ಜಿ.ಪಂನಲ್ಲಿನ ಹಗರಣ ಮುಚ್ಚಿ ಹಾಕಲು ಸಿ.ಇ.ಓ & ಮೇನೇಜರ್ ರವರಿಂದ – ಕುಟಿಲ ತಂತ್ರಗಾರಿಕೆ.
ಉಡುಪಿ ಆ.06

ಮಾಹಿತಿ ಹಕ್ಕು ಕಾಯ್ದೆಯು ಸರ್ಕಾರದ ಕೆಲಸಗಳಲ್ಲಿ ಪಾರದರ್ಶಕತೆಯನ್ನು ತರಲು ಮತ್ತು ನಾಗರಿಕರಿಗೆ ಮಾಹಿತಿಯನ್ನು ಪಡೆಯುವ ಉದ್ದೇಶವಾಗಿರುತ್ತದೆ. ಭ್ರಷ್ಟಾಚಾರವನ್ನು ತೊಡೆದು ಹಾಕಲು ಮತ್ತು ಆಡಳಿತದ ಮೇಲೆ ನಿರಂತರ ಕಣ್ಣಿಡಲು ಹಾಗೂ ಸರ್ಕಾರವನ್ನು ಸಾರ್ವಜನಿಕರಿಗೆ ಹೆಚ್ಚು ಉತ್ತರಿಸುವಂತೆ ಮಾಡಲು ಮಾಹಿತಿ ಹಕ್ಕು ಕಾಯ್ದೆಯು ಒಂದು ಉತ್ತಮವಾದ ವೇದಿಕೆ ಯಾಗಿದೆ. ಆದರೆ ಉಡುಪಿ ಜಿಲ್ಲಾ ಪಂಚಾಯತ್ನಲ್ಲಿ ಸಿ.ಇ.ಓ ಪ್ರತೀಕ್ ಬಾಯಲ್ ಮತ್ತು ಮೇನೇಜರ್ ರಾಜೇಶ್ವರಿ ರವರು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಮಾಹಿತಿಯನ್ನು ನೀಡದೆ ಉಡುಪಿ ಜಿಲ್ಲಾ ಪಂಚಾಯತ್ ಅಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಪ್ರಯತ್ನಿಸಿರುವುದು ಬೆಳಕಿಗೆ ಬಂದಿದೆ. ಕಳೆದ 3-4 ದಿನಗಳ ಹಿಂದೆ ಉಡುಪಿ ಜಿಲ್ಲಾ ಪಂಚಾಯತ್ ಅಲ್ಲಿ ವ್ಯಾಪಕ ಭ್ರಷ್ಟಾಚಾರದ ವರದಿ ಮಾಡಲಾಗಿದ್ದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇನ್ನೂ ಎಚ್ಚತ್ತು ಕೊಳ್ಳದೆ ಇದ್ದು ಇದೀಗ ಮತ್ತೊಂದು ಕರ್ಮಕಾಂಡ ಬೆಳಕಿಗೆ ಬಂದಿದೆ. ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಆಡಳಿತ ಶಾಖೆಯಲ್ಲಿ ಕಾನೂನು ಬಾಹಿರವಾಗಿ ವ್ಯವಸ್ಥಾಪಕಿ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್ವರಿ ಇವರ ಶಾಖೆಗೆ ಸಂಬಂದಿಸಿದ ಕೆಲವು ಮಾಹಿತಿಗಳನ್ನು ವಕೀಲರೊಬ್ಬರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿಯನ್ನು ಜಿಲ್ಲಾ ಪಂಚಾಯತ್ ಕಚೇರಿಗೆ ಸಲ್ಲಿಸಿದ್ದು ಅದರಂತೆ ಮಾಹಿತಿ ಅಧಿಕಾರಿಯು 69 ಪುಟಗಳಿಗೆ ಪುಟವೊಂದಕ್ಕೆ 2/- ರೂಪಾಯಿಯಂತೆ 138/- ರೂಪಾಯಿಗಳ ಮಾಹಿತಿ ಶುಲ್ಕ ಪಾವತಿಸುವಂತೆ ಸೂಚಿಸಿದ ಮೇರೆಗೆ ಮಾಹಿತಿ ಶುಲ್ಕವನ್ನು IPO ಮೂಲಕ ಅರ್ಜಿದಾರರು ಪಾವತಿಸಲಾಗಿರುತ್ತದೆ. ಅದರಂತೆ ಜಿಲ್ಲಾ ಪಂಚಾಯತ್ ನಲ್ಲಿ ಶುಲ್ಕ ಪಾವತಿಸಿದ ಮೇರೆಗೆ ದಿನಾಂಕ 22-7-2025 ರಲ್ಲಿ ವಕೀಲರಿಗೆ ಒಂದು ಪತ್ರವನ್ನು ಬರೆದು ತಮ್ಮ ಹಣ ಪಾವತಿಯ IPO ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸ್ವೀಕೃತ ಗೊಂಡಿದ್ದು. ಲಭ್ಯವಿರುವ 69 ಪುಟಗಳ ಮಾಹಿತಿಯನ್ನು ಈ ಪತ್ರದೊಂದಿಗೆ ಲಗ್ತೀಕರಿಸಿ ಕಳುಹಿಸಲಾಗಿದೆ ಎಂಬುದಾಗಿ ಕೇವಲ ಒಂದು ಪುಟದ ಪತ್ರವನ್ನು ಮಾತ್ರ ಅಂಚೆ ಮೂಲಕ 5/- ರೂಪಾಯಿ ಸ್ಟ್ಯಾಂಪ್ ಹಾಕಿ ಕಳುಹಿಸಲಾಗಿದೆ. ಜಿಲ್ಲಾ ಪಂಚಾಯತ್ ಇಂದ ಮಾಹಿತಿ ಶುಲ್ಕ ಸ್ವೀಕರಿಸಿ ಮಾಹಿತಿ ನೀಡದೆ ಖಾಲಿ ಪತ್ರ ಕಳುಹಿಸಿ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡದೇ ದರ್ಪ ಮೆರೆದಿರುತ್ತಾರೆ. ಇವರುಗಳು ಸರಕಾರಿ ಸೇವೆಯಲ್ಲಿ ಮುಂದುವರಿಯಲು ಯೋಗ್ಯರಿರುವುದಿಲ್ಲ. ಇವರುಗಳು ಮಾಹಿತಿ ನೀಡದೇ ನುಣುಚಿ ಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದು. ಜಿಲ್ಲೆಯಾದ್ಯಾಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಉಡುಪಿ ಜಿಲ್ಲಾ ಪಂಚಾಯತ್ ಅಲ್ಲಿ ಇನ್ನೂ ಅನೇಕ ಭ್ರಷ್ಟಾಚಾರ ನೆಡೆದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ತನ್ನ ಕರ್ತವ್ಯದ ಅವದಿಯಲ್ಲಿನ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಮೇನೇಜರ್ ರಾಜೇಶ್ವರಿ ಮತ್ತು ಸಿ.ಇ.ಓ ಪ್ರತೀಕ್ ಬಾಯಲ್ ಇವರುಗಳು ಜಿಲ್ಲಾ ಪಂಚಾಯತ್ ಕಛೇರಿಯನ್ನು ತಮ್ಮ ಸ್ವಂತ ಆಸ್ತಿಯನ್ನಾಗಿ ಮಾಡಿ ಕೊಂಡಿರುತ್ತಾರೆ ಮತ್ತು ಇಂತಹ ನಾಲಾಯಕ್ ಅಧಿಕಾರಿಗಳು ಉಡುಪಿ ಜಿಲ್ಲಾ ಪಂಚಾಯತ್ ಕಛೇರಿಗೆ ಖಂಡಿತವಾಗಿ ಬೇಕಾಗಿಲ್ಲ ಎಂಬುದಾಗಿ ಸಾರ್ವಜನಿಕರು ತಮ್ಮ ಅಳಲು ತೋಡಿ ಕೊಳ್ಳುತ್ತಿದ್ದಾರೆ. ಪತ್ರಿಕೆಗಳಲ್ಲಿ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಇಷ್ಟೊಂದು ವರದಿಯಾದರೂ ಕೂಡ ಉಡುಪಿ ಲೋಕಾಯುಕ್ತ ಪೊಲೀಸ್ರು ನಿದ್ದೆಗೆ ಜಾರಿದ್ದಾರೆ.
ವರದಿ:ಆರತಿ.ಗಿಳಿಯಾರು.ಉಡುಪಿ