ಮಕ್ಕಳ ಸರ್ವಾಂಗಿನ ಅಭಿವೃದ್ಧಿಗೆ ಕ್ರೀಡೆಗಳು ಮುಖ್ಯ – ಶಿಕ್ಷಣಾಧಿಕಾರಿ ಬಿ.ಎಸ್ ಹಾವಳಗಿ.
ಮುದ್ದೇಬಿಹಾಳ ಆ.07

ಮುದ್ದೇಬಿಹಾಳ ತಾಲೂಕಿನ ಹುಲ್ಲೂರು ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಅಧಿಕಾರಿಗಳ ಹಾಗೂ ಸಮನ್ವಯಾಧಿಕಾರಿ ಕಾರ್ಯಾಲಯ ಮುದ್ದೇಬಿಹಾಳ ಸಮೂಹ ಸಂಪನ್ಮೂಲ ಕೇಂದ್ರ ಹುಲ್ಲೂರ್ ಎಸ್.ಎನ್. ಡಿ ನ್ಯಾಷನಲ್ ಸ್ಕೂಲ್ ನಲ್ಲಿ 2025-26 ನೇ. ಸಾಲಿನ ಹೋಬಳಿ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಮಂಗಳವಾರ ಕ್ರೀಡಾ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್ ಸಾವಳಗಿ ನೀಡಿದರು. ಈ ವೇಳೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಕ್ಕಳ ಸರ್ವಾಂಗಿನ ಅಭಿವೃದ್ಧಿಗೆ ಕ್ರೀಡೆಯು ಮುಖ್ಯ ಉತ್ತಮ ದೇಹದಲ್ಲಿ ಉತ್ತಮ ಆತ್ಮ ಇರುತ್ತದೆ. ಒಂದು ದೇಶದ ಪ್ರಗತಿ ಆ ದೇಶದ ಕ್ರೀಡಾಪಟುಗಳು ಒಲಂಪಿಕ್ ನಲ್ಲಿ ಗೆದ್ದ ಪದಕಗಳಿಂದ ಅಳೆಯುತ್ತಾರೆ. ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಆರೋಗ್ಯ ನೆಮ್ಮದಿ ದೊರಕುತ್ತದೆ ಎಂದರು. ನಿವೃತ್ತ ಪ್ರವಾಸೋದ್ಯಮ ಉಪ ನಿರ್ದೇಶಕ ಎಂ.ಜಿ. ಕ್ಯಾತನವರ್ ಮಾತನಾಡಿ. ಖೋ ಖೋ ಮತ್ತು ಕಬಡ್ಡಿ ನಮ್ಮ ಗ್ರಾಮೀಣ ಕ್ರೀಡೆಗಳು ಈ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಹೆಚ್ಚಿನ ಆರೋಗ್ಯ ವೃದ್ಧಿ ಯಾಗುತ್ತದೆ. ದೇಹವು ಸದಾ ಚಟುವಟಿಕೆ ಯಿಂದ ಕೂಡಿರುತ್ತದೆ. ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯು ಬೇಕಿದೆ ಎಂದರು. ಅದೇ ವೇಳೆಯಲ್ಲಿ ಯರಜೇರಿ ಯಲ್ಲಾ ಲಿಂಗ ಮಠದ ಶ್ರೀ ಮಲ್ಲಾರಲಿಂಗ ಮಹಾ ಸ್ವಾಮಿಗಳು ಮಾತನಾಡಿ. ಕ್ರೀಡೆ ವಿದ್ಯಾರ್ಥಿಗಳ ಅವಿಭಾಜ್ಯ ಅಂಗ ಎಲ್ಲಾ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡೆಯಿಂದ ಶಿಸ್ತು ಮತ್ತು ಬದ್ಧತೆ ಬರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪಿ.ಎಲ್.ಡಿಬ್ಯಾಂಕ್ ಅಧ್ಯಕ್ಷ ಬಿ.ಕೆ ಬಿರಾದಾರ್ ಅಕ್ಷರ ದಾಸೋಹ ಸಂಯೋಜನಾದಿಕಾರಿ ಎಂ.ಎಂ ಬೆಳಗಲ್. ದೈಹಿಕ ಶಿಕ್ಷಣಾಧಿಕಾರಿ ಬಿ.ವೈ ಕವಡಿ. ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷ ಮುತ್ತಣ್ಣ ಹುಗ್ಗಿ. ಸುರೇಶ ಹಳೆಮನಿ. ಪಿಡಿಓ ಎ.ಎಸ್ ಲೋನಾರ್ ಮಠ. ನೋಡಲ್ಲ ಅಧಿಕಾರಿ ಎಂ.ಕೆ ಬಾಗವಾನ. ಸಿ.ಆರ್.ಪಿ. ಗುಂಡು ಚೌಹಾನ್. ಬಸವರಾಜ್ ಕೊಪ್ಪ. ನಿಂಗಪ್ಪ ಓಲೆಕಾರ್. ಜೆ.ಎಂ ಕುಂದುರ್ಗಿ. ಮಾದೇವಪ್ಪ ಚೆನ್ನಿ. ಸೇರಿದಂತೆ ಇತರ ಗಣ್ಯರು ಭಾಗವಹಿಸಿದ್ದರು. ಕ್ರೀಡಾ ಧ್ವಜಾರೋಹಣ ಹುಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಯನ್ ಜಿ ಚೌಹಾನ್ ಮಾಡಿದರು. ಕ್ರೀಡಾ ಪ್ರತಿಜ್ಞೆಯನ್ನು ಬೋಧಿಸಿದರು. ದೀಪಾ ಮತ್ತು ಸಂಗಡಿಗ ವಿದ್ಯಾರ್ಥಿಗಳು ಸ್ವಾಗತಿಸಿದರು. ಎಸ್.ಎನ್.ಡಿ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷ ಎಂ.ಎಸ್ ಕೊಪ್ಪ ಸ್ವಾಗತಿಸಿ. ಪ್ರಾಸ್ತಾವಿಕ ನುಡಿಗಳನಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಗುಂಡು ಎಸೆಯುವ ಮೂಲಕ ಕ್ರೀಡೆಗೆ ಚಾಲನೆಯನ್ನು ನೀಡಿದರು. ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಒಟ್ಟು ನಾಲ್ಕು ಶಾಲೆಗಳ ವಿದ್ಯಾರ್ಥಿಗಳು .ಕಬಡ್ಡಿ. ಖೋ ಖೋ ಗುಂಡು. ಎಸೆತ ಚಕ್ರ ಎಸೆತ. ಓಟದ ಸ್ಪರ್ಧೆ ವಾಲಿಬಾಲ್ ನಲ್ಲಿ ಭಾಗವಹಿಸಿದ್ದರು.
ತಾಲೂಕ ವರದಿಗಾರರು, ಸಿಹಿಕಹಿ ಕನ್ನಡ ದಿನಪತ್ರಿಕೆ ಹಾಗೂ ಎಸ್ ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ