ನೌಕರರ ಬಳಗ ದಿಂದ ಬೆಳ್ಳಿಗನೂರ – ದಂಪತಿಗಳಿಗೆ ಗೌರವ ಸನ್ಮಾನ.

ಕನಸಾವಿ ಆ.11

ಇಳಕಲ್ಲ ಇಲ್ಲಿಗೆ ಸಮೀಪದ ಕನಸಾವಿ ಗ್ರಾಮದಲ್ಲಿ ಸುದೀರ್ಘ 33 ವರ್ಷ ಶಿಕ್ಷಕ ವೃತ್ತಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀ ಶಿವಪುತ್ರಪ್ಪ ದೇವರೆಡ್ಡೆಪ್ಪ ಬೆಳ್ಳಿಗನೂರ ಶಿಕ್ಷಕರ ನಿವೃತ್ತಿ ಸಮಾರಂಭವು ಅದ್ದೂರಿಯಾಗಿ ಜರುಗಿತು. ದೇವಪ್ಪ ಲೆಕ್ಕಿಹಾಳ ಹಾಗೂ ವಿದ್ಯಾರ್ಥಿನಿಯರ ಪ್ರಾರ್ಥನಾ ಗೀತೆ ಹಾಡಿದರು. ಸಮಾರಂಭದ ಸಾನಿಧ್ಯ ಶ್ರೀ ವಿಶ್ವನಾಥ ಸ್ವಾಮಿ ಎರಡೋಣಿ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪೊಲೀಸ್ ಅಧಿಕಾರಿ ರಾಮನಗೌಡ ಪಾಟೀಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿಕ್ಷಕ ಬಸಪ್ಪ ಹಂದ್ರಾಳ ಮಾತನಾಡಿ ಶಿವಪುತ್ರಪ್ಪ ಬೆಳ್ಳಿಗನೂರ ರವರ ಸೇವೆ ಶಿಕ್ಷಣ ಇಲಾಖೆಗೆ ಅವಿಸ್ಮರಣೀಯ ವಾಗಿದ್ದು.

ಶಿಕ್ಷಕರಿಗೆ ಆದ ಅನ್ಯಾಯ ಸರಕಾರದ ಗಮನಕ್ಕೆ ತರಲು ಮುಖ್ಯ ಪಾತ್ರ ವಹಿಸಿದ್ದರು ಎಂದು ಹೇಳಿದರು. ಇನ್ನೋರ್ವ ಅತಿಥಿ ಲಿಂಗಸಗೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಗೌಡರ ಮಾತನಾಡಿ ವಿದ್ಯಾರ್ಥಿ ಜೀವನದಿಂದಲೇ ಸಂಘಟನಾ ಚತುರತೆ ಹೊಂದಿದ್ದರ ಪರಿಣಾಮ ಇವತ್ತು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಅವಿರತ ಶ್ರಮ ವಹಿಸಿದ್ದರ ಪರಿಣಾಮ ಸಾಕಷ್ಟು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ರೂಪಿಸಿ ಕೊಂಡಿದ್ದಾರೆ.

ನಾವು ಇಬ್ಬರು ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವಾಗ ಇವರ ಕಾರ್ಯವೈಖರಿ ಕಂಡು ಬೇರಗಾಗಿದ್ದೆವು ಎಂದು ಹೇಳಿದರು. ಶರಣಪ್ಪ ಮುದ್ದುಗುಂದಿ ಪ್ರಸ್ತಾವಿಕವಾಗಿ ಮಾತನಾಡಿ ಬೆಳ್ಳಿಗನೂರ ಶಿಕ್ಷಕರ ಸದಾಕಾಲ ಕ್ರಿಯಾತ್ಮಕ ಚಟುವಟಿಕೆಯಲ್ಲಿ ಪಾಲ್ಗೊಂಡು ಮಕ್ಕಳ ಭವಿಷ್ಯ ಉಜ್ವಲ ಗೊಳಿಸಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಮೌನ ಮೂರ್ತಿಯಂತೆ ಕೆಲಸ ನಿರ್ವಹಿಸುತ್ತಾ ಮೌನದಿಂದಲೇ ಎಲ್ಲವನ್ನು ಸಾಧಿಸಲು ಸಾಧ್ಯ ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ ಎಂದರು.

ಸ್ಥಳೀಯರಾದ ಅಂದಾನಪ್ಪ ಕೋಡಿಹಾಳ ಶಿವಪುತ್ರಪ್ಪ ಬೆಳ್ಳಿಗನೂರ ಕುರಿತು ರಚಿಸಿದ ಗೀತೆ ಹಾಡಿದರು. ಶಿಕ್ಷಕ ತಿಪ್ಪಣ್ಣ ತಾವರಗೇರಿ ಮಾತನಾಡಿ ತಮ್ಮ ಹೆಸರಿಗೆ ತಕ್ಕಂತೆ ಬೆಳ್ಳಿ ಅಂತ ಮನಸ್ಸುಳ್ಳ ಬಂಗಾರದ ಕನಸು ಕಂಡು ನನಸು ಮಾಡಿದ ಇಂತಹ ಅಪರೂಪದ ಶಿಕ್ಷಕರು ನಮ್ಮ ನಾಡಿನಲ್ಲಿ ಜನಿಸಿದ್ದು ನಮ್ಮೆಲ್ಲರ ಭಾಗ್ಯ ಎಂದು ಹೇಳಿದರು. ಲೇಖಕ ಜಗದೀಶ ಗಿರಡ್ಡಿ ಮಾತನಾಡಿ. ಶಿವಪುತ್ರಪ್ಪ ಗುರುಗಳು ಹಾಲಕೆರೆ ಅನ್ನದಾನೇಶ್ವರನ ಕೃಪೆಯಿಂದ ತಮ್ಮ ಬದುಕು ಹಸನಾಗಿ ಸಾಗಿಸುವುದರ ಜೊತೆಗೆ ಅದೆಷ್ಟೋ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮದ ಹಿರಿಯರಿಗೆ ಯುವಕರಿಗೆ ಸ್ಪೂರ್ತಿಯಾಗಿ ಕೆಲಸ ಮಾಡಿದ್ದಾರೆ. ಹಾಲಕೆರೆ ಹಾಗೂ ಕನಸಾವಿ ಮಠದ ಇತಿಹಾಸ ಮೆಲುಕು ಹಾಕಿ ವೃತ್ತಿಯಲ್ಲಿ ಮಕ್ಕಳ ಭವಿಷ್ಯಕ್ಕೆ ದಾರಿ ದೀಪವಾದಂತೆ ಕನಸಾವಿ ಕೊಮಲಾಪುರ ಗ್ರಾಮದ ನಿರುದ್ಯೋಗ ಯುವಕರ ಬಾಳಿನಲ್ಲಿ ಜ್ಯೋತಿ ಬೆಳಗಿಸುವಂತಹ ಕೆಲಸ ಮಾಡುವ ಜವಾಬ್ದಾರಿ ಶಿವಪುತ್ರಪ್ಪ ಗುರುಗಳ ಮೇಲಿದೆ ಎಂದರು.

ಕಾರ್ಯಕ್ರಮದ ಕೇಂದ್ರ ಬಿಂದು ಶಿವಪುತ್ರಪ್ಪ ಬೆಳ್ಳಿಗನೂರ ಶಿಕ್ಷಕರು ಮಾತನಾಡಿ. ನಿಮ್ಮೆಲ್ಲರ ಹಾರೈಕೆ ಶುಭ ಸಂದೇಶಗಳು ನನಗೆ ಮತ್ತು ನನ್ನ ಕುಟುಂಬಕ್ಕೆ ತುಂಬಾ ಖುಷಿಯಾಗಿದ್ದು ಒಬ್ಬ ಸರ್ಕಾರಿ ನೌಕರನಾಗಿ ಅದರಲ್ಲೂ ಶಿಕ್ಷಕ ವೃತ್ತಿ ನಿರ್ವಹಿಸುವ ಭಾಗ್ಯವನ್ನು ಆ ದೇವರು ನನಗೆ ಕರುಣಿಸಿದ್ದನು ಅದನ್ನು ನಿಷ್ಪಕ್ಷಪಾತ ದಿಂದ ನಿಷ್ಠೆಯಿಂದ ಸರಕಾರದ ಕೆಲಸ ದೇವರ ಕೆಲಸವೆಂದು ಅರಿತು ನನ್ನ ಕರ್ತವ್ಯವನ್ನು ನಾನು ನಿರ್ವಹಿಸಿದ್ದರ ಫಲವೇ ಇವತ್ತು ನನ್ನ ಇಷ್ಟೆಲ್ಲ ಸನ್ಮಾನ ಸತ್ಕಾರ ಗೌರವ ಶುಭ ಹಾರೈಕೆಗೆ ಕಾರಣವಾಗಿದೆ ಎಂದು ಹೇಳಿದರು. ವೇದಿಕೆಯ ಮೇಲೆ ಸುದ್ದಿಮೂಲ ಪತ್ರಕರ್ತರಾದ ಶಶಿಧರ ಕಂಚಿಮಠ. ಹಾಗೂ ಗ್ರಾಮದ ಎಲ್ಲಾ ನೌಕರರ ವೃಂದ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಗುರು ಹಿರಿಯರು ವೇದಿಕೆ ಮೇಲೆ ಇದ್ದರು. ಕನಸಾವಿ ಕೋಮಲಾಪುರ ಗ್ರಾಮದ ಹಿರಿಯರಾದ ಶ್ರೀ ಶಂಕರಗೌಡ ಮಟ್ಟುರ,ವೆಂಕಣ್ಣ ಬೆಳ್ಳಿಗನೂರ, ಮಾಂತಗೌಡಪಾಟೀಲ, ಶರಣಪ್ಪ ಕಾರ್ಲಕುಂಟಿ, ಮಲ್ಲಪ್ಪ ಬ್ಯಾಲಿಹಾಳ, ನಾಗಪ್ಪ ಮೇಟಿ, ಅವಳಿ ಗ್ರಾಮದ ನಾಗರಿಕರು ಉಪಸ್ಥಿತರಿದ್ಧರು ಕಾರ್ಯಕ್ರಮದ ನಿರೂಪಣೆ ಅಮರೇಗೌಡ ದಿನ್ನಿ ಮಾಡಿದರು.

ಹವ್ಯಾಸಿ ಬರಹಗಾರರು:ಜಗದೀಶ್.ಗಿರಡ್ಡಿ.ಇಲಕಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button