ಸ್ವಾತಂತ್ರ್ಯ ಸಂಭ್ರಮದ ನಿಮಿತ್ಯ ಆಗಸ್ಟ್ 13 ರಂದು – ರಕ್ತದಾನ ಶಿಬಿರ.
ಜಕ್ಕಲಿ ಆ.11

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಜಕ್ಕಲಿ ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಯುವ ಸೇವಾ ಸಂಘವು ಈ ಬಾರಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇದರ ಭಾಗವಾಗಿ ಆಗಸ್ಟ್ 13ರಂದು ಗ್ರಾಮದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.ಗ್ರಾಮದ ಯುವಕರು ಮತ್ತು ಸಂಘಟನೆಯ ಎಲ್ಲಾ ಸದಸ್ಯರು ಸೇರಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ಎಲ್ಲ ನಾಗರಿಕರೂ ಭಾಗವಹಿಸಿ ರಕ್ತದಾನ ಮಾಡುವಂತೆ ಕೋರಲಾಗಿದೆ. ಈ ಮೂಲಕ ಸ್ವಾತಂತ್ರ್ಯ ದಿನಾಚರಣೆಗೆ ಅರ್ಥಪೂರ್ಣ ಚಾಲನೆ ನೀಡಲು ಸಂಘವು ಉದ್ದೇಶಿಸಿದೆ. ರಕ್ತದಾನವು ತುರ್ತು ಸಂದರ್ಭಗಳಲ್ಲಿ ಅನೇಕ ಜೀವಗಳನ್ನು ಉಳಿಸುವ ಮಹತ್ಕಾ ರ್ಯವಾಗಿದ್ದು, ಶ್ರೀ ಬಸವೇಶ್ವರ ರಕ್ತ ಭಂಡಾರ ಗದಗ ಇವರ ಜೊತೆ ಕೂಡಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.ಯುವ ಸಂಘಟನೆಯು ಈ ವಿನೂತನ ಕಾರ್ಯಕ್ರಮದ ಮೂಲಕ ಇತರ ಹಳ್ಳಿಗಳಿಗೆ ಮಾದರಿಯಾಗುವ ಪ್ರಯತ್ನ ಮಾಡಿದೆ. ಗ್ರಾಮಸ್ಥರೆಲ್ಲರೂ ಈ ಸಮಾಜಮುಖಿ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ. ಈ ಶಿಬಿರದ ಜೊತೆಗೆ, ಆಗಸ್ಟ್ 14 ರಂದು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಧ್ಯರಾತ್ರಿ ಧ್ವಜಾರೋಹಣ ಕೂಡ ನಡೆಯಲಿದೆ ಎಂದು ಸಂಘದ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.