ಹಿರಗಲಿಂಗೇಶ್ವರ ದೇವರ ಶ್ರಾವಣ ಮಾಸದ – ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗುವುದು.
ತಾವರಖೇಡ್ ಆ.10

ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಸುಕ್ಷೇತ್ರ ಹೊಸ ತಾವರಖೇಡ್ ಗ್ರಾಮದಲ್ಲಿ ಶ್ರೀ ಹಿರಗಲಿಂಗೇಶ್ವರ ದೇವರ ಶ್ರಾವಣ ಮಾಸದ ಜಾತ್ರಾ ಮಹೋತ್ಸವ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಹಿರಗಲಿಂಗೇಶ್ವರ ದೇವರ ಶ್ರಾವಣ ಮಾಸದ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಲಿದ್ದು.ಈ ಜಾತ್ರೆಯಲ್ಲಿ 7 ಗ್ರಾಮಗಳ ಪಲ್ಲಕ್ಕಿಗಳು ಭೀಮ ನದಿ ಗಂಗಾ ಸ್ಥಳಕ್ಕೆ ಆಗಮಿಸಲಿದ್ದು. ಬ್ರಹ್ಮ ದೇವರ ಪಲ್ಲಕ್ಕಿ ತೊಂಟಾಪುರ. ಶ್ರೀ ಕೆಂಚರಾಯ ದೇವರ ಪಲ್ಲಕ್ಕಿ ಹಂಚಿನಾಳ, ಶ್ರೀ ಮಾರಾಯಸಿದ್ದ ದೇವರ ಪಲ್ಲಕ್ಕಿ ಮಂಗಳೂರು, ಶ್ರೀ ನಿಂಗರಾಯ ದೇವರ ಪಲ್ಲಕ್ಕಿ ದೇವಣಗಾವ್, ಶ್ರೀ ಲಕ್ಷ್ಮೀದೇವಿ ಪಲ್ಲಕ್ಕಿ ಮದರಿ, ಹಾಗೂ ಶ್ರೀ ರಬಕಮ್ಮ ದೇವಿ ಪಲ್ಲಕ್ಕಿ ಗುಂದಗಿ ಈ ಎಲ್ಲ ಪಲ್ಲಕ್ಕಿಗಳು ರವಿವಾರ ಸಾಯಂಕಾಲ 6:00ಗೆ ಹೊಸ ತಾವರಖೇಡ ಗ್ರಾಮಕ್ಕೆ ಆಗಮಿಸಲಿದ್ದು. ಸೋಮವಾರ 11.8.2025 ರಂದು ಬೆಳಿಗ್ಗೆ 6:00ಗೆ ಭೀಮಾ ನದಿಯಲ್ಲಿ ಗಂಗಾಸ್ನಾನ ಮುಗಿಸಿ ಕೊಂಡು ಸಕಲ ವಾದ್ಯದೊಂದಿಗೆ ಊರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡುಲಾಗುತ್ತದೆ.

ನಂತರ ಶ್ರೀ ಲಕ್ಷ್ಮಿ ಡೊಳ್ಳಿನ ಸಂಘ ಕಲ್ಲಹಳ್ಳಿ ಮತ್ತು ಶ್ರೀಹಿರಾಗಲಿಂಗೇಶ್ವರ ಡೊಳ್ಳಿನ ಸಂಘ ಹೊಸ ತಾವರಖೇಡ ಇವರಿಂದ ಜರುಗಲಿದ್ದು. ಶ್ರೀ ಮಾಳಿಂಗರಾಯ ಸಂಘ ಹಂಚಿನಾಳ ಇವರಿಂದ ದೈಗೊಂಡನ ಕರಿಕಟ್ಟುವ ಹಬ್ಬ ಜರುಗುವುದು ಅದೇ ದಿನ ರಾತ್ರಿ 10 ಗಂಟೆಗೆ ಹೊಸ ತಾವರಖೇಡ ಗ್ರಾಮದ ವರಿಂದ ಡೊಳ್ಳಿನ ಪದ ಹಾಗೂ ಬಜನಾ ಸಂಘದ ವರಿಂದ ಬೆಳಗಿನ ವರೆಗೆ ಜಾಗರಣೆ ನಡೆಯುತ್ತದೆ. ಆಲಮೇಲ ತಾಲೂಕಿನ ಸಕಲ ಸದ್ಭಕ್ತಾದಿಗಳು ಶ್ರೀಹಿರಗಲಿಂಗೇಶ್ವರರ ಭಕ್ತಾದಿಗಳು ಜಾತ್ರೆಗೆ ಆಗಮಿಸಿ ಪುನೀತ ರಾಗಬೇಕೆಂದು ಹೊಸ ತಾವರಕೇಡ ಗ್ರಾಮದ ಗ್ರಾಮಸ್ಥರಾದ ಮಲ್ಕಪ್ಪ ಪೂಜಾರಿ, ಜಡಗಪ್ಪ ಪೂಜಾರಿ, ಶಿವಯೋಗಿ ಪೂಜಾರಿ, ನಾಗಪ್ಪ ಪೂಜಾರಿ, ಶ್ರೀಮಂತ ಪೂಜಾರಿ, ಧೂಳಪ್ಪ ಪೂಜಾರಿ, ಸಿದ್ದರಾಮ್ ಪೂಜಾರಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಪ್ರತಿನಿಧಿಯಾದ ಸುರೇಶ್ ಪೂಜಾರಿ ತಿಳಿಸಿದರು.
ತಾಲೂಕು ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಆಲಮೇಲ