ಶ್ರೀ ಗುರು ರಾಘವೇಂದ್ರ ಸ್ವಾಮೀಜಿ – ಮೂರ್ತಿ ಪ್ರತಿಷ್ಠಾಪನೆಯ ಉದ್ಘಾಟನೆ.
ವಂದಾಲ ಆ.10

ದೇವರ ಹಿಪ್ಪರಗಿ ತಾಲೂಕಿನ ವಂದಾಲ ಗ್ರಾಮದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮೀಜಿ ಯವರು ೩೫೪ ನೇಯ ಆರಾಧನೆ ಮಹೋತ್ಸವ ಹಾಗೂ ಶ್ರೀ ಗುರು ರಾಘವೇಂದ್ರ ರಾಯರ ಮೂರ್ತಿಯನ್ನು ಉದ್ಘಾಟನೆ ಮಾಡಿದರು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ. ಶ್ರೀ ಶಿವಾಚಾರ್ಯ ರತ್ನ ಡಾ, ಪ.ಬ್ರ ವಿಶ್ವ ರಾಧ್ಯ ಶಿವಾಚಾರ್ಯರು ಬೃಹನ್ಮಠ ಮಾಗಣಗೇರಿ ಶ್ರೀಗಳು, ಸಾನಿಧ್ಯ ಶ್ರೀ ತಪೋರತ್ನಂ ಮಹಾಲಿಂಗೇಶ್ವರ ಮಹಾ ಸ್ವಾಮಿಗಳು ವಿಶ್ವರಾಧ್ಯ ಮಠ ಬೊರಗಿ, ಶ್ರೀ ಷ.ಬ್ರ ರುದ್ರಮುನಿ ಶಿವಾಚಾರ್ಯರು ಕುಂಟೋಜಿ ಮಠ ಯಂಕಂಚಿ ಶ್ರೀಗಳು ಮಾತನಾಡಿದರು.

ಶ್ರೀ ಸದ್ಗುರು ದತ್ತಪ್ಪಯ್ಯ ಮಹಾ ಸ್ವಾಮಿಗಳು ಶ್ರೀ ಭೀಮಾಶಂಕರ ಸ್ವಾಮಿ ಸಂಸ್ಥಾನ ಮಠ ಸಿಂದಗಿ, ಶ್ರೀಗಳು ಮಾತನಾಡಿದರು. ಶ್ರೀತಪೋಭಾಸ್ಕರ ಷ.ಬ್ರ ಸಿದ್ದ ಚನ್ನಮಲ್ಲಿಕಾರ್ಜನ ಶಿವಾಚಾರ್ಯರು ಕಂಠಿಮಠ ಮುದನೂರ. ಶ್ರೀ ವೇ. ಮೂರ್ತಿ ನಿಂಗಯ್ಯ ಮಹಾಸ್ವಾಮಿಗಳು ಯಲಗೋಡ, ಈ ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ನೇತೃತ್ವ ವಹಿಸಿದ, ಯಲಗೋಡ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀ ಮತಿ ರೂಪಾ ಚಂದ್ರಶೇಖರ ಅಸ್ಕಿ, ಯವರು ಹಾಗೂ ಬಾಲ್ಯರಾಯರ ಮೂರ್ತಿಯನ್ನು ಉದ್ಘಾಟನೆ ಮಾಡಿ, ಮಾತನಾಡಿದ ದೇವರ ಹಿಪ್ಪರಗಿ ಮತ ಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ ಕುದರೆ ಸಾಲವಾಡಗಿ ಯವರು, ಹಾಗೂ ಯವ್ವನ ರಾಯರ ಮೂರ್ತಿಯನ್ನು ಉದ್ಘಾಟನೆ ಮಾಡಿದ ಮಹೇಶ ಶರಣಪ್ಪ, ಸುಣಗಾರ, ಗೋಲ್ಲಾಳಪ್ಪಗೌಡ ಪಾಟೀಲ ಗೋಲಗೇರಿ, ಶಿವನಗೌಡ ಲಿಂಗದಳ್ಳಿ,ಚಬನೂರ, ಹಾಗೂ ಮಧ್ಯಮ ರಾಯರ ಮೂರ್ತಿ ಉದ್ಘಾಟನೆ ಮಾಡಿರುವರು.

ಪ್ರಭುಗೌಡ ಪಾಟೀಲ ಡಂಬಳ, ವಿಜುಗೌಡ ಬಿರಾದಾರ ಕರವಿನಾಳ, ಸಿದ್ದು ಬುಳ್ಳಾ ಕೆರುಟಗಿ, ಶಿಲ್ಪಾಶ್ರೀ ಕುದರಗೊಂಡ, ಹಾಗೂ ಮುಪ್ಪಾವಸ್ತಿ ರಾಯರ ಮೂರ್ತಿಯನ್ನು ಉದ್ಘಾಟನೆ ಮಾಡಿರುವರು ಬಸನಗೌಡ ಪಾಟೀಲ ಯಡ್ಯಾಪೂರ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರು ಯಾದಗಿರಿ, ಬಸನಗೌಡ ಪಾಟೀಲ, ಗುರುನಾಥಗೌಡ ಪಾಟೀಲ ನಿಂಗನಗೌಡ ಬಿಂಜಳಭಾವಿ, ಅಣಪ್ಪಗೌಡ ಪಾಟೀಲ ಯಲಗೋಡ, ಪಂಚ ಮೂಖಿ ಆಂಜನೇಯ ಮೂರ್ತಿಯನ್ನು ಉದ್ಘಾಟನೆ ಮಾಡಿದವರು ಶ್ರೀ ಈರಯ್ಯ ಹಿರೇಮಠ, ಮಡಿವಾಳಪ್ಪ ಪಾಟೀಲ, ಕಳಸಪ್ಪ ಗಂಗೂರ ನಿವೃತ್ತ ಶಿಕ್ಷಕರು,ಗೀರಿಮಲ್ಲಪ್ಪಗೌಡ ಹೋಸಗೌಡ್ರ,ವಂದಾಲ ಹಾಗೂ ಧ್ವಜಾರೋಹಣ ನೆರವೇರಿಸಿದರು ಬಾಬುಗೌಡ ಬಿಂಜಳಭಾವಿ, ಯಲಗೋಡ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಶ್ರೀದೇವಿ ನಾಟಿಕಾರ, ಹಾಗೂ ಸದಸ್ಯರಾದ ಕಾಶೀರಾಯಗೌಡ ಬಿರಾದಾರ, ರೇಣುಕಾ ಇಂಗಳಗಿ, ಹಾಗೂ ಜ್ಯೋತಿ ಬೆಳಗಿಸಿದವರು ಶ್ರೀ ವಿಜಯಾಚಾರ್ಯರು ಕಲಬುರಗಿ, ತಾರಾನಾಥ ರಾಠೋಡ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಸಿಂದಗಿ, ಈ ಕಾರ್ಯಕ್ರಮದ ನೇತೃತ್ವ ಹಾಗೂ ರೂವಾರಿಗಳಾದ ಯಲಗೋಡ ಗ್ರಾಮ ಪಂಚಾಯತಿಯ ಅಧ್ಯಕ್ಷರ ಪ್ರತಿ ನಿಧಿಯಾದ ಚಂದ್ರಶೇಖರ ಅಸ್ಕಿಯವರು, ಹಾಗೂ ಈ ಸಮಾರಂಭದ ಮುಖ್ಯಾಥಿತಿಗಳಾದ ಸಿದ್ದನಗೌಡ ಪಾಟೀಲ ಅಲ್ಲಾಪೂರ ಸಂಗನಗೌಡ ಮಾಲಿ ಪಾಟೀಲ ಖಾನಾಪೂರ, ಯಲಗೋಡ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶಿವಾನಂದ ಹಡಪದ, ಮಶ್ಯಾಕಸಾಬ ಚೌದ್ರರಿ ಉಮೇಶ್ ಇಂಗಳಗಿ, ಯಲಗೋಡ, ನಿತ್ಯಾನಂದ ಕತ್ತಿ ಮಡಿವಾಳಪ್ಪ ನಾಟಿಕಾರ, ಬಸವರಾಜ್ ಯಾಳವಾರ, ಹಾಗೂ ಶ್ರೀ ಗುರುರಾಘವೇಂದ್ರ ಸ್ವಾಮೀಜಿಯವರು ಹಿಂದಿನ ಕಾಲದಲ್ಲಿ ಪಾದಯಾತ್ರೆ ಮಾಡುವ ಸಮಯದಲ್ಲಿ ವಂದಾಲ ಗ್ರಾಮಕ್ಕೆ ಭೇಟಿ ನೀಡಿದ ಸಲುವಾಗಿ ಗ್ರಾಮದಲ್ಲಿ ಶ್ರೀ ರಾಘವೇಂದ್ರ ಸ್ವಾಮೀಜಿಯವರು ದೇವಸ್ಥಾನವನ್ನು ಕಟ್ಟಿಸಿ ಪ್ರತಿ ವರ್ಷವೂ ಇಂತಹ ಕಾರ್ಯಕ್ರಮಗಳು ಮಾಡುತ್ತಾರೆ. ಹಾಗೂ ಗ್ರಾಮದ ಜನರು ಪ್ರತಿ ವರ್ಷ ಕೂಡಾ ಮಂತ್ರಾಲಯಕ್ಕೆ ಪಾದ ಯಾತ್ರೆ ಮಾಡುತ್ತಾರೆ.

ಈ ಕಾರ್ಯಕ್ರಮದ ದಾನಿಗಳಾದ, ಅನ್ನ ಪ್ರಸಾದ ಮಲ್ಲಮ್ಮ ದೊಡ್ಡಮನಿ ಸವಿ ನೆನಪಿನ ಕಾಣಿಕೆ ಗಿರಿಜಮ್ಮ ಬಮ್ಮಗೊಂಡ, ಹೂವಿನ ಅಲಂಕಾರ ಸೇವೆ ಸಿದ್ದನಗೌಡ ಲಕ್ಕೂಂಡಿ, ಹೋಮ ಸೇವೆ ಮಡಿವಾಳಪ್ಪ ಮೋಪಗಾರ, ಮಂಟಪ ಸೇವೆ ಶಿವಶರಣ ಹಿರೇಮಠ, ಪತ್ರಿಕಾ ಸೇವೆ ಮಾಡಿರುವ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರ ಪ್ರತಿ ನಿಧಿಯಾದ ಬೂತಾಳಿ ಇಂಗಳಗಿ, ಯವರು, ಸಂಗೀತ ಸೇವೆ ನೀಡಿದವರು ಮಹಾಂತಯ್ಯ ಹಿರೇಮಠ, ವಿನಾಯಕ ಕುಲಕರ್ಣಿ, ಸಪ್ತ ಭಜನೆ ಸೇವೆ ಮಾಡಿದವರು, ಮಹಾದೇವಪ್ಪಗೌಡ ನಾಗಣಸೂರ, ಈ ಕಾರ್ಯಕ್ರಮದಲ್ಲಿ ಸ್ವಾಗತ ಮಾಡಿದ, ಪಿಕೆಪಿಎಸ್ ಮಾಜಿ ಅಧ್ಯಕ್ಷರಾದ ಬಸವರಾಜ ಅಸ್ಕಿಯವರು ಹಾಗೂ ನಿರೂಪಣೆ ಮಾಡಿದವರು, ಬೂತಾಳಿ ನಾಯ್ಕೋಡಿ, ಕಾಶೀರಾಯ ಗಂಗೂರ, ಹಾಗೂ ಈ ಕಾರ್ಯಕ್ರಮಕ್ಕೆ ಸುತ್ತ ಮುತ್ತಲಿನ ಗ್ರಾಮದ ಭಕ್ತರು ಹಾಗೂ ಗ್ರಾಮದ ಹಿರಿಯರು ಹಾಗೂ ಮಹಿಳೆಯರು, ಮಕ್ಕಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ