ಕರಿಯಪ್ಪ ತಾತನ ಜಾತ್ರೆಗೆ ಎಲ್ಲರೂ ಬನ್ನಿ – ಗ್ರಾಮದ ಹಿರಿಯರಿಂದ ಮನವಿ.
ಗೊರಬಾಳ ಆ.10

ಇಳಕಲ್ ತಾಲೂಕಿನ ಸಮೀಪದ ಗೊರಬಾಳ ಗ್ರಾಮದಲ್ಲಿ ಶ್ರಾವಣ ಮಾಸದ ಮೂರನೇ ರವಿವಾರ ನಡೆಯುವ ಕರಿಯಪ್ಪ ತಾತನ ಜಾತ್ರೆಗೆ ಗೊರಬಾಳ ಗ್ರಾಮದ ಎಲ್ಲಾ ಗುರು ಹಿರಿಯರು ತಾಯಂದಿರು ಮತ್ತು ಮಹಿಳೆಯರು ಹಾಗೂ ಯುವಕ ಮಿತ್ರರು ಮತ್ತು ಮಕ್ಕಳು ಬರಬೇಕೆಂದು ವಿನಂತಿಸಿದ್ದು ಬೆಳಿಗ್ಗೆ ಅಭಿಷೇಕದೊಂದಿಗೆ ಪ್ರಾರಂಭವಾಗುವ ಜಾತ್ರೆಯ ಪೂಜಾ ಕೈಂಕರ್ಯಗಳು ಪ್ರಾರಂಭವಾಗಿ ಮಧ್ಯಾಹ್ನ ಪ್ರಸಾದ ವಿತರಣೆ ಇದ್ದು.

ಸಾಯಂಕಾಲ ಡೊಳ್ಳು ಹಾಗೂ ಸಕಲ ಮಜಲು ಮೆರವಣಿಗೆಯೊಂದಿಗೆ ರಥೋತ್ಸವ ನಡೆಯುವುದು ಹಾಗಾಗಿ ಇಲಕಲ್ ನಗರ ಹಾಗೂ ಗ್ರಾಮದ ಸುತ್ತಮುತ್ತ ಗ್ರಾಮದ ಎಲ್ಲಾ ಗುರು ಹಿರಿಯರು ಜಾತ್ರೆಗೆ ಬಂದು ಶ್ರಾವಣ ಮಾಸದಲ್ಲಿ ಕರಿಯಪ್ಪ ತಾತನ ದರ್ಶನ ಪಡೆದು ಪುನೀತರಾಗ ಬೇಕೆಂದು ಗೊರಬಾಳ ಗ್ರಾಮದ ಎಲ್ಲಾ ಗುರು ಹಿರಿಯರ ವಿನಂತಿಸಿ ಕೊಂಡಿದ್ದಾರೆ.
ಹವ್ಯಾಸಿ ಬರಹಗಾರರು ವರದಿ:ಜಗದೀಶ್.
ಗಿರಡ್ಡಿ ಇಲಕಲ್ಲ