ಭಾರತದ ಜೀವಾಳ ಧರ್ಮ ಮತ್ತು ಆಧ್ಯಾತ್ಮಿಕತೆ – ಅಭಿಷೇಕ್ ಚಕ್ರವರ್ತಿ ಅಭಿಮತ.
ಚಳ್ಳಕೆರೆ ಆ.07

ವಿಶ್ವಗುರು ಸ್ವಾಮಿ ವಿವೇಕಾನಂದರು ತಮ್ಮ ಸಂದೇಶಗಳಲ್ಲಿ ತಿಳಿಸಿದಂತೆ ನಮ್ಮ ಭಾರತದ ಜೀವವಿರುವುದು ಧರ್ಮ ಮತ್ತು ಆಧ್ಯಾತ್ಮಿಕತೆಯಲ್ಲಿ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಅಭಿಷೇಕ ಚಕ್ರವರ್ತಿ ಅಭಿಪ್ರಾಯ ಪಟ್ಟರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಯುವಕ ಯುವತಿಯರಿಗಾಗಿ ಆಯೋಜಿಸಿದ್ದ “ವ್ಯಕ್ತಿತ್ವ ನಿರ್ಮಾಣಕಾರಿ” ತರಗತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಅವರು ಸ್ವಾಮಿ ವಿವೇಕಾನಂದರ “ಕೊಲಂಬೊ ಇಂದ ಆಲ್ಮೋರ” ಎಂಬ ಸದ್ಗ್ರಂಥದ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು.

ಇಂದಿನ ಯುವ ಜನಾಂಗ ಭಾರತೀಯ ಸನಾತನ ಪರಂಪರೆಯ ವೇದ ಉಪನಿಷತ್ತು ಹಾಗೂ ಶ್ರೀಮದ್ ಭಗವದ್ಗೀತೆ ಸೇರಿದಂತೆ ವಿವಿಧ ಸದ್ಗ್ರಂಥಗಳನ್ನು ಅಮೂಲಾಗ್ರವಾಗಿ ಅಧ್ಯಯನ ಮಾಡಬೇಕು. ಸಮರ್ಥ ಭಾರತವನ್ನು ಕಟ್ಟಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ “ಭಜನೆ” ಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿ ಕೊಟ್ಟರೆ ಮಾತಾಜೀ ತ್ಯಾಗಮಯೀ ಅವರು ವಿದ್ಯಾರ್ಥಿಗಳಿಗೆ “ಧ್ಯಾನಾಭ್ಯಾಸ” ಮಾಡಿಸಿದರು. ಈ ಸಂದರ್ಭದಲ್ಲಿ ಸುಧಾಮಣಿ,ಮಂಜುಳ ಉಮೇಶ್, ಸಂತೋಷ್, ಚೇತನ್, ಪುಷ್ಪಲತಾ,ಋತಿಕ್, ಅಂಬಣ್ಣ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.