ಕೊಟ್ಟ ಮಾತಿನಂತೆ ನುಡಿಯದ ನಗರಾಭಿವೃದ್ಧಿ – ಸಚಿವ ಭೈರತಿ ಶ್ರೀಶೈಲಗೌಡ.
ಸಿಂದಗಿ ಆ.09





ಕಳೆದ ಮೇ ತಿಂಗಳಲ್ಲಿ ಸಿಂದಗಿ ನಗರಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಆಗಮಿಸಿ ಪತ್ರಿಕಾ ಗೋಷ್ಠಿ ನಡೆಸಿ ರಾಜ್ಯದಲ್ಲಿರುವ ಪುರ ಸಭೆಗಳನ್ನು ನಗರ ಸಭೆಗಳನ್ನಾಗಿ ಮೇಲ್ದರ್ಜೆಗೇರಿಸುವ ಅವಕಾಶ ಬಂದರೆ ಸಿಂದಗಿ ಪುರ ಸಭೆಯನ್ನೇ ನಗರ ಸಭೆಯನ್ನಾಗಿ ಮಾಡಲು ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿಕೆ ನೀಡಿದ್ದರು. ಸ್ಥಳೀಯರಲ್ಲಿ ಪುರ ಸಭೆಯು ನಗರ ಪುರ ಸಭೆಯಾಗಿ ಮೇಲ್ದರ್ಜೆಗೇರಬಹುದು ಎಂಬ ಭರವಸೆ ಕೊಟ್ಟ ಮಾತು ಹುಸಿಯಾಗಿ, ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಪುರ ಸಭೆಯನ್ನು ನಗರ ಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಸಿಂದಗಿ ನಗರ ಸಭೆಯಾಗುವ ಕನಸು ನನಸಾಗಿಯೇ ಉಳಿಯಿತೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಪುರ ಸಭೆಯು ನಗರ ಸಭೆಯಾಗಿ ಮೇಲ್ದರ್ಜೆಗೇರದಿರುವುದು ತಾಲೂಕಿನ ಜನತೆಯಲ್ಲಿ ಅಸಮಾಧಾನ ಉಂಟಾಗಿದೆ. ಸಿಂದಗಿ ಸಾಂಸ್ಕೃತಿಕವಾಗಿ ಮತ್ತು ವ್ಯವಹಾರಿಕವಾಗಿ ಸಾಕಷ್ಟು ಬೆಳವಣಿಗೆಯನ್ನು ಹೊಂದಿದೆ. ಇದು ವರೆಗೆ ಪಟ್ಟಣ ಎಂದು ಕರೆಸಿ ಕೊಂಡ ಸಿಂದಗಿ ಪುರ ಸಭೆ ನಗರ ಸಭೆಯಾಗಿ ಮಾರ್ಪಾಡಾಗುತ್ತದೆ ಎಂಬ ಖುಷಿಯಲ್ಲಿದ್ದ ಜನತೆಗೆ ನಿರಾಶೆ ಮೂಡಿದೆ. ರಾಜ್ಯ ಸರ್ಕಾರ ತಾರತಮ್ಯ ನೀತಿ ಅನುಸರಿಸದೇ ನಗರಾಭಿವೃದ್ಧಿ ಸಚಿವರು ಕೊಟ್ಟ ಮಾತಿನಂತೆ ನಗರ ಸಭೆಯನ್ನಾಗಿ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಮಾಡಿಸಬೇಕೆಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಅವರಿಂದ ಆಗ್ರಹ ಆಗಿದೆ.
ತಾಲೂಕು ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಆಲಮೇಲ