ಒಳ ಮೀಸಲಾತಿ ಜಾರಿಗಾಗಿ ತೀವ್ರ ಸ್ವರೂಪ ಹೋರಾಟ ಹಾಗೂ – ತಹಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಕೆ.
ಮುದ್ದೇಬಿಹಾಳ ಆ.02

ರಾಜ್ಯದಲ್ಲಿ ಒಳ ಮೀಸಲಾತಿಯನ್ನು ತಕ್ಷಣ ಜಾರಿ ಗೊಳಿಸಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಜಿಲ್ಲಾ ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳ ಒಳ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ಇಲ್ಲಿ ತಮಟೆ ಚಳುವಳಿ ಮೆರವಣಿಗೆ, ಪ್ರತಿಭಟನೆ ನಡೆಯಿತು.ಒಳ ಮೀಸಲಾತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪು ಪ್ರಕಟಿಸಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಅಂಬೇಡ್ಕರ್ ವೃತ್ತದಿಂದ ಈ ಪ್ರತಿಭಟನೆ ಹಮ್ಮಿ ಕೊಳ್ಳಲಾಯಿತು. ಮರೆವಣಿಗೆ ಮುಖಾಂತರ ಬಸವೇಶ್ವರ ವೃತ್ತಕ್ಕೆ ತೆರಳಿದ ಪ್ರತಿಭಟನೆ ಮುಖಾಂತರ ಸರಕಾರದ ಶವ ಯಾತ್ರೆಯ ದಹನ ಮಾಡುವ ಮುನ್ಸೂಚನೆ ನೀಡಿದ್ದರಿಂದ ಕೆಲಕಾಲ ಪೋಲಿಸ್ ಹಾಗೂ ಹೋರಾಟಗಾರ ಮಧ್ಯೆ ಮಾತಿನ ಚಕಮಕಿ ನಡೆಯಿತು. ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಮುಖಂಡರ ನೇತೃತ್ವದಲ್ಲಿ ನಡೆದ ಮೆರವಣಿಗೆ ಯುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲಾಯಿತು. ರಾಜ್ಯಾದಾದ್ಯಂತ ಹೋರಾಟವನ್ನು ತೀವ್ರ ಗೊಳಿಸುವ ಎಚ್ಚರಿಕೆ ನೀಡಲಾಯಿತು. ನಂತರ ಪೋಲಿಸ್ ಇಲಾಖೆಯವರು ಸರಕಾರದ ಶವ ಯಾತ್ರೆಯನ್ನು ವಶಕ್ಕೆ ಪಡೆದ್ದನ್ನು ಖಂಡಿಸಿ ದಲಿತ ಸಂಘಟನೆಗಳ ಸದಸ್ಯರು ಹೈಡ್ರಾಮ್ ನಡೆಯಿತು. ಪ್ರತಿಭಟನೆಕಾರರ ಮನ ಒಲಿಸಿದ ಪೋಲಿಸ್ ಇಲಾಖೆಯವರು ನಿಯಮದ ಅಡಿಯಲ್ಲಿ ಪ್ರತಿಭಟನೆ ಮಾಡಿ ಎಂದು ತಿಳಿಹೇಳಿ ತಹಶೀಲ್ದಾರ್ ಕಾರ್ಯಲಯಕ್ಕೆ ತಿಳಿಸಿದರು.ನಂತರ ತಹಶೀಲ್ದಾರ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ನ್ಯಾಯವಾದಿ ಕೆ.ಬಿ ದೊಡಮನಿ, ಮಂಜುನಾಥಸ್ವಾಮಿ ಕುಂದರಗಿ, ಪ್ರಭುರಾಜ್ ಕೊಡ್ಲಿ ಮಾತನಾಡಿ ಸುಮಾರು 35 ವರ್ಷಗಳ ನಿರಂತರ ಹೋರಾಟವನ್ನು ಹತ್ತಿಕ್ಕುವ ಕಾರ್ಯ ಎಲ್ಲಾ ಪಕ್ಷದವರು ಮಾಡುತ್ತಿರುವುದು ಖಂಡನೀಯ ಸಧ್ಯ ನಮ್ಮ ಹೋರಾಟವನ್ನು ತೀವ್ರ ಗೊಳಿಸಿದ್ದರ ಹಿನ್ನೆಲೆಯನ್ನು ತಿಳಿಸಿ. ಸರ್ಕಾರದ ವಿಳಂಬ ನೀತಿಯನ್ನು ಇನ್ನಷ್ಟು ಸಹಿಸಲು ಸಾಧ್ಯವಿಲ್ಲ, ತಕ್ಷಣ ಒಳ ಮೀಸಲಾತಿ ಜಾರಿಗೆ ತರಬೇಕು, ತರದೇ ಇದ್ದರೆ ಮುಂದಿನ ದಿನಗಳಲ್ಲಿ ರಕ್ತಚೆಲ್ಲಿ ಯಾದರು ಒಳ ಮೀಸಲಾತಿಯನ್ನು ಪಡೆದುಕೊಳ್ಳಲು ನಾವು ತಯಾರಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮುಖಂಡರಾದ ಮಾರುತಿ ಸಿದ್ದಾಪೂರ, ಬಾಲಚಂದ್ರ ಹುಲ್ಲೂರ, ಚನ್ನಯ್ಯಾ ಮಾದರ, ಶೇಖು ಆಲೂರ, ಆನಂದ ಮುದೂರ ಮಾತನಾಡಿದರು. ಮುತ್ತು ಪೂಜಾರಿ, ಆನಂದ ಗಂಗೂರ, ಮಲ್ಲಪ್ಪ ಬಸರಕೋಡ, ಬಸಪ್ಪ ಕವಡಿಮಟ್ಟಿ, ಮಹಾದೇವ ಶಾಂತಗಿರಿ, ರಾಘವೇಂದ್ರ ಮಾದರ, ಶಿವಪ್ಪ ಸಿದ್ದಾಪೂರ ನೀಲಪ್ಪ ಸಿದ್ದಾಪೂರ, ಡಿ ಡಿ ಯರಝೇರಿ. ಮುತ್ತು ಅಮರಗೊಳ, ಮಾರುತಿ ಧನ್ನೂರ ಕಾಳಪ್ಪ ಅರ್ಜಿ, ಪ್ರಭು ತಳಗೆ, ಲಕ್ಷ್ಮಣ ಕಾಳಗಿ, ಪರಶುರಾಮ ನಾಗೂರ, ಶಂಕ್ರಪ್ಪ ತಂಗಡಗಿ, ಬಸವರಾಜ ಅರಸನಾಳ, ರವಿ ಬಸರಕೋಡ, ಮಾಯಮ್ಮ ಮಾದರ, ಶಿಲ್ಪಾ ಮಾದರ, ನೀಲಮ್ಮ ಮಾದರ. ಕುಮಾರಿ ಶ್ರಾವಣಿ ಸಿದ್ದಾಪೂರ, ಹಣಮಂತ ಮಾದರ ಇದ್ದರು ಈ ಸಂಧರ್ಭದಲ್ಲಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಕಳುಹಿಸಿ ಕೊಡಲಾಯಿತು.
ವರದಿ:ಜಿ.ಎನ್ ಬೀರಗೊಂಡ (ಮುತ್ತು) ಢವಳಗಿ