ಸಮರ್ಥ ವ್ಯಕ್ತಿಗಳ ನಿರ್ಮಾಣದ ಮೂಲಕ ಸದೃಢ ರಾಷ್ಟ್ರ ನಿರ್ಮಾಣವಾಗುತ್ತದೆ – ಮಾತಾಜೀ ತ್ಯಾಗಮಯೀ.
ಚಳ್ಳಕೆರೆ ಜ.14

ಸ್ವಾಮಿ ವಿವೇಕಾನಂದರ ಪ್ರಧಾನ ಸಂದೇಶ ಸಮರ್ಥ ವ್ಯಕ್ತಿಗಳ ನಿರ್ಮಾಣದ ಮೂಲಕ ಸದೃಢ ರಾಷ್ಟ್ರವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅಭಿಪ್ರಾಯ ಪಟ್ಟರು.

ನಗರದ ಹೊರವಲಯದ ಶ್ರೀವಾರಿಯರ್ಸ್ ವಿದ್ಯಾಸಂಸ್ಥೆಯಲ್ಲಿ ಇನ್ನರ್ ವಿಲ್ ಕ್ಲಬ್ ನ ಸಹಯೋಗದಲ್ಲಿ “ಸ್ವಾಮಿ ವಿವೇಕಾನಂದರ 164 ನೇ. ಜಯಂತಿ” ಯ ಪ್ರಯುಕ್ತ ಆಯೋಜಿಸಿದ್ದ ‘ರಾಷ್ಟ್ರೀಯ ಯುವ ದಿನಾಚರಣೆ’ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರ ಬಗ್ಗೆ ರವೀಂದ್ರನಾಥ ಠಾಗೋರ್, ಮಹಾತ್ಮ ಗಾಂಧೀಜಿ ಹೇಳಿದ ಮಾತುಗಳು ಸ್ಮರಣೀಯವಾಗಿದ್ದು ಸ್ವಾಮೀಜಿಯವರ ಸಂದೇಶವೆಂದರೆ ಅದು ಶಕ್ತಿ, ಆತ್ಮ ವಿಶ್ವಾಸ ಮತ್ತು ರಾಷ್ಟ್ರ ಪ್ರೇಮದ ಸಂದೇಶವಾಗಿದೆ. ಆದ್ದರಿಂದ ಮಕ್ಕಳು ತಮ್ಮ ಮೇಲೆ ಆತ್ಮ ಶ್ರದ್ಧೆಯನ್ನು ಬೆಳಸಿ ಕೊಂಡು ಸುಂದರ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಿ ಕೊಳ್ಳಬೇಕು ಎಂದರು. ಇನ್ನರ್ ವಿಲ್ ಕ್ಲಬ್ ನ ಮಲ್ಲಮ್ಮ ಸ್ವಾಮಿ ವಿವೇಕಾನಂದರ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಶ್ರೀಶಾರದಾಶ್ರಮದಿಂದ ಪುಸ್ತಕ ಮಾರಾಟ ಮತ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಚಿತ್ರ ಕಲಾವಿದ ಹೊನ್ನೂರಸ್ವಾಮಿ ಯವರಿಂದ ಮೂಡಿ. ಬಂದ ಸ್ವಾಮಿ ವಿವೇಕಾನಂದರ ರೇಖಾ ಚಿತ್ರ ಎಲ್ಲರ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಶ್ರೀವಾರಿಯರ್ಸ್ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಉಷಾ ಲೋಕನಾಥ್, ಕಾರ್ಯದರ್ಶಿ ಸುಭಾಸ್, ಮುಖ್ಯ ಶಿಕ್ಷಕಿ ದೀಪಿಕಾ ಭಂಡಾರಿ, ಇನ್ನರ್ ವಿಲ್ ಕ್ಲಬ್ ನ ಅಧ್ಯಕ್ಷೆ ಸಾವಿತ್ರಮ್ಮ, ಖಜಾಂಚಿ ಪದ್ಮ ನಾಗರಾಜ್, ಸದಸ್ಯರಾದ ಸುಧಾ ಪ್ರಹ್ಲಾದ್, ಸುಮ, ಶ್ರೀಶಾರದಾಶ್ರಮದ ಸ್ವಯಂ ಸೇವಕರಾದ ಯತೀಶ್ ಎಂ ಸಿದ್ದಾಪುರ, ಲಕ್ಷ್ಮೀ ಸೇರಿದಂತೆ ಶಿಕ್ಷಕರು, ಶಾಲೆಯ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

