ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ರೂಢಿಸಿ ಕೊಳ್ಳಬೇಕು – ಇ.ಓ ಚಂದ್ರಶೇಖರ್ ಕಂದಕೂರ್.

ರೋಣ ಆ .12

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸಂಸತ್ತು ಜನಾದೇಶದ ದೇಗುಲ ಎಂದು ಡಾ, ಬಿ.ಆರ್ ಅಂಬೇಡ್ಕರ್ ಹೇಳಿದ ವಾಕ್ಯವನ್ನು ಹೇಳುವ ಮೂಲಕ ಸಂಸತ್ತಿನ ಮಹತ್ವವನ್ನು ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ರೂಢಿಸಿ ಕೊಳ್ಳಬೇಕು. ಜವಾಬ್ದಾರಿಗಳನ್ನು ಈಗಿನಿಂದಲೇ ಅರ್ಥೈಸಿ ಕೊಂಡು ಗುರಿಯ ಕಡೆ ಮುನ್ನಡೆಯ ಬೇಕು. ಕಾಲೇಜಿನಲ್ಲಿ ನಡೆಯುವ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಹಾಗೆಯೇ ವಿದ್ಯಾರ್ಥಿಗಳು ತಮ್ಮ ಮುಂದಿನ ಭಾವಿ ಭವಿಷ್ಯತ್ತನ್ನು ಉತ್ತಮ ರೀತಿಯಲ್ಲಿ ರೂಪಿಸಿ ಕೊಳ್ಳಬೇಕು ತಮ್ಮ ಗುರಿಯನ್ನು ಮುಟ್ಟಬೇಕು ಎಂದು ರೋಣ ಹಾಗೂ ಗಜೇಂದ್ರಗಡ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಕಂದುಕೂರ ಸುದೀರ್ಘವಾಗಿ ಮಾತನಾಡಿದರುರೋಣ ನಗರದ ಪ್ರಸಿದ್ಧ ಮಹಾವಿದ್ಯಾಲಯವಾದ ಶ್ರೀ ಶರಣಬಸವೇಶ್ವರ ಪದವಿ ಪೂರ್ವ ವಿದ್ಯಾಲಯದ ಆವರಣದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಕ್ರೀಡೆ ಸಂಸ್ಕೃತಿಕ ಎನ್ಎಸ್ಎಸ್ ಚಟುವಟಿಕೆ ಕಾಲೇಜು ಸಂಸತ್ ಉದ್ಘಾಟನೆಕಾರ್ಯಕ್ರಮ ತುಂಬಾ ಅದ್ದೂರಿಯಾಗಿ ನಡೆಯಿತುಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಚೇರ್ಮನ್ನರು ಹಾಗೂ ಭಾರತ ಆಹಾರ ನಿಗಮದ ನಿರ್ದೇಶಕರಾದ ರವಿ ಬಿ ದಂಡಿನ್ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಅತ್ಯಂತ ಸ್ಮರಣೀಯ ಸಮಯವೆಂದರೆ ಅವರು ವಿದ್ಯಾರ್ಥಿಯಾಗಿರುವಾಗ ಶಿಸ್ತು ನಡವಳಿಕೆಯನ್ನು ರೂಪಿಸಲು ಮತ್ತು ಉತ್ಪಾದಕತೆಯನ್ನು ಸುಧಾರಿಸಲು ಸಹಾಯ ಮಾಡುವ ಒಂದು ಪ್ರಮುಖ ಗುಣವಾಗಿದೆ. ಇದರರ್ಥ ತನ್ನನ್ನು ತಾನು ನಿಯಂತ್ರಿಸಿಕೊಳ್ಳುವುದು, ಜವಾಬ್ದಾರಿಯುತವಾಗಿರುವುದು ಮತ್ತು ಗುರಿಗಳ ಮೇಲೆ ಕೇಂದ್ರೀಕರಿಸುವುದು. ವಿದ್ಯಾರ್ಥಿ ಜೀವನದಲ್ಲಿ, ಶಿಸ್ತು ವಿಶೇಷವಾಗಿ ಮುಖ್ಯವಾಗಿದೆ ಏಕೆಂದರೆ ಅದು ಉತ್ತಮ ಅಂಕಗಳನ್ನು ಗಳಿಸಲು, ವೈಯಕ್ತಿಕ ಬೆಳವಣಿಗೆಗೆ ಮತ್ತು ಭವಿಷ್ಯದ ಯಶಸ್ಸಿಗೆ ಸಹಾಯ ಮಾಡುತ್ತದೆ. ಎಂದು ಮಾತನಾಡಿದರುಈ ಸಮಯದಲ್ಲಿ ವೇದಿಕೆಯ ಮೇಲೆ ಈ ಕಾರ್ಯಕ್ರಮವನ್ನು ಎಸ್ ವಿ ಸಂಕನಗೌಡ್ರ ನಿರೂಪಿಸಿದರು ಹಾಗೂ ಅತಿಥಿ ಮಹನೀಯರನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ ಎ ಎಚ್ ನಾಯ್ಕರ್ ಸ್ವಾಗತಿಸಿದರು ನಂತರ ವೇದಿಕೆ ಮೇಲಿರುವ ಮಹನೀಯರಿಗೆ ಉಪನ್ಯಾಸಕರಾದ ಎಂಎಚ್ ನಾಯ್ಕರ್ ರವರು ಎಲ್ಲರಿಗೂ ಮಾಲಾರ್ಪಣೆ ಕಾರ್ಯಕ್ರಮದ ಮೂಲಕ ಗೌರವ ಸಲ್ಲಿಸಿದರು ನಂತರ ಕಾರ್ಯಕ್ರಮದಲ್ಲಿ ಕುಮಾರಿ ಲಲಿತ ನಂದೇಪ್ ಗೌಡ್ರು ಉಪನ್ಯಾಸಕಿಯರು ವಂದನಾರ್ಪಣೆ ಕಾರ್ಯಕ್ರಮ ನೆರವೇರಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು ಈ ಸಮಯದಲ್ಲಿ ವೇದಿಕೆ ಮೇಲೆ ಸಂಕೇತ. ಆರ್. ದಂಡಿನ,* ಉಮೇಶ್. ಹೀರೆಮಠ, ಜಿ. ಸಿ. ಜಂಪ್ಪಣ್ಣವರ ಸ್ಥಾನಿಕ ಮುಖ್ಯಸ್ಥರಾದ ಆಯ್. ಬಿ. ದಂಡಿನ, ಪ್ರಾಚಾರ್ಯರಾದ ಶ್ರೀಮತಿ. ಎ. ಎಚ್ ನಾಯ್ಕರ, ಪದವಿ ಕಾಲೇಜು ಪ್ರಾಚಾರ್ಯರಾದ . ಸಿ. ಬಿ. ಪೋಲಿಸ ಪಾಟೀಲ್, ಪ್ರೌಢ ಶಾಲೆ ಮುಖ್ಯೋಪಾಧ್ಯಾಯರಾದ ವಾಯ್. ಎಸ್. ಕುರಿ, ಮಹಾವಿದ್ಯಾಲಯದ ಉಪನ್ಯಾಸಕರಾದ ಎಸ್. ಬಿ. ಶಿರಗುಂಪಿ, ಎಸ್. ವ್ಹೀ. ಸಂಕನಗೌಡ್ರ, ಡಾ. ಎಸ್. ಆರ್. ನದಾಫ, ಯು. ಬಿ. ಬಸನಗೌಡ್ರ, ಎಂ. ಎಚ್. ನಾಯ್ಕರ, ಎಸ್. ಎ. ನದಾಫ, ಕುಮಾರಿ. ಲಲಿತಾ. ನಂದೆಪ್ಪಗೌಡ್ರ, ಕೆ, ಕೆ, ಹೀರೆಕಲ್ಲಪ್ಪನವರ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button