“ಅರಿತವನೇ ಅರಸಮರೆತವನೇ ಅಮಾನುಷ್”…..

ಜವಾಬ್ದಾರಿ ಇದ್ದಾಗ ಅಹಂ ನಾಶವು




ಶ್ರಮವಿದ್ದಾಗ ಮೌಲ್ಯದ ಪ್ರಕಾಶವು
ಮಾತುಗಳು ಸೋತಾಗ ಮೌನವೇ ಗತಿಯು
ಆಕಸ್ಮಿಕ ಬಂದ ಸಿರಿ ದುಂದುವೆಚ್ಚದ ಸ್ಥಿತಿಯು
ಆಧುನಿಕತೆಯ ಜೀವನ ಶೈಲಿಯು
ಆರೋಗ್ಯದ ಮೇಲೆ ಪ್ರಭಾವಳಿಯು
ದುಃಖದ ಅನುಭವದ ಮನವು
ಅನ್ಯರಿಗೆ ನೋವು ಕಷ್ಟ ಕೊಡದು
ನ್ಯಾಯ ನೀತಿ ಧರ್ಮದ ಪರವು
ಬದುಕಿಗೊಂದು ಸಾಧನೆಯ ವರವು
ನಯವಂಚಕರ ಸ್ನೇಹ ಬಲು ಸರಳವು
ಕಾಣದಂತೆ ಬಂದು ಸೇರುವ ಕರಾಳವು
ನಮ್ಮನ್ನು ಪರೀಕ್ಷಿಸುವ ನಿರೀಕ್ಷೆಯು
ಕೀಳುತನವ ತರುವ ಹೋಲಿಕೆಯು
ಸಂತೃಪ್ತತೆಯೇ ನೆಮ್ಮದಿ ತನವು
ನಗುವ ಮೊಗವು ಬಾಳ ಸಿರಿತನವು
ಅರಿತವನೇ ಅರಸ
ಮರೆತವನೇ ಅಮಾನುಷ್
ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ