ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸ ಬೇಕು – ಉಪನ್ಯಾಸಕ ಎಂ.ಟಿ ಆರೇರ್.
ಹುಲ್ಲೂರ ಆ.08

ಸಂಸತ್ತು ಜನಾದೇಶದ ದೇಗುಲ ಎಂದು ಡಾ, ಬಿ.ಆರ್ ಅಂಬೇಡ್ಕರ್ ಹೇಳಿದ ವಾಕ್ಯವನ್ನು ಹೇಳುವ ಮೂಲಕ ಸಂಸತ್ತಿನ ಮಹತ್ವವನ್ನು ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ರೂಢಿಸಿ ಕೊಳ್ಳಬೇಕು. ಜವಾಬ್ದಾರಿಗಳನ್ನು ಈಗಿನಿಂದಲೇ ಅರ್ಥೈಸಿ ಕೊಂಡು ಗುರಿಯ ಕಡೆ ಮುನ್ನಡೆಯ ಬೇಕು. ಕಾಲೇಜಿನಲ್ಲಿ ನಡೆಯುವ ಪಠ್ಯದ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೋಳ್ಳ ಬೇಕು ಈ ಕಾರ್ಯಕ್ರಮವನ್ನು ಉದ್ದೇಶಿಸಿಕಾಲೇಜಿನ ರಾಜ್ಯಶಾಸ್ತ್ರದ ಉಪನ್ಯಾಸಕರಾದ ಎಂ.ಟಿ ಆರೇರ್ ರವರು ಸಂಸತ್ತಿನ ಕುರಿತು ಮಾತನಾಡಿದರು. ಈ ಕಾರ್ಯಕ್ರಮವು ತಾಲೂಕಿನ ಹುಲ್ಲೂರ್ ಗ್ರಾಮದ ಶ್ರೀ ವೆಂಕನಗೌಡ ಹನುಮಂತ್ ಗೌಡ ಕೆಂಚನಗೌಡ್ರು ಸರಕಾರಿ ಪದವಿ ಪೂರ್ವ ಕಾಲೇಜು ಹುಲ್ಲೂರು. ಸನ್ 2025-26 ನೇ. ಸಾಲಿನ ಪ್ರಥಮ ಪಿ.ಯು.ಸಿ ಯ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಕಾಲೇಜು ಸಂಸತ್ತು ಉದ್ಘಾಟನಾ ಸಮಾರಂಭ ವಿಜೃಂಭಣೆಯಿಂದ ನಡೆಯಿತು.

ಈ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮತಿ ಎಂ.ಡಿ ತಳವಾರ್ ಪ್ರಾಚಾರ್ಯರು ಈ ಕಾರ್ಯಕ್ರಮದ ಸಾನಿಧ್ಯವನ್ನು ಬಿ.ಎಸ್ ಹಿರೇಮಠ. ಮುಖ್ಯ ಅತಿಥಿಗಳು ರವೀಂದ್ರಗೌಡ ಸೋಮನ ಕಟ್ಟಿ. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಎಲ್ಲಪ್ಪ ಗೌಡ ಕೆಂಚನಗೌಡ. ಐ.ಎಂ ಹೆರಕಲ್. ಬಿ.ಬಿ ನರಸನ್ನವರ್. ಚಂದನ ಗೌಡ ಹಿರೇಗೌಡರ್ ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿಯಾದ ಶ್ರೀ ಎಂ.ಪಿ ದಾನಪ್ಪ ಗೌಡ. ಡಿ.ಎಸ್ ಕೊತಬಾಳ. ಸುರೇಖಾ ರೋಕಡೇ. ಎಸ್ ಬಲಕುಂದಿ ಮಠ. ಉಪಸ್ಥಿತರಿದ್ದರು ಈ ಕಾರ್ಯಕ್ರಮವನ್ನು ಎಂ.ಟಿ ಆರೇರ್ ನಿರೂಪಿಸಿದರು ಹಾಗೂ ಎಂ.ಪಿ ದಾನಪ್ಪಗೌಡ್ರ ಸ್ವಾಗತ ಮತ್ತು ಪುಷ್ಪಾರ್ಪಣೆ ಕಾರ್ಯಕ್ರಮ ನೆರೆವೇರಿಸಿದರು. ಡಿ.ಎಸ್ ಕೊತಬಾಳ ವಂದನಾರ್ಪಣೆ ಕಾರ್ಯಕ್ರಮ ನಡೆಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಸ್.ವಿ ಸಂಕನಗೌಡ್ರ ರೋಣ.ಗದಗ

