“ನುಡಿಯೇ ಮುತ್ತು ಮೌನವೇ ಬದುಕು”…..

ದುಡಿತವೇ ಬಾಳು ಮಾತೇ ಮೃತ್ಯು
ಅಂತರಂಗ ಶುದ್ಧವಿಲ್ಲದವನ ಮನ ಕಲ್ಮಶವು
ಬಡತನವೇ ದುಃಖ ಸಿರಿತನವೇ ಸುಖ
ಭ್ರಮೆಯ ಲೋಕದಲಿ ಶೂನ್ಯವು
ನಿಷ್ಠೆ ಇಲ್ಲದ ಕಾಯಕ ಭಕ್ತಿ ಇಲ್ಲದ ಪೂಜೆ ಮುಕ್ತಿ
ಇಲ್ಲದ ಜೀವನವು
ಬಹಿರಂಗದಲಿ ಕ್ರೀಯಾಶೀಲತೆ ನಿಷ್ಪಲ ಕಾಯಕ
ಯಾವುದಾದರೇನು ನಿಷ್ಠೆ ಸುಫಲ
ಆಸೆ ಬುರುಕನಿಗೆ ಸಿರಿ ಏಷ್ಟಿದ್ದರೇನು
ಬಡತನವು ನಿಶ್ವಾರ್ಥ ಭಾವವೇ ಜಗದ
ಸಿರತನವು
ಮುಖ ಸ್ತುತಿಯಲಿ ಶುಭ ಬಯಸುವವ
ಸಾಮಾನ್ಯ
ಅಂತರಂಗದಲಿ ಕೇಡುತನ ಬಯಕೆಯು
ಅಗಣ್ಯ
ಮಾನವೀಯ ಮೌಲ್ಯ ಅರಿತವ ಮಾನವ
ಇನ್ನೊಬ್ಬರ ಅದೀನದಲಿ ತಲೆ ತೂಗುವವ
ದಾನವ
ತಾಮಾಡಿದ ಸಹಾಯ ಸಾಧನೆ
ತನ್ನಬಣ್ಣೆನೆಯೇ ಅಹಂ ತನವು
ನೀ ಮಾಡಿದ್ದು ನೀನಿಲ್ಲದ ವೇಳೆ ಶ್ಲಾಗನೀಯ
ನಿಜಗೌರವವು
ನುಡಿಯೇ ಮುತ್ತು ಮೌನವೇ ಬದುಕು
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ.

