ತಾಲೂಕ ಆಡಳಿತ, ತಾಲೂಕ ಪಂಚಾಯತ ಹಾಗೂ ನಗರ ಸಭೆ ಇಲಕಲ್ಲ ಸಂಯುಕ್ತ ಆಶ್ರಯದಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ – ವ್ಯಸನ ಮುಕ್ತ ದಿನಾಚರಣೆ ಜರುಗಿತು.
ಇಲಕಲ್ಲ ಆ.02

ಇಲ್ಲಿನ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ ಹಾಗೂ ನಗರ ಸಭೆ ಇಳಕಲ್ಲ ಸಂಯುಕ್ತ ಆಶ್ರಯದಲ್ಲಿ ತಹಶೀಲ್ದಾರ ಕಚೇರಿಯಲ್ಲಿ ವ್ಯಸನ ಮುಕ್ತ ದಿನಾಚರಣೆ ಮಾಡಲಾಯಿತು. ಮಹಾಂತ ಜೋಳಿಗೆಯ ಹರಿಕಾರರು, ಕರ್ನಾಟಕ ಸರ್ಕಾರದ ಸಂಯಮ ಪ್ರಶಸ್ತಿಗೆ ಭಾಜನರಾದ ಶ್ರೀ ಮಠದ ಲಿಂಗೈಕ್ಯ ಶ್ರೀ ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆಯನ್ನು ಕರ್ನಾಟಕ ಸರ್ಕಾರ ಪ್ರತಿ ವರ್ಷ ಆಗಷ್ಟ 1 ರಂದು ವ್ಯಸನ ಮುಕ್ತ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.

ಈ ಸಂದರ್ಭದಲ್ಲಿ ನಗರ ಸಭೆಯ ಅಧ್ಯಕ್ಷೆಯಾದ ಶ್ರೀಮತಿ ಸುಧಾರಾಣಿ ಸಂಗಮ ಮಹಾಂತ ಶಿವಯೋಗಿಗಳ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ. “ಇಂದು ಯುವಕರಲ್ಲಿ ದುಶ್ಚಟಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಯುವ ಜನಾಂಗ ತಪ್ಪು ದಾರಿಗೆ ಹೋಗುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ವ್ಯಸನ ಮುಕ್ತ ದಿನಾಚರಣೆಯ ಮೂಲಕ ಎಲ್ಲರೂ ಪ್ರಯತ್ನಿಸ ಬೇಕೆಂದರು”.

ಅಕ್ಕನ ಬಳಗದ ಸದಸ್ಯೆಯರು ಮಾತನಾಡಿ ಮಹಾ ತಪಸ್ವಿಯಾದ ಮಹಾಂತ ಶಿವಯೋಗಿಗಳು ಯಾವುದೇ ಫಲಾಪೇಕ್ಷೆ ಇಲ್ಲದೇ ಇಡೀ ರಾಜ್ಯದಾದ್ಯಂತ ಸಂಚರಿಸಿ ಮಹಾಂತ ಜೋಳಿಗೆಯ ಮೂಲಕ ಸಮಾಜದಲ್ಲಿನ ದುಶ್ಚಟಗಳನ್ನು ಹೋಗಲಾಡಿಸಲು ಶ್ರಮಿಸಿದರು ಎಂದರು.ತಾಲೂಕಾ ದಂಡಾಧಿಕಾರಿಗಳಾದ ಅಮರೇಶ ಪಮ್ಮಾರ ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಪ್ರತಿಜ್ಞಾ ವಿಧಿ ಭೋದಿಸಿದರು. ಈ ಸಂದರ್ಭದಲ್ಲಿ ತಾಲೂಕಾ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ಬಸವ ಕೇಂದ್ರದ ಸದಸ್ಯರು, ಅಕ್ಕನ ಬಳಗದ ಮಾತೆಯರು ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಅಬ್ದುಲ್.ಗಫಾರ್.ತಹಶೀಲ್ದಾರ್.ಇಲಕಲ್ಲ