ಕಾಲುವೆ ದುರಸ್ತಿ ಮಾಡದೆ ನೀರಾವರಿ ಇಲಾಖೆ, ರೈತರ ಜಮೀನಿಗೆ ನುಗ್ಗಿದ ನೀರು – ಸಾರ್ವಜನಿಕರ ಆಕ್ರೋಶ.
ಬಾಸಲಾಪುರ ಆ.12





ರೋಣ ತಾಲೂಕಿನ ಬಾಸಲಾಪುರ, ಹಿರೇಮಣ್ಣುರ್, ಹುಲ್ಲೂರ್ ಗ್ರಾಮದ ವ್ಯಾಪ್ತಿಯಲ್ಲಿರುವ ನೀರಾವರಿ ಕಾಲುವೆ ಒಡೆದ ಪರಿಣಾಮ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ನೀರಿನಲ್ಲಿ ನಿಂತಿದ್ದು, ರೈತರಿಗೆ ತೀವ್ರ ತೊಂದರೆ ಜೊತೆಗೆ ಅಪಾರ ಪ್ರಮಾಣ ಬೆಳೆಗಳಾದ ಹೆಸರು, ಈರುಳ್ಳಿ,ಗೋವಿನಜೋಳ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿ ತುಂಬಾ ನಷ್ಟ ಉಂಟಾಗಿದೆ.ಕಾಲುವೆಗಳು ಒಡೆದು ಹೋಗಿದ್ದರೂ ದುರಸ್ತಿ ಮಾಡುವಂತೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಹೇಳಿದರೂ ದುರಸ್ತಿಗೆ ಮುಂದಾಗಿಲ್ಲ. ಕಳೆದ ಎರಡು ದಿನಗಳಿಂದ ಸುರಿದ ಮಳೆಯಿಂದ ಕಾಲುವೆ ಮತ್ತಷ್ಟು ಒಡೆದು ಭಾರೀ ಪ್ರಮಾಣದಲ್ಲಿ ನೀರು ಹರಿದು ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಕಾಲುವೆಗಳ ಸೂಕ್ತ ನಿರ್ವಹಣೆ ಮಾಡಿದ್ದರೆ ಸಮಸ್ಯೆಯೇ ಬರುತ್ತಿರಲಿಲ್ಲಾ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ. ಈ ಎಲ್ಲಾ ಸಮಸ್ಯೆಯಿಂದ ಮನನೊಂದ ಬಾಸಲಾಪುರ ಹಾಗೂ ಹಿರೇಮಣ್ಣುರ ಹುಲ್ಲೂರ್ ರೈತರು ತಹಸೀಲ್ದಾರ ಕಚೇರಿಗೆ ಮನವಿ ಕೊಡಲುಬಂದ ಸಂದರ್ಭದಲ್ಲಿ ನಮ್ಮ ಸುಶೀಲವಾಣಿ ಪತ್ರಿಕಾ ಮಾಧ್ಯಮದೊಂದಿಗೆ ಎಲ್ಲಾ ರೈತರು ನೀರಾವರಿ ಇಲಾಖೆಯಿಂದ ಆದ ಅನ್ಯಾಯವನ್ನು ಹಂಚಿಕೊಂಡರು ಕಾಲುವೆ ನೀರು ಜಮೀನುಗಳಿಗೆ ನುಗ್ಗುವ ಜೊತೆಗೆ ಮುಂದಿನ ಬಾಸಲಾಪುರ ಗ್ರಾಮದ ಜನವಸತಿ ಪ್ರದೇಶಗಳಿಗೆ ಹೋಗುವ ರಸ್ತೆಯನ್ನು ಬಂದ್ ಮಾಡಿದ್ದು, ಈಗಾಗಲೇ ರಸ್ತೆ ನಿರ್ಮಾಣ ಮಾಡಲು ಕಾಮಗಾರಿಗೆ ಅನುಮೋದನೆ ದೊರೆತಿದ್ದರೂ ಗುತ್ತಿಗೆದಾರರು ಹಾಗೂ ಸದಸ್ಯರ ಮಧ್ಯದ ವಿವಾದದಿಂದಾಗಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಮುಂದಾಗುತ್ತಿಲ್ಲ ಎಂಬುದು ಸ್ಥಳೀಯ ನಿವಾಸಿ ಪಂಚಾಕ್ಷರಯ್ಯ ವಿರಕ್ತಮಠ ಅವರ ಆರೋಪವಾಗಿದೆ ಎಂದು ನಮ್ಮ ಸುಶೀಲವಾಣಿ ಪತ್ರಿಕಾ ಮಾಧ್ಯಮದ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡರುಅಷ್ಟೇ ಅಲ್ಲದೆನೀರಾವರಿ ಇಲಾಖೆಯು ಕಾಲುವೆಗಳ ದುರಸ್ತಿಗೊಳಿಸದ ಕಾರಣ ಈ ಹಾನಿ ಸಂಭವಿಸಿದೆ. ಕಾಲುವೆಗಳ ಸೂಕ್ತ ನಿರ್ವಹಣೆ ಮಾಡಿದ್ದರೆ ಸಮಸ್ಯೆಯೇ ಬರುತ್ತಿರಲಿಲ್ಲ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆಹಾಗೂ ನಮ್ಮ ಎಲ್ಲಾ ರೈತರ ಸಮಸ್ಯೆ ಸರಿಪಡಿಸದೆ ಇದ್ದಲ್ಲಿ ಮುಂದಿನ ದಿನಮಾನದಲ್ಲಿ ನಾವು ರೈತರೆಲ್ಲರೂ ಸೇರಿ ಉಗ್ರವಾದ ಹೋರಾಟವನ್ನು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು ಅದೇ ಈ ಸಮಯದಲ್ಲಿ ಎಲ್ಲಾ ರೈತರು ಸೇರಿ ಮನವಿಯನ್ನು ತಹಸೀಲ್ದಾರ್ ರವರಿಗೆ ನೀಡಿದರುಆ ಮನವಿಯನ್ನು ಸ್ವೀಕರಿಸಿದ ತಹಸೀಲ್ದಾರ್ ನಾಗರಾಜ್ ಕೆ ರವರು ನಮ್ಮ ಸುಶೀಲವಾಣಿ ಪತ್ರಿಕಾ ಮಾಧ್ಯಮದೊಂದಿಗೆ ಮಾತನಾಡಿದರುಈ ಸಮಯದಲ್ಲಿ ಈರಣ್ಣ ಯಲ್ಲಪ್ಪ ಶಿರೋಳ್,ರುದ್ರಪ್ಪ ಶೇಕಪ್ಪ ಹೂಗಾರ್,ಶಂಕರಗೌಡ ನಾಗನಗೌಡ ಜು0ಜನಗೌಡ್ರವೀರೇಶ್ ಹೂಗಾರ,ಚೆನ್ನವೀರಯ್ಯ ಪೂಜಾರ ಪ್ರವೀಣ್ ದೇಸಾಯಿಗೌಡ್ರ,ಮಹೇಶಗೌಡ ಪಾಟೀಲ್ ಪಂಚಾಕ್ಷರಿ ವೀರಕ್ತ ಮಠ ಪಾಲಾಕ್ಷಗೌಡ ಜುoಜನಗೌಡ ಪ್ರವೀಣ್ ತಿ ದೇಸಾಯಿಗೌಡ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ