“ವ್ಯಸನ ಹಸನ ಮಾಡಿ” ಆರೋಗ್ಯ – ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿ.
ಅಮೀನಗಡ ಆ.07

ಹುನಗುಂದ ತಾಲೂಕಿನ ಅಮೀನಗಡ ಶ್ರೀ ಸಂಗಮೇಶ್ವರ ಪದವಿ ಮಹಾ ವಿದ್ಯಾಲಯದಲ್ಲಿ ವ್ಯಸನ ಮುಕ್ತ ದಿನಾಚರಣೆ ಜಾಗೃತಿ ಆಯೋಜಿಸಲಾಗಿತ್ತು. ಶ್ರೀ ಸಂಗಮೇಶ್ವರ ಮಹಾ ವಿದ್ಯಾಲಯದ ಪ್ರಿನ್ಸಿಪಾಲರಾದ ಶ್ರೀ ಎಮ್.ಬಿ ನೇಗಲಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿ ಉಪನ್ಯಾಸಕಿಯರಾದ ಆರಿಯಾ, ಕುಮಾರಿ ವಿದ್ಯಾ ಹೂಗಾರ ದುಶ್ಚಟಗಳ ಪರಿಣಾಮಗಳ ವೈಜ್ಞಾನಿಕ ಮಾಹಿತಿ ಕರ ಪತ್ರ ಬಿಡುಗಡೆ ಮುಖಾಂತರ ವ್ಯಸನ ಮುಕ್ತ ದಿನಾಚರಣೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು ಮಾನವನ ದುಶ್ಚಟಗಳ ತೊಲಗಿಸಲು ಡಾ, ಮಹಾಂತ ಸ್ವಾಮಿಗಳು ಜೋಳಿಗೆ ಹಿಡಿದು ವ್ಯಸನ ಮುಕ್ತ ಸಮಾಜಕ್ಕಾಗಿ ಶ್ರಮಿಸಿದರು. ಅವರ ಸೇವೆ ಸಾರ್ಥಕತೆಗೆ “ವ್ಯಸನ ಮುಕ್ತ ದಿನಾಚರಣೆ” ಮಾನವನ ಉತ್ತಮ ಆರೋಗ್ಯಕ್ಕಾಗಿ, ದುಶ್ಚಟಗಳನ್ನು ದೂರ ತಳ್ಳಲು ದೃಢ ಮನಸ್ಸಿನಿಂದ ಸಾಧ್ಯ. ತಂಬಾಕು, ಗುಟ್ಕಾ, ಸಿಗರೇಟು, ಸರಾಯಿ ಸೇವನೆ ಅನೇಕ ಮಾರಕ ರೋಗಗಳಿಗೆ ಕಾರಣವಾಗುವುದು, ನರ ದೌರ್ಬಲ್ಯ ಹಸಿವಾಗದಿರುವದು ರಕ್ತ ಹೀನತೆ, ಕ್ಯಾನ್ಸರ್ ಅನೇಕ ಮಾರಣಾಂತಿಕ ರೋಗಗಳು ಬಾದಿಸಿ ಮನುಷ್ಯನನ್ನು ನರಕ ಕೂಪಕ್ಕೆ ತಳ್ಳಿ ನರಳುವಂತೆ ಮಾಡುತ್ತವೆ. ಯುವಕರು ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಆರೋಗ್ಯ ಸಮಾಜಕ್ಕೆ ಮಾದರಿ ಯಾಗುವುದು ಅವಶ್ಯಕವಾಗಿದೆ. ಯಾವುದೇ ತರಹ ಮಾನಸಿಕ ತೊಂದರೆಗಳು ಕಾಣಿಸಿದರೆ ಜಿಲ್ಲಾ ಆಸ್ಪತ್ರೆಯ ವ್ಯಸನ ಮುಕ್ತ ಕೇಂದ್ರಗಳಿಗೆ ಭೇಟಿ ನೀಡಿ ಪರಿಹಾರ ಪಡೆಯ ಬೇಕೆಂದರು. ಆರೋಗ್ಯ ಸಮಸ್ಯೆಗಳಿಗೆ 104 ಉಚಿತ ಕರೆ ಮುಖಾಂತರ ಸಲಹೆ ಪರಿಹಾರ ಸದುಪಯೋಗ ಪಡೆದು ಆರೋಗ್ಯವಂತ ಕುಟುಂಬ ಸಮಾಜಕ್ಕಾಗಿ ಕೈಜೋಡಿಸುವಂತೆ ಕರೆ ನೀಡಿದರು. ವ್ಯಸನ ಮುಕ್ತ ದಿನಾಚರಣೆ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಉಪನ್ಯಾಸಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.