ತಾಲೂಕಿನ ಪೂರ್ವ ವಲಯ ಕ್ರೀಡಾಕೂಟವು – ಯಶಸ್ಸು ಕಂಡ ಪೂರ್ವ ವಲಯ ಕ್ರೀಡಾಕೂಟ.
ಇಲಕಲ್ಲ ಆ.10





ತಾಲೂಕಿನ ಪೂರ್ವ ವಲಯ ಕ್ರೀಡಾಕೂಟವು ಎ.ಸಿ.ಓ ಶಾಲೆಯಲ್ಲಿ ಎರಡು ದಿನಗಳ ಕಾಲ ತುಂಬಾ ಯಶಸ್ವಿ ಯಾಗಿ ನಡೆಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ವಿ.ಎನ್ ಹಂಚಾಟೆ ಅವರು ಕ್ರೀಡಾ ಧ್ವಜವನ್ನು ಏರಿಸಿದರು. ಶ್ರೀ ಮಹಾಂತೇಶ ಕರ್ತೃ ಗದ್ದುಗೆ ಯಿಂದ ತಂದ ಕ್ರೀಡಾ ಜ್ಯೋತಿಯನ್ನು ಕ್ರೀಡಾ ವಿಭಾಗದ ಚೇರಮನ್ ಟಿ.ಎಚ್ ಕುಲಕರ್ಣಿ ಅವರು ಕ್ರೀಡಾಂಗಣದಲ್ಲಿ ಸ್ಥಾಪಿಸಿದರು.

ಸಂಸ್ಥೆಯ ಕಾರ್ಯದರ್ಶಿ ಬಿ.ಆರ್ ಕಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತಾಡಿದರು. ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಚೇರಮನ್ ಎಂ.ವಿ ಪಾಟೀಲ, ಸದಸ್ಯರಾದ ಗೌಡರ, ಪತ್ತಾರ ವೇದಿಕೆಯ ಮೇಲೆ ಉಪಸ್ಥಿತರಿದ್ದು. ಪಥ ಸಂಚಲನದ ಸೆಲ್ಯೂಟ್ ಸ್ವೀಕರಿಸಿದರು. ಕ್ರೀಡಾ ಶಿಕ್ಷಕ ಯು.ಸಿ ಪಾಟೀಲ ಸ್ಪರ್ಧಾಳುಗಳು ಹಾಗೂ ನಿರ್ಣಾಯಕರಿಗೆ ಪ್ರಮಾಣ ವಚನ ಬೋಧಿಸಿದರು.

ವಿದ್ಯಾರ್ಥಿನಿಯರ ಕಬಡ್ಡಿ ಆಟದೊಂದಿಗೆ ಪಂದ್ಯಾವಳಿ ಆರಂಭವಾಯಿತು. ಸಮಾರೋಪ ಸಮಾರಂಭದಲ್ಲಿ ಹುನಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಸದಾಶಿವ ಗುಡಗುಂಟಿ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎಸ್.ಟಿ ಪೈಲ್ ಹಾಗೂ ನಾಗರಾಜ ಹೊಸೂರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.


ವಿಜೇತ ತಂಡಗಳಿಗೆ ಹಾಗೂ ವಿಜೇತರಿಗೆ ಪ್ರಶಸ್ತಿ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.ಸಭೆಯಲ್ಲಿ ಮಾತಾಡಿದ ಶ್ರೀಮತಿ ಜಾಸ್ಮಿನ್ ಕಿಲ್ಲೇದಾರ ಎ.ಸಿ.ಓ. ಶಾಲೆಯ ಕಾರ್ಯ ವೈಖರಿ ಹಾಗೂ ಶಿಸ್ತನ್ನು ಮುಕ್ತವಾಗಿ ಪ್ರಶಂಸಿಸಿದರು. ಸಂಸ್ಥೆಯ ಕಾರ್ಯದರ್ಶಿ ಬಿ.ಆರ್ ಕಟ್ಟಿ ಮಾತನಾಡುತ್ತಾ ಜೀವನದಲ್ಲಿ ಸಾಧಕ ಕ್ರೀಡಾಪಟುಗಳನ್ನು ಗುರಿಯಾಗಿಟ್ಟು ಕೊಂಡು ಮುನ್ನಡೆದರೆ ಸಾಧನೆ ಮಾಡಲು ಸುಲಭವಾಗುತ್ತದೆ ಎಂದರು.ಛಾಯಾ ನಾಯ್ಕ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು.
ತಾಲೂಕು ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ