ತಾಲೂಕಿನಲ್ಲಿ ಅನಧಿಕೃತ ಶಾಲೆಗಳನ್ನು ಬಂದ್ ಮಾಡಬೇಕೆದು – ಶಾಸಕ ರಾಜುಗೌಡ ಪಾಟೀಲ ಅವರಿಗೆ ಮನವಿ.
ದೇವರ ಹಿಪ್ಪರಗಿ ಆ.03

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನಲ್ಲಿ ಅನಧಿಕೃತ ಶಾಲೆಗಳ ಹಾವಳಿ ಹೆಚ್ಚಾಗಿದ್ದು ಅವುಗಳನ್ನು ಬಂದ್ ಮಾಡಬೇಕೆಂದು ಆಗ್ರಹಿಸಿ ಮತ ಕ್ಷೇತ್ರದ ಶಾಸಕರಾಗಿರುವ ರಾಜುಗೌಡ ಪಾಟೀಲ ಅವರಿಗೆ ನಮ್ಮ ಕರ್ನಾಟಕ ಸೇನೆಯ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು. ಮನವಿ ಸಲ್ಲಿಸಿ ಮಾತನಾಡಿದ ಸಂಘಟನೆಯ ತಾಲೂಕು ಅಧ್ಯಕ್ಷ ಹಸನ್ ನದಾಫ್ ಅವರು ತಾಲೂಕಿನಲ್ಲಿ ಅನಧಿಕೃತ ಶಾಲೆಗಳು, ಕೋಚಿಂಗ್ ಸೆಂಟರಗಳು ಹಾವಳಿ ಮಿತಿ ಮೀರಿದೆ. ಕೋಚಿಂಗ್ ಶಾಲೆಯಲ್ಲಿ ಮೂಲ ಸೌಕರ್ಯ ಇಲ್ಲದೆ ಪತ್ರಾಸ್ ಶೇಡ್ ನಲ್ಲಿ ಹಾಗೂ ಮನೆಯಲ್ಲಿ ಮಕ್ಕಳಿಗೆ ಶೌಚಾಲಯ ಇಲ್ಲದೆ ಹಾಗೂ ಹಳೇಯ ವಾಹನಗಳಲ್ಲಿ ಮಕ್ಕಳಿಗೆ ಕರೆದುಕೊಂಡು ಹೋಗುತ್ತಾರೆ. ಇಂತಹ ಶಾಲೆಗಳಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಗಣನೀಯವಾಗಿ ಕುಸಿದಿದೆ. ಈ ಅನಧಿಕೃತ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಮುಗಿಸಿದವರು ಶಿಕ್ಷಕರಾಗಿದ್ದಾರೆ. ಇದೊಂದು ವ್ಯಾಪಕ ದಂಧೆಯಾಗಿದ್ದು ಈ ಕೂಡಲೇ ಇಂತಹ ಶಾಲೆಗಳನ್ನು ಬಂದ್ ಮಾಡಿ. ಅಂತಹವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನಾವು ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡ ಬೇಕಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆಯ ಇಬ್ರಾಹಿಂ ಮಸಳಿ, ಇಮಾಮ್ ಮುಲ್ಲಾ, ಹಮೀದ್ ಮುಲ್ಲಾ, ಅಬುಬಕರ್ ತಾಂಬೋಳಿ, ಅಸ್ತಕಪಿರುಲ್ಲಾ,ಬೀರು ಹಳ್ಳಿ, ದರವೇಶಿ, ಮಲ್ಲು ಉತ್ನಾಳ, ಕಲ್ಲು ದೇವರಮನಿ ಉಪಸ್ಥಿತರಿದ್ದರು.
ತಾಲೂಕು ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ