ಉಡುಪಿ ತಾಲೂಕ ಕಛೇರಿಯಲ್ಲಿ ಉಪ ತಹಶೀಲ್ದಾರ್ ಕೆ.ರವಿಶಂಕರ್ ಮತ್ತು ಆತನ – ಸಹಚರರ ಕರ್ಮಕಾಂಡ.
ಉಡುಪಿ ಆ .09





ಕೆ.ರವಿಶಂಕರ್ ಇವನು ದ್ವಿ.ದ. ಸಹಾಯಕನಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಕಛೇರಿ ನಡಾವಳಿ ನಂಬ್ರ: ಇಎಸ್ಟಿ (2) ಸಿಆರ್ 571/1997-98 ರಂತೆ ದಿನಾಂಕ: 16/03/1998 ರಂದು ದಕ್ಷಿಣ ಕನ್ನಡ ಜಿಲ್ಲೆಯ (ಮಂಗಳೂರು) ಬೆಳ್ತಂಗಡಿ ತಾಲೂಕ ಕಛೇರಿಗೆ ಪ್ರಥಮ ಬಾರಿಗೆ ಅನುಕಂಪ ನೆಲೆಯಲ್ಲಿ ಸೇವೆಗೆ ಸೇರಿ (ಮಂಗಳೂರು) ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಯವರ ಕಛೇರಿ ನಡಾವಳಿ ನಂಬ್ರ:ಇಎಸ್ಟಿ (2) ಸಿಆರ್ 58/2000-01 ದಿನಾಂಕ: 22/01/2001 ರಂದು ರವಿಶಂಕರ್.ಕೆ ಇವರನ್ನು ಖಾಯಂ ಪೂರ್ಣಾವಧಿಯನ್ನು ಘೋಷಿಸಿದ್ದು. ದಿನಾಂಕ:25.08.2001 ರ ವರ್ಗಾವಣೆ ಆದೇಶದಂತೆ ಕೆ.ರವಿಶಂಕರ್ ಇವರನ್ನು 31.10.2001 ರಂದು ವಿ.ಭೂ.ಸ್ವಾ.ಅ.ಕೆ.ಐ.ಎ.ಡಿ.ಬಿ. ಮಂಗಳೂರು ಇವರ ಮಂಡಳಿಯ ಎರವಲು ಸೇವೆಯಿಂದ ಅಪರಾಹ್ನ ಬಿಡುಗಡೆ ಮಾಡುತ್ತಾರೆ. ದಕ್ಷಿಣ ಕನ್ನಡ (ಮಂಗಳೂರು) ಜಿಲ್ಲೆಯಿಂದ ಉಡುಪಿ ಜಿಲ್ಲೆ, ಕಾರ್ಕಳ ತಾಲೂಕ ಕಛೇರಿಗೆ ವರ್ಗಾವಣೆ ಗೊಂಡು ದಿನಾಂಕ:08/11/2001 ರಂದು EST CR145/2001-02 ರಂತೆ ಪೂರ್ವಾಹ್ನ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಈಗಿರುವಾಗ ಕೆ.ರವಿಶಂಕರ್ ಇವನು ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡು. ಮೇಲಾಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ದಿನಾಂಕ:16/03/1998 ರಂದೇ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕ ಕಛೇರಿಗೆ ತಾನು ಪ್ರಥಮ ಬಾರಿಗೆ ಸೇರಿರುವುದಾಗಿ ಜೇಷ್ಠತಾ ಪಟ್ಟಿಯಲ್ಲಿ ನಮೂದಿಸಿ ಕೊಂಡು ಕಾನೂನು ಬಾಹಿರವಾಗಿ ಎರಡು ಮುಂಬಡ್ತಿಯನ್ನು ಪಡೆದುಕೊಂಡು ಈಗ ಡೆಪ್ಯೂಟಿ ತಹಶೀಲ್ದಾರ್ ಆಗಿರುವುದು ಬೆಳಕಿಗೆ ಬಂದಿದೆ. ಇವನ ಅಕ್ರಮ ನೇಮಕಾತಿ ಬಗ್ಗೆ ದಾಖಲೆಗಳ ಸಮೇತ ವಿಶ್ವನಾಥ ಪೇತ್ರಿ, ಜಿಲ್ಲಾಧ್ಯಕ್ಷ, ಸಮತಾ ಸೈನಿಕ ದಳ, ಉಡುಪಿ ಇವರು ಹಲವಾರು ಬಾರಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಇದು ವರೆಗೂ ಯಾವುದೇ ಕಾನೂನು ಕ್ರಮ ಕೈಗೊಂಡಿರುವುದಿಲ್ಲಾ. ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ದೂರಿನ ಬಗ್ಗೆ ಅಕ್ರಮವಾಗಿ ಸರಕಾರಿ ಕೆಲಸಕ್ಕೆ ಸೇರಿರುವ ರವಿಶಂಕರ್ ನಿಮ್ಮ ಯಾವುದೇ ದೂರುಗಳಿಗೆ ನಾನು ಹೆದರುವುದಿಲ್ಲ. ನನ್ನದೇ ಕೆಲವು ಆಪ್ತ ಸಹೋದ್ಯೋಗಿಗಳು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಇರುವುದಾಗಿ ಮತ್ತು ನಿಮ್ಮ ಎಲ್ಲಾ ದೂರು ಅರ್ಜಿಗಳನ್ನು ಜಿಲ್ಲಾಧಿಕಾರಿಗಳು ಕಸದ ಬುಟ್ಟಿಗೆ ಎಸೆಯುವಂತೆ ನನಗೆ ತಿಳಿಸಿದ್ದಾರೆ, ಹಾಗಾಗಿ ನಿಮ್ಮ ಗೊಡ್ಡು ಬೆದರಿಕೆಗೆ ನಾನು ಹೆದರುವುದಿಲ್ಲಾ ನನ್ನನ್ನು ಏನು ಮಾಡಲಾಗುವುದಿಲ್ಲವೆಂದು ಉಡಾಫೆಯಿಂದ ಮಾತನಾಡುತ್ತಾನೆ. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿನ ಸೋಮಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಿಯೋಜಿತ ಗ್ರಾಮ ಕರಣಿಕರಾದ ಸ್ವಾತಿ ನಾಯಕ್.ಯು ಮತ್ತು ಸ್ನೇಹ ಇವರುಗಳು ಹಲವು ವರ್ಷಗಳಿಂದ ಗ್ರಾಮಗಳಿಗೆ ತೆರಳದೇ ಜಿಲ್ಲಾಧಿಕಾರಿಗಳ ಕಛೇರಿಯಲ್ಲೇ ಬೇರೂರಿರುವುದರಿಂದ ತಮ್ಮ ಹಂತದಲ್ಲಿಯೇ ದೂರು ಅರ್ಜಿಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರದೇ ದೂರು ಅರ್ಜಿಗಳನ್ನೇ ನಾಪತ್ತೆ ಮಾಡುತ್ತಿದ್ದು, ಭ್ರಷ್ಟ ಅಧಿಕಾರಿ ಕೆ.ರವಿಶಂಕರ್ಗೆ ಬೆನ್ನಲುಬಾಗಿ ನಿಂತು ಸಹಕಾರ ನೀಡುತ್ತಿದ್ದಾರೆ. ಗ್ರಾಮ ಕರಣಿಕರು ಗ್ರಾಮಗಳಲ್ಲಿ ಲಭ್ಯವಿರಬೇಕು ಎಂದು ನಿಯೋಜನೆ ಮೇಲೆ ಇದ್ದವರನ್ನು ಗ್ರಾಮಕ್ಕೆ ಕಳುಹಿಸ ಬೇಕೆಂದು ಸರಕಾರ ಸ್ಪಷ್ಟವಾಗಿ ಆದೇಶ ಮಾಡಿದ್ದರೂ ಸಹ ಸ್ವಾತಿ ನಾಯಕ್.ಯು ಮತ್ತು ಸ್ನೇಹ ಇವರಿಗೆ ಯಾವುದೇ ಸರಕಾರಿ ನಿಯಮ ಅನ್ವಯಿಸುವುದಿಲ್ಲ ಎಂದು ರಾಜಾರೋಷವಾಗಿ ಹೇಳಿಕೊಂಡು ಕಛೇರಿ ಸಮಯದಲ್ಲಿ ಮೇಕಪ್ ಮಾಡಿಕೊಂಡು REELS ಮಾಡುವ ಚಟ ಇದ್ದು, ಸಾರ್ವಜನಿಕರು ಬಂದಾಗ ನಮ್ಮ REELS ಗೆ ದಯವಿಟ್ಟು ಲೈಕ್ ಕೊಡಿ, ನಾವು ಟಿ.ವಿ ಯಲ್ಲಿನ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ದಿಸುವುದಾಗಿ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಇವರುಗಳ REELS ಚಟದ ಬಗ್ಗೆ ಸಾರ್ವಜನಿಕರು ರೋಸಿ ಹೋಗಿದ್ದು, ಇವರುಗಳ ನಿಯೋಜನೆ ಆದೇಶವನ್ನು ತಕ್ಷಣ ರದ್ದು ಪಡಿಸಿ ಇವರುಗಳಿಗೆ ಹಂಚಿಕೆಯಾದ ಗ್ರಾಮಕ್ಕೆ ಕಳುಹಿಸ ಬೇಕು ಮತ್ತು ಇವರ ಅವಧಿಯಲ್ಲಿ ಆಗಿರುವ ಭ್ರಷ್ಟಚಾರ ಮತ್ತು ಅನ್ಯಾಯಗಳ ಕುರಿತು ತನಿಖೆ ನಡೆಸಿ ಇವರುಗಳನ್ನು ಅಮಾನತು ಮಾಡಬೇಕು ಎಂಬುದಾಗಿ ಸಾರ್ವಜನಿಕರು ಕಂದಾಯ ಇಲಾಖೆಯ ಸಚಿವರಾದ ಕೃಷ್ಣ ಬೈರೇಗೌಡರನ್ನು ಒತ್ತಾಯಿಸುತ್ತಿದ್ದಾರೆ.
ವರದಿ:ಆರತಿ.ಗಿಳಿಯಾರು.ಉಡುಪಿ