ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ 2 ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಿಸಿದ – ಅಬ್ದುಲ್ ರೆಹಮಾನ್.
ಕೂಡ್ಲಿಗಿ ಆ.13





ಸ್ನೇಹಿತರ ಬಳಗದ ಅಧ್ಯಕ್ಷರಾದ ಬಿ.ಅಬ್ದುಲ್ ರೆಹಮಾನ್ ರವರ ನಿಸ್ವಾರ್ಥ ಸೇವೆಗೆ ಪತ್ರಿಕಾ ಮಾಧ್ಯಮದಿಂದ ಹ್ಯಾಟ್ಸಾಫ್ ಟು ಯು
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದಲ್ಲಿ ಬರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೊಲ್ಲಮ್ಮ ಮಂದಿರ ಕೂಡ್ಲಿಗಿ ಹಾಗೂ ಉರ್ದು ಶಾಲೆ ಕೂಡ್ಲಿಗಿ ಹಾಗೆ ತಾಲೂಕಿನಲ್ಲಿ ಅನೇಕ ವಿವಿಧ ರೀತಿಯ ಸಾಮಾಜಿಕ ಕಾಳಜಿಯನ್ನು ಇಟ್ಟುಕೊಂಡು ಸಮಾಜದಲ್ಲಿ ತಮ್ಮದೇ ಆದಂತಹ ಅಳಿಲು ಸೇವೆಯನ್ನು ಮಾಡುತ್ತಿರುವಂತಹ ಸ್ನೇಹಿತರ ಬಳಗದ ಅಧ್ಯಕ್ಷರಾದ ಅಬ್ದುಲ್ ರೆಹಮಾನ್ ಹಾಗೂ ಇತರರು ಇವರಿಂದ ಈ ದಿನ ಆಗಸ್ಟ್ 15 ರ ಪ್ರಯುಕ್ತವಾಗಿ ನೋಟ್ ಬುಕ್ ಮಗ್ಗಿ ಪುಸ್ತಕ ರಬ್ಬರ್ ಬ್ಯಾಂಡ್ ಚಿಕ್ಕ ಮಕ್ಕಳಿಗೆ ಶಿಕ್ಷನಾತ್ಮಕವಾಗಿ ಒಳ್ಳೆಯ ಸೇವೆ ಸಲ್ಲಿಸಿರುವುದನ್ನು ತಿಳಿದು ಸರ್ಕಾರಿ ಶಾಲೆಯ ಓದಲಿಕ್ಕೆ ಬರೆಯುವುದಕ್ಕೆ ಉತ್ತಮವಾದ ಸೇವೆ ಯಾಗಿರುವ ಶಿಕ್ಷಣವನ್ನು ಸಮಾಜದ ಅಳಿಲು ಸೇವೆಯನ್ನು ಅಂಬೇಡ್ಕರ್ ರವರು ಹೇಳಿದಂತೆ ವಿದ್ಯೆಯೆಂಬದು ಹುಲಿ ಹಾಲು ಇದ್ದಂತೆ ಅದನ್ನು ಕುಡಿದವನು ಒಂದು ದಿನ ಗರ್ಜಿಸಲೇ ಬೇಕೆಂಬ ಸಿದ್ಧಾಂತದಿಂದ ಸ್ನೇಹಿತರ ಬಳಗದಿಂದ ಸರಕಾರಿ ಶಾಲೆಗಳಿಗೆ ಪುಸ್ತಕ ನೀಡಿದರು.
ಹಾಗೆಯೇ ಈ ಸಂದರ್ಭದಲ್ಲಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಕೂಡ್ಲಿಗಿ ಕೊಟ್ಟೂರು ರಸ್ತೆಯಲ್ಲಿ ಬರುವ ಈ ಶಾಲೆಗೆ ಸಹ ವಿದ್ಯಾರ್ಥಿಗಳಿಗೆ ಪುಸ್ತಕ ಪೆನ್ನು ರಬ್ಬರ್ ವಿತರಿಸಿದರು ಸಮ ಸಮಾಜ ಸೇವೆಯಿಂದಲೇ ಆತ್ಮ ತೃಪ್ತಿ. ಎನ್ನುವುದು ಧ್ಯೇಯ ವಾಕ್ಯ. ಕೂಡ್ಲಿಗಿ ಸ್ನೇಹಿತರ ಬಳಗದ ಅಧ್ಯಕ್ಷ ಬಿ.ಅಬ್ದುಲ್ ರೆಹಮಾನ್ ಮತ್ತು ಸದಸ್ಯರೊಂದಿಗೆ ಈ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೊಲ್ಲಮ್ಮ ಮಂದಿರದ ಮುಖ್ಯ ಗುರುಗಳು ಮಲ್ಲಮ್ಮ, ಹಾಗೂ ಶಿಕ್ಷಕರಾದ ಮುರುಗೇಂದ್ರ, ಅಂಜಿನಮ್ಮ. ಬಿ.ಅಶ್ವಿನಿ, ಹಾಗೆ ಉರ್ದು ಶಾಲೆಯ ಮುಖ್ಯ ಗುರುಗಳಾದ ರಜಿಯಾ ಬೇಗಮ್ ಫರ್, ಮಂಜುಳಾ ಹಾಗೂ ವಿದ್ಯಾರ್ಥಿಗಳಿದ್ದರು ಎಂದು ವರದಿಯಾಗಿದೆ.