ಪಿ.ಕೆ.ಪಿ.ಎಸ್ ಅಧ್ಯಕ್ಷರಾಗಿ ರಾಜುಗೌಡ ಪಾಟೀಲ – ಅವಿರೋಧ ಆಯ್ಕೆ.
ಗೋಲಗೇರಿ ಆ.13





ಸಿಂದಗಿ ತಾಲ್ಲೂಕಿನ ಗೋಲಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಯಾದ ರಾಜುಗೌಡ ಪಾಟೀಲ ಡಂಬಳ ಅವರು ಸರ್ವ ನಿರ್ದೇಶಕರು ಒಪ್ಪಂದ ಪ್ರಕಾರ ಅಧ್ಯಕ್ಷರಾಗಿ ಆಯ್ಕೆ ಯಾದರು, ಒಬ್ಬರು ನಿರ್ದೇಶಕರಾಗಿ ಅಧ್ಯಕ್ಷರು ಆಗುವ ಆಶಾ ಇರುತ್ತದೆ ಆದರೂ ನಮ್ಮ ಪಿಕೆಪಿಎಸ್ ನಲ್ಲಿ ಹಂತ ಹಂತವಾಗಿ ಅಧ್ಯಕ್ಷರಾಗಿ ಮಾಡಿದ್ದೇನೆ ಹಾಗೂ ಎಲ್ಲರಿಗೂ ಅಧಿಕಾರ ಎನ್ನುವುದು ಇರುತ್ತದೆ. ಎಂದು ತಾಲೂಕು ಬಿಜೆಪಿ ಮಂಡಳದ ಅಧ್ಯಕ್ಷರಾದ ಸಂತೋಷಗೌಡ ಪಾಟೀಲ ಮಾತನಾಡಿದರು.

ಈ ಸಂದರ್ಭದಲ್ಲಿ ಪಿಕೆಪಿಎಸ್ ಉಪಾಧ್ಯಕ್ಷರಾದ ಚಂದ್ರಕಲಾ ಬಿರಾದಾರ ಹಾಗೂ ನಿರ್ದೇಶಕರು ಚುನಾವಣೆಯ ಅಧಿಕಾರಿಗಳು, ಗ್ರಾಮದ ಮುಖಂಡರಾದ ಪ್ರಭುಗೌಡ ಪಾಟೀಲ ಡಂಬಳ, ಶ್ರೀಶೈಲ ಚಳಗಿ ಅಮ್ಮೋಗಿ ಜೈನಾಪೂರ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸೈಪಾನಸಾಬ ಕೋರವಾರ ಮಹಾದೇವ ರಾಠೋಡ ಹಾಗೂ ಗ್ರಾಮದ ಎಲ್ಲಾ ಹಿರಿಯ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ