ಶ್ರೀಶಾರದಾಶ್ರಮದಲ್ಲಿ ವೇದಾಂತದ – ಕಥೆಗಳ ಪ್ರವಚನ ಮಾಲಿಕೆ.
ಚಳ್ಳಕೆರೆ ಆ.02

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಸ್ವಾಮಿ ಚೇತನಾನಂದರು ಬರೆದಿರುವ “ವೇದಾಂತದ ಕಥೆಗಳು” ಎಂಬ ಪುಸ್ತಕದ ಕುರಿತಾಗಿ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರು ಪ್ರವಚನ ನೀಡಿದರು. ಈ ಪುಸ್ತಕವು ಶ್ರೀರಾಮಕೃಷ್ಣ ಪರಮಹಂಸರ ನೇರ ಸಂನ್ಯಾಸಿ ಶಿಷ್ಯರ ನಂತರ ಬಂದ ಎರಡನೇ ತಲೆಮಾರಿನ ಸಂನ್ಯಾಸಿ ಶಿಷ್ಯರ ಜೀವನದ ಅಪರೂಪದ ಘಟನೆಗಳನ್ನು ಕಟ್ಟಿಕೊಡುತ್ತವೆ ಎಂದರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ ಮತ್ತು ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು. ಪ್ರವಚನ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಅಂಬುಜಾ, ರಶ್ಮಿ ವಸಂತ, ಸಿ.ಎಸ್ ಭಾರತಿ, ಯಶಸ್ವಿ, ಸುಧಾಮಣಿ, ಕವಿತಾ ಗುರುಮೂರ್ತಿ, ಯತೀಶ್ ಎಂ ಸಿದ್ದಾಪುರ, ನಾಗರಾಜ್, ಉಷಾ ಶ್ರೀನಿವಾಸ್, ಗೀತಾ ವೆಂಕಟೇಶರೆಡ್ಡಿ, ಸುಮನಾ ಕೋಟೇಶ್ವರ, ಸುದೀಪ್ ಚೇತನ್, ಚೆನ್ನಕೇಶವ, ಕಾವೇರಿ ಸುರೇಶ್,ಲಕ್ಷ್ಮೀ, ಪುಷ್ಪಲತಾ ಸೇರಿದಂತೆ ಸದ್ಭಕ್ತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.