಪದ ಮಲಕೂಡ, ಶಿವಶರಣ ಹಡಪದ ವಿಜಯಪುರ. ಅಶೋಕ ಹಡಪದ ವಿಜಯಪುರ. ಎಚ್.ಡಿ ವೈದ್ಯ ಬಾಗಲಕೋಟ. ಮುದ್ದಕಪ್ಪ ನಾವಿ, ದಶರಥ.ನಾವಿ ಶಿವಶರಣಪ್ಪ ಹಾಗರಗಿ, ಸುಭಾಶ ಸೊನ್ನ ಉದ್ಯಮಿಗಳು ಕಲಬುರಗಿ, ಶಿವಶರಣಪ್ಪ ಮಾಸ್ತರ ಯಳವಂತಗಿ. ರಮೇಶ್ ಹಡಪದ ನೀಲೂರ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಜಿಲ್ಲಾ ಉಪಾಧ್ಯಕ್ಷ ರುದ್ರಮಣಿ ಅಪ್ಪಣ್ಣ ಬಟಗೇರಾ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ.ಬಿ ಹಡಪದ ಸುಗೂರ ಎನ್. ಮಹಾತೇಶ ಇಸ್ಲಾಂಪೂರೆ. ಸಂತೋಷ ಬಗದುರಿ. ನಿಂಗಣ್ಣಾ ಯಾತನೂರ, ಆನಂದ ಖೇಳಗಿ. ಮಹಾದೇವ ರಾವೂರ, ಮಲ್ಲಿಕಾರ್ಜುನ ಸಾವಳಗಿ, ಶಿವಾನಂದ ಬಬಲಾದಿ, ಸುನೀಲ್ ಕುಮಾರ್ ಭಾಗಹಿಪ್ಪರಗಾ, ಮಲ್ಲಿಕಾರ್ಜುನ ಬನ್ನೂರ, ಚಂದ್ರಶೇಖರ ತೊನಸನಹಳ್ಳಿ. ವಿನೋದ ಅಂಬಲಗಾ, ಪ್ರಕಾಶ ಕಟ್ಟಿಮನಿ ಕಲಬುರಗಿ, ಚನ್ನಪ್ಪ ಊಡಗಿ. ಶಿವಕುಮಾರ ಹಡಪದ ಮಂಜುನಾಥ ಅವರಾದ, ಶರಣು ಹರವಾಳ. ನಾಗರಾಜ ಕುರುಕೋಡ ಬಳ್ಳಾರಿ. ದತ್ತಾತ್ರೇಯ ಭಾಂಧೇಕರ್. ಮಲ್ಲಿಕಾರ್ಜುನ ಕುಳಗೇರಿ. ಭಾಗಣ್ಣ ಇಟಗಿ. ರಾಜಕುಮಾರ ಚಿಟ್ಟಗುಪ್ಪಾ. ತಿಪ್ಪಣ್ಣ ಹಡಪದ ನರಿಬೋಳ. ವಿಜಯಕುಮಾರ್ ಕಮಲಾಪುರ‌. ಸಂತೋಷ ಹಡಪದ ಚಿಂಚ್ಚೊಳಿ. ಹಾಗೂ ಶ್ರೀಮಂತ ಮಳಗಿ ಕಾಳಗಿ, ಮತ್ತು ಸಿದ್ರಾಮ ಹಡಪದ ಯಾಗಾಪೂರ. ಶಂಕರ ಹಡಪದ ಆಳಂದ ,ಮಹಾಂತೇಶ ಹಡಪದ ಹವಳಗಾ ಅಫಜಲಪುರ.ಶರಣು ಹಡಪದ ಕೊಲ್ಲೂರು. ರಾಚ್ಚಪ್ಪ ಬಸವಕಲ್ಯಾಣ ಹೀಗೆ ಅನೇಕ ತಾಲ್ಲೂಕು ಭಾಗವಹಿಸಿದರು. ಮಲ್ಲಿಕಾರ್ಜುನ ಕಿಳ್ಳಿ ಜಯ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರು. ಮಲ್ಲಿಕಾರ್ಜುನ ಹಡಪದ ಸೊನ್ನ‌. ಶಿವಕುಮಾರ ಹಡಪದ ಹೂನ್ನಗೇರಿ.ಶಿವಕುಮಾರ ಸಿಂದಗಿ. ಶಂಕರ್ ಹರವಾಳ. ಮಲ್ಲಿಕಾರ್ಜುನ ಬೆಳಗುಪ್ಪಿ ಶಿವಪುತ್ರ ನೆಲ್ಲೂಗಿ. ಹಾಗೂ ಅನೇಕ ಬಿಜೆಪಿ ಪಕ್ಷದ ಕಾರ್ಯಕರ್ತರು. ಸಮಾಜದ ಹಿರಿಯರು. ಯುವಕ ಮಿತ್ರರು. ಮಹಿಳಾ ತಾಯಂದಿರು. ಅನೇಕರು ಮುಖ್ಯ ಈ ವಿವಿಧ ಕ್ಷೇತ್ರದ ಸಮಾಜ ಮುಖಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಹಾಗೇಯೆ ನಿಜಸುಖಿ ಪ್ರಶಸ್ತಿ ವಿವಿಧ ಕ್ಷೇತ್ರದ ಸಮಾಜದ ಬಂಧುಗಳು ಸ್ವೀಕರಿಸಿದರು. ಜಿಲ್ಲಾ ಕಾರ್ಯಾಧ್ಯಕ್ಷರಾದ ಭಗವಂತ ಹಡಪದ ಹೊನ್ನಕಿರಣಗಿ ಅವರು ನಿರೂಪಣೆ ಮಾಡಿದರು. ನಿಮ್ಮ ಹಡಪದ ಅಪ್ಪಣ್ಣ ಸಮಾಜದ ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಗಳು ಮಲ್ಲಿಕಾರ್ಜುನ.ಬಿ ಹಡಪದ.ಸುಗೂರ ಎನ್ ಈ ಸಮಾಜ ಮುಖಿ ಕಾರ್ಯಕ್ರಮ ಯಶಸ್ವಿ ಯಾಗಿ ಕಾರ್ಯ ನಿರ್ವಹಿಸಲು ಸಹಕರಿಸಿ ಸಮಾಜದ ಎಲ್ಲಾ ಮುಖಂಡರಿಗೆ ಪ್ರತ್ಯೇಕವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ತಮ್ಮೆಲ್ಲರಿಗೊ ಹೃತ್ಪೂರ್ವಕ ಅನಂತ ಧನ್ಯವಾದಗಳು. ಎಂದು ಈ ಪತ್ರಿಕೆಯ ಮೂಲಕ ಪ್ರಕಟಣೆಗೆ ನೀಡಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button