ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಮಡಿಲಿಗೆ ಅಧ್ಯಕ್ಷಯಾಗಿ – ಸುವರ್ಣ ತಳವಾರ ಆಯ್ಕೆ.
ಜಕ್ಕಲಿ ಆ.12

ಆಗಸ್ಟ್ 11 ಸೋಮುವಾರ ರಂದು ಗದಗ ಜಿಲ್ಲೆಯ ರೋಣ ತಾಲೂಕಿನ ನರೇಗಲ್ ಸಮೀಪದ ಜಕ್ಕಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನೆರೆವೇರಿತು.ಕಾಂಗ್ರೆಸ್ ಬೆಂಬಲಿತಿಯಾಗಿ ಸುವರ್ಣ ಮುತ್ತಪ್ಪ ತಳವಾರ ಬಿಜೆಪಿ ಬೆಂಬಲಿತಿಯಾಗಿ ಗಂಗವ್ವ ದ್ಯಾಮಪ್ಪ ಜಂಗಣ್ಣವರ ಚುನಾವಣೆ ಅಭ್ಯರ್ಥಿಯಾಗಿ ಜುಗಲ್ಬಂದಿ ಏರ್ಪಟ್ಟಿತು.ಒಟ್ಟು 13 ಜನ ಸದಸ್ಯತ್ವ ಬಲ ಹೊಂದಿರುವ ಈ ಜಕ್ಕಲಿ ಗ್ರಾ.ಪಂ ಯಲ್ಲಿ ಕಾಂಗ್ರೆಸ್ ಬೆಂಬಲಿತ ಸುವರ್ಣ ಮುತ್ತಪ್ಪ ತಳವಾರ ಅವರಿಗೆ 8 ಮತ ಹಾಗೂ ಬಿಜೆಪಿ ಬೆಂಬಲಿತಿಯಾಗಿ ಗಂಗವ್ವ ದ್ಯಾಮಪ್ಪ ಜಂಗಣ್ಣವರವರಿಗೆ 4 ಮತ ಬಂದಿದ್ದು. ಇನ್ನೂಳಿದ 1 ಮತ ತಿರಸ್ಕೃತವಾಗಿ ರದ್ದಾಗಿತ್ತು. 8 ಮತಗಳನ್ನು ಪಡೆದ ಕಾಂಗ್ರೆಸ್ ಬೆಂಬಲಿತ ಸುವರ್ಣ ಮುತ್ತಪ್ಪ ತಳವಾರ ಅಧ್ಯಕ್ಷೆಯಾಗಿ ಆಯ್ಕೆ ಯಾಗುವುದರೊಂದಿಗೆ ಅಧ್ಯಕ್ಷ ಸ್ಥಾನಕ್ಕೆ ವಿಜಯ ಶಾಲಿಯಾದರು.ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಗೆ ಚುನಾವಣಾ ಅಧಿಕಾರಿಯಾಗಿ ರೋಣ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರು ಕಾರ್ಯ ನಿರ್ವಹಿಸಿ ನಮ್ಮ ಮಾಧ್ಯಮ ದೊಂದಿಗೆ ಮಾತನಾಡಿದ ಅವರು ಒಟ್ಟು ಈ ಗ್ರಾಮ ಪಂಚಾಯಿತಿಯಲ್ಲಿ 13 ಜನ ಸದಸ್ಯರ ಬೆಂಬಲ ಹೊಂದಿದ್ದು ಸುವರ್ಣ ಮುತ್ತಪ್ಪ ತಳವಾರ ರವರಿಗೆ 8 ಮತ.ಹಾಗೂ ಗಂಗವ್ವ ಜಂಗಣ್ಣವರಿಗೆ 4 ಮತಗಳು ಬಂದಿದ್ದು. 1 ಮತವನ್ನು ತಿರಸ್ಕೃತ ಮತವೆಂದು ರದ್ದು ಮಾಡಲಾಯಿತು. 8 ಮತಗಳನ್ನು ಪಡೆದ ಸುವರ್ಣ ಮುತ್ತಪ್ಪ ತಳವಾರ ಅವರು ಅಧ್ಯಕ್ಷೆಯಾಗಿ ಚುನಾಯಿತರಾಗಿದ್ದಾರೆ ಎಂದು ಹೇಳಿದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸಂದೇಶ್ ದೊಡ್ಡಮೇಟಿ ಮಾತನಾಡಿ. ಈ ಒಂದು ಗೆಲವು ನಮ್ಮ ಕಾಂಗ್ರೆಸ್ ಪಕ್ಷದ ಸ್ವಾಭಿಮಾನದ ಗೆಲವು ಮುಂದಿನ ದಿನ ಮಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ 9 ಜನ ಸದಸ್ಯರು ಸೇರಿದಂತೆ ಇನ್ನೂಳಿದ ಸದಸ್ಯರನ್ನು ಒಗ್ಗೂಡಿಸಿ ಕೊಂಡು ಗ್ರಾಮವನ್ನು ಅಭಿವೃದ್ಧಿ ಕೊಂಡೋಯುತ್ತಾರೆ ನೂತನವಾಗಿ ಅಧ್ಯಕ್ಷೆ ಸ್ಥಾನಕ್ಕೆ ಆಯ್ಕೆ ಯಾಗಿರುವ ಸುವರ್ಣ ತಳವಾರ ರವರಿಗೆ ಕಾಂಗ್ರೆಸ್ ಪಕ್ಷದ ಪರವಾಗಿ ಅಭಿನಂದನೆ ಹೇಳಿದರು. ಬಳಿಕ 4 ನೇ. ವಾರ್ಡ್ ನ್ ಸದಸ್ಯ ಸಂತೋಷ ಕೋರಿ ಮಾತನಾಡಿ, ಈ ಮೊದಲು ಇದ್ದ ಅಧ್ಯಕ್ಷೆ ಗಂಗವ್ವ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳದೆ ತಮಗೆ ಇಷ್ಟ ಬಂದಂತೆಲ್ಲ ಆಡಳಿತ ಮಾಡಿದ್ದರಿಂದ ನಮ್ಮ ಗ್ರಾಮ ಅಭಿವೃದ್ಧಿಯ ಮರೀಚಿಕೆ ಯಾಗಿದ್ದರಿಂದ 9 ಜನ ಸದಸ್ಯರು ಆವಿಶ್ವಾಸಕ್ಕೆ ಮಂಡನೆ ಮಾಡಿದ್ದೇವೆ ಇವತ್ತಿನ ಗೆಲವು ನನಗೆ ತುಂಬಾ ಸಂತಸವನ್ನು ತಂದಿದೆ ಇನ್ನೂಳಿದ ಆಡಳಿತ ಸಮಯವನ್ನು ನಾವೆಲ್ಲರೂ ಗ್ರಾಮವನ್ನು ಅಭಿವೃದ್ಧಿಯತ್ತ ಗೊಂಡೋಯುತ್ತೇವೆ ಎಂದು ಹೇಳಿದರು.ಅಧ್ಯಕ್ಷ ಚುನಾವಣೆ ವೇಳೆ, ಶಾಂತಿ ಕಾಪಾಡಲು ರೋಣ ಠಾಣಾ ಸಿ.ಪಿ.ಐ ಎಸ್.ಎಸ್ ಬೀಳಗಿ. ನರೇಗಲ್ ಠಾಣೆಯ ಪಿ.ಎಸ್.ಐ ಐಶ್ವರ್ಯ ನಾಗರಾಳ್ ನೇತತ್ವದಲ್ಲಿ ಹಾಗೂ ಸಿಬ್ಬಂದಿಗಳು ಗ್ರಾ.ಪಂ ಕಾರ್ಯಾಲಯದ ಮುಂದೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಕ್ಷಕ್ಕೆ ಒಲಿದಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಈ ವೇಳೆಯಲ್ಲಿ ಗ್ರಾ.ಪಂ ಸದಸ್ಯರಾದ ಶಿವರಾಜ ಮುಗಳಿ, ರಮೇಶ ಪಲ್ಲೇದ, ಸಂತೋಷ ಕೋರಿ, ಗುರಪ್ಪ ರೋಣದ, ಬಸವರಾಜ ಶ್ಯಾಶೆಟ್ಟಿ, ಸದಸ್ಯೆಯರಾದ ಅನ್ನಪೂರ್ಣ ಮುಗಳಿ, ಬಿಬಿಜಾನ ಕದಡಿ, ನಿರ್ಮಲಾ ಆದಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಸಂದೇಶ ದೊಡ್ಡಮೇಟಿ, ವೀರಭದ್ರಪ್ಪ ಗಾಣಿಗೇರ, ರವೀಂದ್ರ ಮುಗಳಿ. ಉಮೇಶ ಮೇಟಿ.ಶ್ರೀನಿವಾಸ ಹುಲ್ಲೂರ, ಮುತ್ತು ಮೇಟಿ, ಪ್ರಕಾಶ ಕೋರಿ, ಬಂದೇನವಾಜ್ ಗಡಾದ, ಚನ್ನಬಸವ ಅರಹುಣಸಿ, ಮುತ್ತಪ್ಪ ತಳವಾರ, ಫಕೀರಪ್ಪ ಮಾದರ, ಬಸವರಾಜ ಮುಗಳಿ, ಅಂದಪ್ಪ ಕಟ್ನಳ್ಳಿ, ವಿಜಯ ತಳವಾರ, ಯಲ್ಲಪ್ಪ ಮಾದರ, ಮಾಬುಸಾಬ ನದಾಫ್, ರಾಜಸಾಬ ಜಿಡ್ಡಿಮನಿ ಸೇರಿದಂತೆ ಇನ್ನಿತರರು ಇದ್ದರು.
ವರದಿಅಂದಪ್ಪ.ಮಾದರ.ಗದಗ