ರಸ್ತೆ ಸುಧಾರಣೆ ಯಾಗದಿದ್ದರೆ ಇಂಡಿ ಸಿಂದಗಿ ರಸ್ತೆ – ಬಂದ ನೊಂದ ಗ್ರಾಮಸ್ಥರು ಆಗ್ರಹ.
ನಾದ ಬಿ.ಕೆ ಆ.06

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಬಿ.ಕೆ ಗ್ರಾಮದಿಂದ ಮಸಳಿಗೆ ಹೋಗುವ ಹಳೆಯ ಡಾಂಬರೀಕರಣ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು. ಈ ರಸ್ತೆಯ ಮೇಲೆ ರೈತರು ಶಾಲಾ ಮಕ್ಕಳು ಹಾಗೂ ವಿಕಲ ಚೇತನರು ಹಾದು ಹೋಗ ಬೇಕಾದರು ಅವರು ಬೆಂಕಿ ಮುಳ್ಳಿನ ಮೇಲೆ ನಡೆದಂತೆ ಆಗುತ್ತದೆ. ಈ ರಸ್ತೆ ಸುಧಾರಣೆ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಅನೇಕ ಬಾರಿ ಗ್ರಾಮಸ್ಥರು ಮನವಿ ಮಾಡಿ ಕೊಂಡಿದ್ದರೂ ಯಾರೂ ಇತ್ತ ಕಡೆ ಗಮನಿಸುತ್ತಿಲ್ಲಾ. ಸುಮಾರು ವರ್ಷಗಳಿಂದ ಅಧಿಕಾರಿಗಳ ಗಮನಕ್ಕೆ ತಂದರೂ ಮನವಿಗಳು ಮಾತ್ರ ಅಧಿಕಾರಿಗಳ ಗಮನಕ್ಕೆ ಬರುತ್ತಿಲ್ಲಾ. ಆದರೆ ಕೆಲವು ಅಧಿಕಾರಿಗಳು, ಗುತ್ತಿಗೆದಾರರು ಸೇರಿ ಶಾಮೀಲಾಗಿ ಉಪಯೋಗಕ್ಕೆ ಬಾರದ ಮಣ್ಣು ಹಾಕಿ ಸಾಕಷ್ಟು ಹಣ ಲೂಟಿ ಮಾಡಿದ್ದಾರೆ. ರಸ್ತೆ ಮಾತ್ರ ಸೊನ್ನೆ.ಆದರೆ ಈ ರಸ್ತೆಯ ಮೇಲೆ ಹಾದು ಹೋಗಲು ರೈತ ಗ್ರಾಮಸ್ಥರಿಗೆ ಶಾಲಾ ಮಕ್ಕಳಿಗೆ. ಅಂಗವಿಕಲರಿಗೆ, ಹೀಗೆ ಅನೇಕ ರೀತಿಯಿಂದ ತೊಂದರೆ ಯಾಗುತ್ತಿರುವುದರಿಂದ ಅಂದಾಜು 200 ಗ್ರಾಮಸ್ಥರು ಸೇರಿ ಸಂಬಂಧಿಸಿದ ಅಧಿಕಾರಿಗಳಿಗೆ ರಸ್ತೆ ಸುಧಾರಣೆ ಮಾಡಿ ಕೊಡಿ, ಇಲ್ಲವಾದರೆ ಇಂಡಿ ಸಿಂದಗಿ ಮೇನ್ ರೋಡ್ ಬಂದು ಮಾಡಿ ಪ್ರತಿಭಟನೆ ಮಾಡಲಾಗುವುದೆಂದು ಆಗ್ರಹಿಸಿ ಇಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ತಾ.ಪಂ ಸದಸ್ಯರಾದ ಸಿಧ್ಧಾರಾಮ ದೇ. ತಳವಾರ. ಭಿಮರಾಯ.ನಿಂ ಅವಜಿ. ಸಂಗನಬಸವ.ಭೀ ಹೂಗಾರ. ಶಿವರಾಜ.ಜಿ ತೇಲಿ. ರಾಜು.ಬಾ ಬಡಿಗೇರ. ನಾಗಯ್ಯ.ಶಿ ಮಠಪತಿ.ಕ ರಮೇಶ ಅವಧಿ. ರಜಾಕ.ರಾ ಮುಲ್ಲಾ. ಈರಣ್ಣ.ಶಿ ತಳವಾರ.ಕೆಂಪೆಗೌಡ ಡಂಬಳ. ಭೋಗಣ್ಣ ತಳವಾರ. ಇತರರು ಭಾಗವಹಿಸಿದ್ದರು.ಜಿಲ್ಲಾ ವರದಿಗಾರರು, ಸಿಹಿಕಹಿ ಕನ್ನಡ ದಿನಪತ್ರಿಕೆ ಹಾಗೂ ಎಸ್ ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ.ಇಂಡಿ