ಕರಿಯಪ್ಪ ತಾತನ ಅದ್ದೂರಿಯಾಗಿ – ಜಾತ್ರಾ ಮಹೋತ್ಸವ ಜರುಗಿತು.
ಗೊರಬಾಳ ಆ.11

ಇಳಕಲ್ ತಾಲೂಕಿನ ಸಮೀಪದ ಗೊರಬಾಳ ಗ್ರಾಮದ ಕರಿಯಪ್ಪ ತಾತನ ಜಾತ್ರೆ ಮಹೋತ್ಸವವು ಅದ್ದೂರಿಯಾಗಿ ಜರುಗಿತು. ಬೆಳಿಗ್ಗೆ ಅಭಿಷೇಕದೊಂದಿಗೆ ಪ್ರಾರಂಭವಾದ ಜಾತ್ರಾ ಕಾರ್ಯಕ್ರಮಗಳು ಅಭಿಷೇಕದ ನಂತರ ಅನೇಕ ಪೂಜಾ ಕೈಕಂರೈಗಳದೊಂದಿಗೆ ಗ್ರಾಮದ ಮಹಿಳೆಯರು ಯುವತಿಯರು ಪ್ರತಿ ಮನೆಯಿಂದ ಕರಿಯಪ್ಪ ತಾತನ ಗುಡಿ ಆಗಮಿಸಿ ದೀಪ ಹಚ್ಚಿ ತಾತನ ಆಶೀರ್ವಾದ ಪಡೆದು ಕೊಂಡರು ನಂತರ ಕಮಿಟಿಯವರು ಆಯೋಜಿಸಿದ್ದ ಅಲ್ಪ ಉಪಹಾರವನ್ನು ಪ್ರಸಾದ ಎಂದು ಭಾವಿಸಿ ಸ್ವೀಕರಿಸಿದರು.
ಮಧ್ಯಾಹ್ನದ ಪ್ರಸಾದವನ್ನು ಗ್ರಾಮಸ್ಥರೆಲ್ಲರೂ ಹಾಗೂ ಜಾತ್ರೆಗೆ ಬಂದ ಎಲ್ಲಾ ಭಕ್ತರು ಸ್ವೀಕರಿಸಿ ಕೃತಜ್ಞತಾ ಭಾವ ವ್ಯಕ್ತಪಡಿಸಿದರು. ಭಕ್ತರು ಸಾಯಂಕಾಲ ಗ್ರಾಮದ ಪ್ರತಿ ಸಮಾಜದಿಂದ ರಥಕ್ಕೆ ಹೂವಿನ ಹಾರ ತರುವ ಸಂಭ್ರಮ ಯುವಕರ ಕುಣಿತ ಮೆರವಣಿಗೆಯೊಂದಿಗೆ ಮದ್ದುಗಳ ಸಿಡಿತ ದೊಂದಿಗೆ ಎಲ್ಲಾ ಹೂವಿನ ಹಾರವನ್ನು ರಥಕ್ಕೆ ಹಾಕಿದ ನಂತರ ಸಾಯಂಕಾಲ ರಥ ಎಳೆಯುವುದರ ಮೂಲಕ ಗೊರಬಾಳ ಗ್ರಾಮದ ಕರಿಯಪ್ಪ ತಾತನ ಜಾತ್ರೋತ್ಸವವನ್ನು ಅದ್ದೂರಿಯಾಗಿ ಆಚರಿಸಿ ಗ್ರಾಮಸ್ಥರು ಸಂಭ್ರಮ ಪಟ್ಟರು.
ಹವ್ಯಾಸಿ ಬರಹಗಾರರು:ಜಗದೀಶ್.ಗಿರಡ್ಡಿ.ಗೊರಬಾಳ