ಆ.8 ರಂದು ‘ಭರವಸೆ’ – ರಾಜ್ಯಾದ್ಯಂತ ತೆರೆಗೆ.
ಹುಬ್ಬಳ್ಳಿ ಆ.04

‘ಲೇಡೀಸ್ ಬಾರ್’ ಖ್ಯಾತಿಯ ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಗಂಗೂರ ಗ್ರಾಮದ ಯುವ ನಿರ್ದೇಶಕ ಮುತ್ತು ಎ.ಎನ್ ರವರ ಮತ್ತೊಂದು ಚಿತ್ರ ‘ಭರವಸೆ’ ಆಗಸ್ಟ್ 8 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈ ಚಿತ್ರವು ಆರ್.ಆರ್ ಮೂವ್ಹಿ ಮೇಕರ್ಸ್ ಬ್ಯಾನರ ಅಡಿಯಲ್ಲಿ ಮೊದಲ ಚಿತ್ರ ನಿರ್ಮಾಣವಾಗಿದೆ. ಈ ಚಿತ್ರಕ್ಕೆ ಬಿ.ಸಿ ನಾಗರಾಜು ಅವರು ಬಂಡವಾಳ ಹೂಡಿದ್ದಾರೆ ಎಂದು ಚಿತ್ರ ನಿರ್ದೇಶಕ ಮುತ್ತು ಪತ್ರಿಕಾ ಗೋಷ್ಠಿಯಲ್ಲಿ ವಿವರ ನೀಡಿದರು.

ಚಿತ್ರದಲ್ಲಿ 5 ಹಾಡುಗಳು ಇದ್ದು ಕನ್ನಡದ ಹೆಸರಾಂತ ಗಾಯಕರಾದ, ವಿಜಯ ಪ್ರಕಾಶ್, ರಾಜೇಶ್ ಕೃಷ್ಣನ್, ಅನುರಾಧ ಭಟ್, ಸಮಿತಾ ಮಲ್ನಾಡ್, ಸುಪ್ರಿಯಾ ಲೋಹಿತ್ ಹಾಡಿದ್ದಾರೆ. ಶೀರ್ಷಿಕೆ ತಕ್ಕಂತೆ ಕಥೆ ಇರುವುದು, ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಏನೋ ಒಂದು ಪಡೆದು ಕೊಳ್ಳುವುದಕ್ಕೂ ಅಥವಾ ಇನ್ನೇನು ಸಾಧಿಸಬೇಕು ಅನ್ನೋ ಭರವಸೆಯಲ್ಲಿ ಬದುಕುತ್ತಾನೆ. ಅದೇ ರೀತಿ ಚಿತ್ರದ ನಾಯಕ ಪಡೆದು ಕೊಳ್ಳುವುದನ್ನು ಕಳೆದು ಕೊಳ್ಳುವುದು ಏನು? ಪ್ರೀತಿ, ದ್ವೇಷ, ವಿಶ್ವಾಸ, ಸಾಧನೆ ಮತ್ತಿನ್ನೇನು ಎಂಬುವುದೇ ಚಿತ್ರ ಕಥೆಯ ಮುಖ್ಯ ಎಳೆಯಾಗಿದೆ. ಮುಖ್ಯ ಪಾತ್ರದಲ್ಲಿ, ವಿನಯ ರಾಜ್, ಅಹಲ್ಯ ಸುರೇಶ್, ನಾಗರಾಜ್, ಅಮೃತ, ಕೆಂಪೇಗೌಡ, ಶೋಬರಾಜ್, ಹೊನ್ನವಳ್ಳಿ ಕೃಷ್ಣ, ಕಿಲ್ಲರ್ ವೆಂಕಟೇಶ್, ಹಾಗೂ ಮುಂತಾದವರು ನಟಿಸಿದ್ದಾರೆ, ಚಿತ್ರಕ್ಕೆ ವೀನಸ್ ಮೂರ್ತಿ ಛಾಯ್ ಗ್ರಹಣವಿದ್ದು, ಸಂಕಲನ ಕುಮಾರ್.ಸಿ ಎಚ್, ಸಾಹಿತ್ಯ, ಶ್ರೀತೇಜ, ಅಭಿಜಿತ್ ತೀರ್ಥಳ್ಳಿ, ಬೈರೇಶ್, ಸಂಗೀತ ಹರ್ಷ ಕೋಗೋಡ್, ಪತ್ರಿಕಾ ಸಂಪರ್ಕ ಆರ್. ಚಂದ್ರಶೇಖರ, ಡಾ, ವೀರೇಶ ಹಂಡಿಗಿ, ಡಾ, ಪ್ರಭು ಗಂಜಿಹಾಳ ಅವರದ್ದಿದೆ. ಚಿತ್ರವನ್ನು ಚಿತ್ರ ಮಂದಿರದಲ್ಲೇ ನೋಡಿ ಪ್ರೋತ್ಸಾಹ ನೀಡುವಂತೆ ನಿರ್ಮಾಪಕರು, ನಿರ್ದೇಶಕರು ಮನವಿ ಮಾಡಿದರು.ಗೋಷ್ಠಿಯಲ್ಲಿ ನಿರ್ಮಾಪಕ ನಾಗರಾಜ್.ಬಿ.ಸಿ ಕಲಾವಿದರಾದ ಸಂತೋಷ್, ಚನ್ನಬಸಪ್ಪ ಕಾಳೆ, ಸಿದ್ದಾರ್ಥ ಅಪ್ಪು ,ಮಲ್ಲಿಕಾ, ಪಿಆರ್ ಓ ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ ಇದ್ದರು.
*****
ಡಾ, ಪ್ರಭು ಗಂಜಿಹಾಳ
ಮೊ.9448775346