ಸದ್ಗುಣಗಳ ಅನುಸರಣೆಯಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ – ಡಾ, ಭೂಮಿಕ ಅನಿಸಿಕೆ.
ಚಳ್ಳಕೆರೆ ಆ.12

ಮಕ್ಕಳು ತಮ್ಮ ಬಾಲ್ಯದಲ್ಲಿಯೇ ಸದ್ಗುಣಗಳನ್ನು ಅಳವಡಿಸಿ ಕೊಳ್ಳುವುದರಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕಿ ಡಾ, ಭೂಮಿಕ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ದಲ್ಲಿ ಪಾಲ್ಗೊಂಡು ಅವರು “ನೀತಿ ಕಥೆಗಳ” ಬಗ್ಗೆ ಉಪನ್ಯಾಸ ನೀಡಿದರು.

ಈ ಶಿಬಿರದ ಆರಂಭದಲ್ಲಿ ಭಜನೆಯನ್ನು ಯತೀಶ್.ಎಂ ಸಿದ್ದಾಪುರ ಹಾಗೂ ಕುಮಾರಿ ಹರ್ಷಿತಾ, ಪ್ರತೀಕ್ಷಾ, ಯಶಸ್ವಿ ನಡೆಸಿ ಕೊಟ್ಟರೆ ಮಕ್ಕಳಿಂದ ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ, ನಾಮಸ್ಮರಣೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ ಹಾಗೂ ಸ್ವದೇಶ ಮಂತ್ರದ ಪಠಣ ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ಆಟಗಳನ್ನು ಸಂತೋಷಕುಮಾರ ಅವರು ಆಡಿಸಿದರು. ಶಿಬಿರದಲ್ಲಿ ವಿಷ್ಣು, ಶಶಾಂಕ್, ವೈಷ್ಣವಿ, ಯುಕ್ತ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ:ಯತೀಶ್.ಎಂ ಸಿದ್ದಾಪುರ, ಚಳ್ಳಕೆರೆ.