ಜ್ಞಾನ ವಿಸ್ತರಣೆಗೆ – ಗ್ರಂಥಾಲಯ ಸಹಕಾರಿ.
ಕೊಟ್ಟೂರು ಆ.12





ವ್ಯಕ್ತಿಯ ಜ್ಞಾನವನ್ನು ವಿಸ್ತರಿಸಲು ಗ್ರಂಥಾಲಯ ಬಹಳ ಉಪಯುಕ್ತ ಮಾಧ್ಯಮವಾಗಿದೆ ಎಂದು ಕೊಟ್ಟೂರು ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ಡಾ, ಬಿ.ಆನಂದಕುಮಾರ ಹೇಳಿದರು.ಕೊಟ್ಟೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗ್ರಂಥ ಪಾಲಕರ ದಿನಾಚಣೆ ಸಮಾರಂಭದಲ್ಲಿ ಗ್ರಂಥಾಲಯ ಪಿತಾಮಹರಾದ ಡಾಕ್ಟರ್ ಎಸ್. ರಂಗನಾಥನ್ ರವರ ಭಾವ ಚಿತ್ರಕ್ಕೆ ಪೂಜೆ ಹಾಗೂ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.ಗ್ರಾಮೀಣ ಭಾಗದಲ್ಲಿ ಹೆಚ್ಚಿನ ವರ್ಗದ ವ್ಯಕ್ತಿಗಳಿಗೆ ಆಸಕ್ತಿ ಅಥವಾ ಅಗತ್ಯವಿರುವ ಎಲ್ಲಾ ಪುಸ್ತಕಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ ಮತ್ತು ಹಣದ ಅನುಪಸ್ಥಿತಿಯಲ್ಲಿ ಜ್ಞಾನ ಮತ್ತು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ. ಆದರೆ ಗ್ರಂಥಾಲಯದ ಮೂಲಕ ಎಲ್ಲಾ ರೀತಿಯ ಪುಸ್ತಕಗಳು ಮತ್ತು ಅವುಗಳ ಜ್ಞಾನವನ್ನು ಸುಲಭವಾಗಿ ಬಳಸಿ ಕೊಳ್ಳಬಹುದು ಎಂದರು. ಪುಸ್ತಕಗಳು ಮಾನವರ ಉತ್ತಮ ಸ್ನೇಹಿತರು ಎಂದು ಹೇಳಲಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ಸ್ನೇಹಿತ ನೊಂದಿಗೆ ಪ್ರತಿ ಕ್ಷಣದಲ್ಲಿ, ಪ್ರತಿ ಸಮಸ್ಯೆಯಲ್ಲಿ, ಸಹಕಾರಿ ಯಾಗುತ್ತಾನೆ. ಅದೇ ರೀತಿಯಲ್ಲಿ ಪುಸ್ತಕಗಳು ಮನುಷ್ಯನಿಗೆ ಪ್ರತಿಯೊಂದು ಕಷ್ಟಕರ ಪ್ರಶ್ನೆ, ಪರಿಸ್ಥಿತಿಯ ಪರಿಹಾರವನ್ನು ಪುಸ್ತಕಗಳಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು. ಸಹಾಯಕ ನಿರ್ದೇಶಕರು (ಗ್ರಾ.ಉ) ಶ್ರೀ ಹೆಚ್.ವಿಜಯಕುಮಾರ್, ಗ್ರಾಮ ಡಿಜಿ ವಿಕಸನ ಜಿಲ್ಲಾ ಸಂಯೋಜಕರು ಶ್ರೀಧರ್ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಷಿಪ್ ಸಮಂತ್ ಇವರು ಮಾತನಾಡಿದರು. ಗ್ರಂಥಪಾಲಕಿ ಸುಸ್ಮಿತಾ ಪ್ರಾರ್ಥಿಸಿದರು. ಗ್ರಂಥಪಾಲಕ ಶ್ರೀ ಲೋಕೇಶ್ ಬಿ ಸ್ವಾಗತಿಸಿದರು. ಪ್ರಸ್ತಾವಿಕ ನುಡಿಯನ್ನು ಚಂದ್ರಯ್ಯ ಟಿ ಎಂ. ನಿಂಬಳಗೆರೆ ಗ್ರಂಥಪಾಲಕರು ನೆರವೇರಿಸಿದರು. ವಂದನಾರ್ಪಣೆಯನ್ನು ಶ್ರೀ ರಾಮಪ್ಪ ರಾಂಪುರ ಇವರು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಗಂಥಪಾಲಕರ ದಿನಾಚರಣೆಯ ಪ್ರಯುಕ್ತ ತಾಲೂಕು ಮಟ್ಟದ ಉತ್ತಮ ಗ್ರಂಥಪಾಲಕ ರೆಂದು ಗುರುತಿಸಿ ಸನ್ಮಾನಿಸಲಾಯಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು