ಪಟ್ಟಣದಲ್ಲಿ ನೂತನ ಸಸ್ಯೋದ್ಯಾನ – ಭೂಮಿ ಪೂಜ್ಯ ಸಮಾರಂಭ.
ಆಲಮೇಲ ಆ.03

ಪಟ್ಟಣದಲ್ಲಿ ಒಂದು ಕೋಟಿ ವೆಚ್ಚದಲ್ಲಿ ಸೊಸ್ಸೋದ್ಯಾನ ಸಿಂದಗಿಯ ಶಾಸಕರಾದ ಶ್ರೀ ಅಶೋಕ್ ಮನಗೂಳಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಎರಡು ವೃಕ್ಷ ವನವನ್ನು ಸಿಂದಗಿ ಮತ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದನ್ನು ಸ್ಮರಿಸಿದ್ದರು. ಹಾಗೆ ಬದ್ಧರಾಗಿ ಇರುತ್ತೇನೆ ಇಂದು ನಮ್ಮ ಹೆಮ್ಮೆಯ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯ ಸಾಹೇಬರ ಹುಟ್ಟು ಹಬ್ಬದ ದಿನದಂದು ಈ ವೃಕ್ಷ ಉದ್ಯಾನವನ್ನು ಉದ್ಘಾಟನೆ ಮಾಡಿರುವುದು ಬಹಳ ಸಂತೋಷ ಎನಿಸುತ್ತಿದೆ ಎಂದು ಹೇಳಿದರು. ಪಟ್ಟಣ ಪಂಚಾಯತಿಯ ಅಧ್ಯಕ್ಷರಾದ ಸಾಧಿಕ್ ಸುಂಬಾರ್ ಮಾತನಾಡಿ ಮಾನ್ಯ ಶಾಸಕರು ಮರುಭೂಮಿಯಲ್ಲಿನ ಜಯೇಸಿಸ್ ನಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ 15 ವರ್ಷಗಳಿಂದ ನನಗೂ ಹೀಗೆ ಬಿದ್ದಿದ್ದ ಕಾಮಗಾರಿಗಳಿಗೆ ಈ ಸರ್ಕಾರದಲ್ಲಿ ಚಾಲನೆ ಸಿಕ್ಕಿದೆ ಎಂದು ತಿಳಿಸಿದರು. ಆಲಮೇಲ ನಾಗರಿಕ ವೇದಿಕೆಯ ಅಧ್ಯಕ್ಷ ರಮೇಶ್ ಬಂಟನೂರ್ ಮಾತನಾಡಿ ಮಾನ್ಯ ಶಾಸಕರು ಅಭಿವೃದ್ಧಿಯ ಹರಿಕಾರರು ಇಂದು ಸಸ್ಯೋದ್ಯಾನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದು. ಆಲಮೇಲ ಪಟ್ಟಣದ ಹಾಗೂ ಸೂಕ್ತ ಮುತ್ತಲಿನ ಗ್ರಾಮದ ಜನತೆಗೆ ಸಂತೋಷ ಸಂಗತಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿನಾಥ್ ಕುಸನಾಳ, ಸಹಾಯಕ ಅರಣ್ಯ ಅಧಿಕಾರಿ ಭಾಗ್ಯವಂತ ಮಸೂದಿ, ವಲಯ ಅರಣ್ಯ ಅಧಿಕಾರಿಗಳಾದ ರಾಜೀವ್ ಬಿರಾದಾರ್ ಹಾಗೂ ಅರಣ್ಯ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ತಾಲೂಕು ವರದಿಗಾರರು, ಸಿಹಿಕಹಿ ಕನ್ನಡ ದಿನಪತ್ರಿಕೆ ಹಾಗೂ ಎಸ್ ಕೆ ನೂಸ್ಜ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಆಲಮೇಲ