“ಬುದ್ಧ & ಪ್ರೇಮ”…..

ಮುಗ್ಧ ಮಗುವೊಂದು
ಇಡೀ ಜಗವನ್ನೆ ಪ್ರೇಮಿಸಿದ
ಬುದ್ಧನ ಬಳಿ ಹೋಗಿ ಕೇಳಿತು,
ನೀವು ಇದ್ದಲ್ಲಿಯೇ ಇದ್ದು
ಜಗವನ್ನೆ ಪ್ರೇಮಿಸುತ್ತಿರಂತಲ್ಲಾ,
ಅದು ಹೇಗೆ ಸಾಧ್ಯ ಎಂದು.
ಆಗ ಪ್ರೇಮಾಮಯಿ
ಬುದ್ಧ ಹೇಳಿದರು,
ನೀನು ಗರ್ಭದಲಿರುವಾಗ
ನಿನ್ನ ತಾಯಿ, ನಿನ್ನ ರೂಪ ಅರಿಯದೇ
ನಿನ್ನನು ನವಮಾಸ ಹೇಗೆ
ಪ್ರೇಮಿಸಿದಾಳೋ ಹಾಗೆ ಮಗು,
ಪ್ರೇಮಿಸಲು ಹೊರಗಣ್ಣಿನ
ನೋಟ ಬೇಕಿಲ್ಲ;ಒಳಗಣ್ಣಿನ
ನೋಟವೊಂದೆ ಸಾಕು! ಎಂದು.

ಡಿ.ಶಬ್ರಿನಾ ಮಹಮದ್ ಅಲಿ,
ಚಳ್ಳಕೆರೆ