ಪಟ್ಟಣದ ಪ್ರಗತಿ ಪರ ಒಕ್ಕೂಟದ ವತಿಯಿಂದ ರಸ್ತೆಗಾಗಿ ಹೋರಾಟ 12 ನೇ. ದಿನದ ವೇದಿಕೆಗೆ – ಭೇಟಿ ನೀಡಿ ಭರವಸೆ ನೀಡಿದರು.
ಆಲಮೇಲ ಆ.03

ಆಲಮೇಲ ಪಟ್ಟಣದ ಪ್ರಗತಿ ಪರ ಒಕ್ಕೂಟದ ವತಿಯಿಂದ ರಸ್ತೆಗಾಗಿ ಹೋರಾಟ 12 ನೇ. ದಿನದ ವೇದಿಕೆಗೆ ಆಗಮಿಸಿದ ಸಿಂದಗಿ ಮತ ಕ್ಷೇತ್ರದ ಶಾಸಕ ಅಶೋಕ್ ಮನಗೂಳಿ ಮಾತನಾಡಿ ಶ್ರೀ ಹಜರತ್ ಪಿರಗಾಲಿ ಸಾಹೇಬರ ದರ್ಗಾಕ್ಕೆ ಹಾಗೂ ಹಲವು ಸಮಾಜಗಳಿಗ ಸ್ಮಶಾನ ಭೂಮಿಗೆ ಹೋಗುವ ರುಕುಂಪುರ್ ರಸ್ತೆಯ ಹೋರಾಟಕ್ಕೆ ಪರಿಹಾರ ಒದಗಿಸಿ ಆಲಮೇಲ ಹಾಗೂ ಸುತ್ತ ಮುತ್ತಲಿನ 48 ಗ್ರಾಮಗಳ ಜನತೆಗೆ ಹಜರತ್ ಪೀರ್ ಗಾಲಿ ಸಾಹೇಬರ ದರ್ಗಾಕ್ಕೆ ಹೋಗಲು ಮತ್ತು ರುಕುಂಪುರ ರಸ್ತೆ ಮಾಡುವುದಾಗಿ ಹೇಳಿ ಒಂದು ವಾರಗಳಲ್ಲಿ ರಸ್ತೆಯ ಬದಿ ಇರುವ ಅಂಗಡಿಗಳನ್ನು ತೆರವು ಮಾಡಿ ಕೆಲಸ ಪ್ರಾರಂಭಿಸುವುದಾಗಿ ವೇದಿಕೆ ಮೇಲೆ ಪ್ರಗತಿಪರ ಒಕ್ಕೂಟದ ಹಾಗೂ ಆಲಮೇಲದ ಸಮಸ್ತ ಜನತೆಗೆ ಮಾತು ನೀಡಿ ನಿಮ್ಮ ಅಭಿಮಾನ ಸಹಕಾರ ವಿಶ್ವಾಸ ನಾನು ಉಳಿಸಿ ಕೊಳ್ಳುತ್ತೇನೆ ನಿಮ್ಮ ಪ್ರೀತಿ ವಿಶ್ವಾಸ ಸಹಕಾರ ನಾನು ಮರೆಯುವುದಿಲ್ಲ ಎಂದು ಹೇಳಿದರು. ವೇದಿಕೆ ಮೇಲೆ ಪ್ರಗತಿಪರ ಒಕ್ಕೂಟದ ಹೋರಾಟಗಾರರಿಗೆ ಸಿಹಿ ತಿನಿಸಿ 12 ದಿನದ ಪ್ರತಿಭಟನೆ ಮೊಟಕು ಗೊಳಿಸಿದರು.ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ಸಾಧಿಕ್ ಸುಂಬಡ ಮಾತನಾಡಿ ರಸ್ತೆಗೆ ಅಡ್ಡಲಾದ ಅಂಗಡಿಗಳು ಸ್ವತಹ ನನ್ನದೇ ಅಂಗಡಿಯ ಇದ್ದರೂ ಸಹಿತ ನಾನು ಆರಾಧ್ಯ ದೇವರಾದ ಹಜರತ್ ಪೀರ್ ಗಾಲಿ ಸಾಹೇಬರ ದರ್ಗಾಕ್ಕೆ ರಸ್ತೆಯ ಸಲುವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡೋದಾಗಿ ಹೇಳಿದರು. ಈ ಸಂದರ್ಭದಲ್ಲಿ ಆಲಮೇಲ ತಾಲೂಕು ದಂಡಾಧಿಕಾರಿ ಕೆ.ವಿಜಯ್ ಕುಮಾರ್, ಆಲಮೇಲ ಪಟ್ಟಣ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ್ ನಾಯಕ್, ಆಲಮೇಲ ಠಾಣೆಯ ಪಿ.ಎಸ್.ಐ ಅರವಿಂದ್ ಅಂಗಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಎಪಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು, ಆಲಮೇಲ ಪಟ್ಟಣ ಪಂಚಾಯ್ತಿಯ ಸದಸ್ಯರು, ಆಲಮೇಲ ಪಟ್ಟಣದ ಪ್ರಗತಿಪರ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಆಲಮೇಲ ಪಟ್ಟಣದ ವ್ಯಾಪಾರಸ್ಥರು, ರಾಜಕೀಯ ಮುಖಂಡರು, ಹಿರಿಯರು, ಯುವಕರು ಉಪಸ್ಥಿತರಿದ್ದರು.
ತಾಲೂಕು ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹೀರೇಮಠ.ಆಲಮೇಲ