ಆದರ್ಶ ಸದ್ಗೃಹಿಣಿಯಾಗಿ ಬದುಕಿ ತೋರಿಸಿದವರು ಶ್ರೀಮಾತೆ ಶಾರದಾದೇವಿ – ಶ್ರೀಮತಿ ಹೆಚ್.ಲಕ್ಷ್ಮೀದೇವಮ್ಮ ಅಭಿಪ್ರಾಯ.
ಚಳ್ಳಕೆರೆ ಆ.06

ಆದರ್ಶ ಸದ್ಗೃಹಿಣಿಯಾಗಿ ಬದುಕಿ ತೋರಿಸಿದವರು ಶ್ರೀಮಾತೆ ಶಾರದಾದೇವಿ ಎಂದು ಚಳ್ಳಕೆರೆ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಹೆಚ್ ಲಕ್ಷ್ಮೀದೇವಮ್ಮ ತಿಳಿಸಿದರು. ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಶ್ರೀಶಾರದಾದೇವೀ ಸತ್ಸಂಗ ಕೇಂದ್ರದ ವತಿಯಿಂದ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು “ಆದರ್ಶಪತ್ನಿ ಶ್ರೀಶಾರದಾದೇವಿ” ಎಂಬ ವಿಷಯವಾಗಿ ಉಪನ್ಯಾಸ ನೀಡಿದರು. ಶಾರದಾಮಾತೆಯವರ ದೈನಂದಿನ ಜೀವನ ಮತ್ತು ವೈಯಕ್ತಿಕ ವ್ಯಕ್ತಿತ್ವದ ಘಟನೆಗಳು ಇಂದಿನ ಸಂಸಾರಿಕ ಜೀವನ ನಡೆಸುವವರಿಗೆ ದಾರಿದೀಪವಾಗಿದ್ದು ಅವುಗಳ ಅಧ್ಯಯನ ಮತ್ತು ಅನುಸರಣೆಯಿಂದ ಸಾರ್ಥಕ ಜೀವನ ನಡೆಸಬಹುದು ಎಂದು ತಿಳಿಸಿದರು.

ಶ್ರೀಶಾರದಾಶ್ರಮದ ಸ್ವಯಂ ಸೇವಕ ಯತೀಶ್ ಎಂ ಸಿದ್ದಾಪುರ “ಶ್ರೀಶಾರದಾದೇವೀ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮ ಮಾಡುತ್ತ “ತಾಯರೂಪದಿ ಗುರುಕರುಣೆ” ಎಂಬ ಅಧ್ಯಾಯದ ಕುರಿತಾಗಿ ಮಾತನಾಡಿದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ “ಶ್ರೀರಾಮರಕ್ಷಾ” ಸ್ತೋತ್ರ ಪಠಣ ಹಾಗೂ ವಿಶೇಷ ಭಜನಾ ಕಾರ್ಯಕ್ರಮವನ್ನು ಶ್ರೀಮತಿ ಸುನೀತ ಗೋಪಾಲಕೃಷ್ಣ ಮತ್ತು ಮಾಕಂಸ್ ಲಕ್ಷ್ಮೀ ಬಾಲಾಜಿ ನಡೆಸಿ ಕೊಟ್ಟರು.

ಸತ್ಸಂಗ ಸಭೆಯಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ತಳುಕಿನ ತೊಯಜಾಕ್ಷಿ, ಎಂ.ಲಕ್ಷ್ಮೀದೇವಮ್ಮ, ಟಿ.ಎಂ.ವಿಜಯಕಲಾ, ಮಂಗಳಮ್ಮ, ಗೀತಾ ಸುಂದರೇಶ್ ದೀಕ್ಷಿತ್, ಅನುಸೂಯ ರಾಘವೇಂದ್ರ, ಸರ್ವಮಂಗಳ ಶಿವಣ್ಣ, ರಾಧಮ್ಮ, ಸರಸ್ವತಿ, ಚಂದ್ರಕಲಾ, ಪಂಕಜ ಚೆನ್ನಪ್ಪ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.