ಎಸ್/ಸಿಪಿ-ಟಿ/ಎಸ್‌ಪಿ ನಿಧಿಗಳನ್ನು ಗ್ಯಾರಂಟಿ ಯೋಜನೆಗೆ ಬಳಸುವ ಪ್ರಯತ್ನಕ್ಕೆ ಭೀಮ್ ಆರ್ಮಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಗೋಪಾಲ ಕೋಣಿಮನಿ ಯವರಿಂದ – ತೀವ್ರ ಖಂಡನೆ.
ಗದಗ ಆ.05

ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಾಗೂ ಸಮಾಜ ಕಲ್ಯಾಣ ಸಚಿವ ಶ್ರೀ ಎಚ್.ಸಿ. ಮಹದೇವಪ್ಪ ಅವರು ಎಸ್‌ಸಿ ಎಸ್‌ಪಿ/ಟಿ ಎಸ್‌ಪಿ (SCP/TSP) ನಿಧಿಗಳನ್ನು ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಬಳಸುವ ಕುರಿತು ನಿರ್ಧರಿಸಿರುವುದು ಅತ್ಯಂತ ಖಂಡನೀಯ, ಅಸಂವಿಧಾನಿಕ ಮತ್ತು ದಲಿತ-ಬಡ ಸಮುದಾಯಗಳ ಹಕ್ಕುಗಳಿಗೆ ದ್ರೋಹವಾಗಿದೆ ಎಂದು ಭೀಮ್ ಆರ್ಮಿ ಭಾರತ್ ಏಕತಾ ಮಿಶನ್ ರಾಷ್ಟ್ರೀಯ ಸಂಘಟನೆಯಿಂದ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದೇವೆ ಎಂದು ಗದಗ ಜಿಲ್ಲಾ ಅಧ್ಯಕ್ಷ ಗೋಪಾಲ ಕೋಣಿಮನಿ ಹೇಳಿದ್ದಾರೆScp/tsp ಯೋಜನೆಗಳು ಸಮಾಜದಲ್ಲಿ ಹಿಂದುಳಿದಿರುವ ಎಸ್ಸಿ/ಎಸ್ಟಿ ಸಮುದಾಯಗಳ ಸಂಪೂರ್ಣ ಸಬಲೀಕರಣಕ್ಕಾಗಿ ವಿನ್ಯಾಸ ಗೊಳಿಸಲಾಗಿದೆ. ಇಂತಹ ವಿಶೇಷ ಮೀಸಲು ಅನುದಾನವನ್ನು ಸಾರ್ವಜನಿಕ ಗ್ಯಾರಂಟಿ ಯೋಜನೆಗಳಿಗೆ ಬಳಸುವುದು ಯಾವುದೇ ರೀತಿಯಲ್ಲಿ ನ್ಯಾಯೋಚಿತವಲ್ಲ.

ಈ ಹಣವನ್ನು ಬೇರೆ ಉದ್ದೇಶಗಳಿಗೆ ವರ್ಗಾಯಿಸುವುದು ನೈತಿಕತೆಯಿಗೂ, ಸಂವಿಧಾನಕ್ಕೂ ವಿರುದ್ಧವಾಗಿದೆ.ನಮ್ಮ ಬಲವಾದ ಆಗ್ರಹಗಳು:-1. ಎಸ್‌ಸಿ/ಟಿಎಸ್‌ಪಿ ನಿಧಿಗಳನ್ನು ಯಾವುದೇ ಗ್ಯಾರಂಟಿ ಯೋಜನೆಗಳಿಗೆ ಅಥವಾ ಬೇರೆ ಯೋಜನೆಗಳಿಗೆ ಬಳಸ ಬಾರದು.2. ಸರ್ಕಾರ ಈ ಹಣವನ್ನು ಮಾತ್ರ ನಿಗದಿತ ಗುರಿಗಳಿಗಾಗಿ ಬಳಸುತ್ತದೆ ಎಂಬ ಖಚಿತತೆ ನೀಡಬೇಕು.3. ಸಂವಿಧಾನಾತ್ಮಕ ಹಕ್ಕುಗಳ ಭಂಗ ಮಾಡುವ ಯಾವುದೇ ತೀರ್ಮಾನವನ್ನು ತಕ್ಷಣ ಹಿಂಪಡೆಯ ಬೇಕು.ಇದು ಡಾ, ಬಿ.ಆರ್ ಅಂಬೇಡ್ಕರ್ ಅವರ ದೃಷ್ಟಿಕೋನ ಮತ್ತು ಸಾಮಾಜಿಕ ನ್ಯಾಯದ ತತ್ವಗಳಿಗೆ ಪೀಡುಗುಗಳಿಗೆ ಹಾಕುವ ಕ್ರಮವಾಗಿದೆ. ಬಡ ದಲಿತ ಹಾಗೂ ಆದಿವಾಸಿ ಸಮುದಾಯಗಳ ಅಭಿವೃದ್ಧಿಗೆ ಮೀಸಲಾಗಿರುವ ಅನುದಾನವನ್ನು ಬೇರೆಯವರಿಗೆ ಹಂಚುವ ನಿಟ್ಟಿನಲ್ಲಿ ತೆಗೆದು ಕೊಳ್ಳುತ್ತಿರುವ ಈ ನಡೆ ಸಮಾಜದಲ್ಲಿ ಭಾರೀ ಹಿನ್ನಡೆಯ ಕಡೆಗೆ ಒಯ್ಯುವುದು ಸ್ಪಷ್ಟ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಎಚ್ಚರಿಕೆ:-ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಮತ್ತು ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ ತಕ್ಷಣ ಸ್ಪಷ್ಟನೆ ನೀಡದಿದ್ದಲ್ಲಿ, ರಾಜ್ಯ ವ್ಯಾಪಿ ಅರೆಬೆತ್ತಲೆ ಹೋರಾಟ ಪ್ರತಿಭಟನೆಗಳು, ಕಾನೂನು ಹೋರಾಟ, ಹಾಗೂ ಸಾಮೂಹಿಕ ಚಳವಳಿಗಳನ್ನು ಆರಂಭಿಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.
ವರದಿ:ಅಂದಪ್ಪ.ಮಾದರ.ಗದಗ