ಸಜ್ಜನ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ವ್ಯಸನ ಮುಕ್ತ ಕಾರ್ಯಕ್ರಮ ನಿಮಿತ್ತವಾಗಿ – ಶಾಲಾ ಮಕ್ಕಳಿಂದ ವೇಷ ಭೂಷಣ ತೊಟ್ಟು ಗಮನ ಸೆಳೆದರು.
ಇಲಕಲ್ಲ ಆ.02

ಇಲ್ಲಿನ ಸಜ್ಜನ ವಿಧ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಸಜ್ಜನ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಚನ ಸ್ಪರ್ಧೆಯಲ್ಲಿ ಉಮ್ಮೇರುಮಾನಾ ತಹಶೀಲ್ದಾರ ದ್ವಿತೀಯ ಬಹುಮಾನ ಪಡೆದಿದ್ದಾಳೆ.ಶ್ರೀ ಮಠದ ಮಹಾಂತ ಜೋಳಿಗೆಯ ಹರಿಕಾರ, ಕರ್ನಾಟಕ ಸರ್ಕಾರದ ಸಂಯಮ ಪ್ರಶಸ್ತಿಗೆ ಭಾಜನರಾದ ಮಹಾಂತ ಶ್ರೀ ಶಿವಯೋಗಿಗಳ ಜನ್ಮ ದಿನದಂದು ವ್ಯಸನ ಮುಕ್ತ ದಿನಾಚರಣೆ ಅಂಗವಾಗಿ ಶ್ರೀ ವಿಜಯ ಮಹಾಂತೇಶ ಸಂಸ್ಥಾನ ಮಠ ಇಳಕಲ್ಲ ಏರ್ಪಡಿಸಿದ ವಚನ ಸಾಹಿತ್ಯವನ್ನು ಕಂಠ ಪಾಠ ಮಾಡಿ ಹೇಳುವದರಲ್ಲಿ ಪ್ರಶಸ್ತಿ ಪಡೆದಿದ್ದಾಳೆ. ಮತ್ತು ಇದೇ ಸಂದರ್ಭದಲ್ಲಿ ಮಕ್ಕಳು ಮಹಾಂತ ಶಿವಯೋಗಿಗಳ ವೇಶ ಭೂಷಣ ತೊಟ್ಟು ಗಮನ ಸೆಳೆದರು. ಎಳೆಯ ಪ್ರತಿಭೆಗಳಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.
ಜಿಲ್ಲಾ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಅಬ್ದುಲ್.ಗಫಾರ್.ತಹಶೀಲ್ದಾರ್.ಇಲಕಲ್ಲ