ಸರ್ಕಾರದ ಅಣಕು ಶವ ಯಾತ್ರೆಗೆ ದೊರೆಯದ ಅವಕಾಶ, ಒಳ ಮೀಸಲಾತಿ ಜಾರಿಗಾಗಿ – ಮಾದಿಗ ಸಮುದಾಯದಿಂದ ಪ್ರತಿಭಟನೆ.
ಮುದ್ದೇಬಿಹಾಳ ಆ.02

ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿಯಿಂದ ಶುಕ್ರವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಸರ್ಕಾರದ ಅಣಕು ಯಾತ್ರೆಗೆ ಪೊಲೀಸರು ಅವಕಾಶ ಮಾಡಿ ಕೊಡಲಿಲ್ಲ. ಆದರೆ ಪ್ರತಿಭಟನಾಕಾರರು ಅಂಬೇಡ್ಕರ್ ಸರ್ಕಲ್ ನಿಂದ ತಹಶೀಲ್ದಾರ್ ಕಚೇರಿ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು. ವಕೀಲ ಕೆ.ಬ ದೊಡಮನಿ. ಮಾತನಾಡಿ. ಆಳುವ ಸರ್ಕಾರಗಳು ಸಾರ್ವಜನಿಕ ನ್ಯಾಯ ಕೊಟ್ಟಿಲ್ಲ ಸುಪ್ರೀಂಕೋರ್ಟ್ ನಿರ್ದೇಶನ ಇದ್ದರೂ ಸಿ.ಎಂ ಸಿದ್ದರಾಮಯ್ಯ ಅಹಿಂಧ ನಾಯಕ. ಶೋಷಿತ ಸಮುದಾಯದ ಪರ ಎಂದು ಹೇಳುತ್ತಾ ಮೇಲ್ವರ್ಗದ ಗುಲಾಮರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸಂಸದ ಗೋವಿಂದ್ ಕಾರಜೋಳ್ ಅವರು ತಮ್ಮ ಸರ್ಕಾರ ಇದ್ದಾಗ ಏನು ಮಾಡಿದ್ದಾರೆ ಎನ್ನುವುದನ್ನು ತಿಳಿದು ಕೊಳ್ಳಲಿ. ನಮ್ಮ ಸಮಾಜದ ಎಂಎಲ್ಎ ಎಂಪಿಗಳು ಸಮಾಜವನ್ನು ಸರ್ಕಾರಗಳ ಮುಂದೆ ಅಡ ಇಟ್ಟಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖಂಡ ಮಾರುತಿ ಸಿದ್ದಾಪುರ ಮಾತನಾಡಿ. ಮೀಸಲಾತಿ ಹೆಸರಿನಲ್ಲಿ ಬಲಾಢ್ಯ ಸಮುದಾಯದವರು ಸೌಲಭ್ಯಗಳನ್ನು ಪಡೆದು ಕೊಳ್ಳುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಕೊಟ್ಟ ಆಶ್ವಾಸನೆಯನ್ನು ಈಡೇರಿಸಲು ಈ ಸರಕಾರಕ್ಕೆ ಆಗಿಲ್ಲ. ರಾಜಕಾರಣಿಗಳು ನಮ್ಮ ಸಮುದಾಯದ ಪರ ಇಲ್ಲ. ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ತಮ್ಮದೇ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ ಒಳ ಮೀಸಲಾತಿ ಜಾರಿಗೆ ಮುಂದಾಗಬೇಕು. ಒಳ ಮೀಸಲು ಜಾರಿ ಬಗ್ಗೆ ಖರ್ಗೆ ರಾಹುಲ್ ಹೆಸರು ಹೇಳಿದರೆ. ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಹೆಸರು ಹೇಳುತ್ತಾರೆ. ಒಬ್ಬರ ಮೇಲೊಬ್ಬರು ಹೇಳುತ್ತಾ ಒಳ ಮೀಸಲು ಕಲ್ಪಿಸುವುದಕ್ಕೆ ವಿಳಂಬ ಮಾಡುತ್ತಿದ್ದಾರೆ ಎಂದು ದೂರಿದರು. ಮುಖಂಡ ದುರ್ಗಪ್ಪ ದೊಡಮನಿ ಮಾತನಾಡಿ. ಸಂವಿಧಾನದ ಆಶಯದಂತೆ ರಾಜ್ಯ ಸರ್ಕಾರ ನಡೆದು ಕೊಳ್ಳುತ್ತಿಲ್ಲ. ನಮ್ಮ ಸಮುದಾಯಕ್ಕೆ ನಿಜವಾದ ನಾಯಕರು ಮಾತ್ರ ಹೋರಾಟಕ್ಕೆ ಬರಲಿ. ಒಳ ಮೀಸಲು ಪರ ಎನ್ನುತ್ತಾ ಬ್ರಿಟಿಷರಂತೆ ಕೆಲವರು ನಡೆದು ಕೊಳ್ಳುತ್ತಿದ್ದಾರೆ. ಮಾದಿಗ ಸಮುದಾಯವನ್ನು ಕಳೆದು 35 ವರ್ಷಗಳಿಂದ ವಂಚಿಸಿದ್ದಾರೆ ಎಂದು ದೂರಿದರು. ಮುಖಂಡರಾದ ಬಾಲಚಂದ್ರ. ಶೇಖಪ್ಪ ಮಾದರ್. ಆನಂದ ಮುದುರ್. ಮಾತನಾಡಿದರು. ತಸಿಲ್ದಾರ್ ಕೀರ್ತಿ ಚಾಲಕ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ವಕೀಲರಾದ ಪಿ.ಬಿ ಮ್ಯಾಗೇರಿ ಮನವಿ ಪತ್ರ ಓದಿದರು. ವಕೀಲ ಮಹೇಶ್ ದೊಡ್ಡಮನಿ. ರಮೇಶ್ ತಳವಾರ್. ಮಲ್ಲಪ್ಪ ಬಸರಕೋಡ್ .ನೀಲಪ್ಪ ಸಿದ್ದಾಪುರ. ಡಿ.ಡಿ ಯರ್ಜರಿ. ಮುತ್ತು ಅಮರಗೋಳ. ಮಾರುತಿ ದನ್ನೂರ. ಕಾಳಪ್ಪ ಅರ್ಜಿ. ಪ್ರಭು ತಳಗೆ. ಲಕ್ಷ್ಮಣ ಕಾಳಗಿ. ಮುತ್ತು ಸಿದ್ದಾಪುರ. ಶಂಕ್ರಪ್ಪ ತಂಗಡಿಗಿ. ಬಸವರಾಜ್ ಅರಸ್ನಾಳ್. ಮಾಯಮ್ಮ ಮಾದರ್. ಶಿಲ್ಪಾ ಮಾದರ್. ನೀಲಮ್ಮ ಮಾದರ. ಇದ್ದರು. ಮುಂಜಾಗ್ರತ ಕ್ರಮವಾಗಿ ಸಿಪಿಐ ಮಮ್ಮದ್ ಪಸಿವುದಿನ್. ಪಿ.ಎಸ್.ಐ ಸಂಜಯ್ ತಿಪ್ಪಾರೆಡ್ಡಿ. ತಮ್ಮ ಸಿಬ್ಬಂದಿಯೊಂದಿಗೆ ಭದ್ರತೆ ಒದಗಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ