ಶಾಲಾ ಮಕ್ಕಳ ಮಾರಕ ಕಾಯಿಲೆಗಳು ತಡೆಗಟ್ಟಲು ಚುಚ್ಚುಮದ್ದು ಇಂಜೆಕ್ಷನ. ಲಸಿಕೆ ನೀಡಿದಾಗ ಬಾವು ಮತ್ತು ನೋವು ಸಹಜ ಪಾಲಕರಲ್ಲಿ ಭಯ ಬೇಡ – ಸಹಕಾರ ಅಗತ್ಯ ವೈ.ಎಂ ಪೂಜಾರ.

ಆಲಮೇಲ ಆ.13

ಪಟ್ಟಣದ ನಿರ್ಮಲಾಲಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮಕ್ಕಳಿಗೆ. ಹಮ್ಮಿಕೊಂಡಿರುವ ಲಸಿಕೆಗಳ ಅರಿವು ಮತ್ತು ಹದಿ ಹರೆಯದ ಮಕ್ಕಳ ಸಮಸ್ಯೆಗಳು ಹಾಗೂ ಪರಿಹಾರಗಳ ಅರಿವು ಕಾರ್ಯಕ್ರಮ ವೈ.ಎಂ ಪೂಜಾರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಚಾಲನೆ ನೀಡಿ ಗಂಟಲು ಮಾರಿ. ನಾಯಿ ಕೆಮ್ಮು. ಧನರು ವಾಯು. ಮಾರಕ ಕಾಯಿಲೆಗಳು ತಡೆಗಟ್ಟಲು ಶಾಲಾ ಮಕ್ಕಳಿಗೆ ಲಸಿಕೆ ನೀಡಲು ಆರೋಗ್ಯ ಇಲಾಖೆಯೊಂದಿಗೆ ಪಾಲಕ ಪೋಷಕರು ಸಹಕರಿಸಿ ಲಸಿಕೆ ಹಾಕಿಸ ಬೇಕೆಂದು ಹೇಳುತ್ತಾ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನದ ಮೇರೆಗೆ ಡಾ, ಸಂಪತಕುಮಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು. ಡಾ, ಗಲಗಲಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ. ಡಾ, ಪಿ.ಏ ಹಿಟ್ನಳ್ಳಿ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿಗಳು, ವಿಜಯಪುರ ಜಿಲ್ಲಾ ಮಟ್ಟದ ತಾಯಿ ಮಗುವಿನ ಆರೈಕೆಯ ಸಭೆ ನಿರ್ಣಯದಂತೆ ಹಾಗೂ ಡಾ, ಅಶ್ಪಾಕ ಮಾಗಿ. ತಾಲೂಕ ಆರೋಗ್ಯ ಅಧಿಕಾರಿಗಳು. ಡಾ, ಮಂಜುನಾಥ ಆಕಾಶ. ಆಡಳಿತ ವೈದ್ಯಾಧಿಕಾರಿಗಳು, ಸಹಕಾರ ದೊಂದಿಗೆ ಶಾಲಾ ಮಕ್ಕಳಿಗೆ ಲಸಿಕ ನಿರಾಕರಣೆ ಆಲಮೆಲ ಪಟ್ಟಣದ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಇಂಗ್ಲಿಷ. ಕನ್ನಡ. ಪ್ರಾಥಮಿಕ ಪ್ರೌಢ ಶಾಲಾ ಮಕ್ಕಳಿಗೆ ಲಸಿಕೆ ನೀಡಲು ಸೂಚಿಸಿದ ಮೇರೆಗೆ ಮಾರಕ ಕಾಯಿಲೆಗಳೆಂದರೆ ಆ ಕಾಯಿಲೆಗಳು ಯಾವುದೇ ಔಷದ ಇಂಜೆಕ್ಷನ. ಮಾತ್ರೆಗಳಿಂದ ಗುಣಮುಖರಾಗದೆ ಮರಣವೆ ಗತಿ ಅಂತಹ ಕಾಯಿಲೆಗಳು ತಡೆಗಟ್ಟಲು ಮುಂಜಾಗ್ರತ ಕ್ರಮಕ್ಕಾಗಿ ಮಕ್ಕಳ ವಯೋಮಾನಕ್ಕೆ ಅನುಗುಣವಾಗಿ ಸಕಾಲಕ್ಕೆ ಲಸಿಕೆಗಳು ಕಡ್ಡಾಯವಾಗಿ ಪಡೆಯುವ ಮೂಲಕ ಮಾರಣಾಂತಿಕ ಕಾಯಿಲೆಗಳು ತಡೆಗಟ್ಟಲು ಸಾಧ್ಯ ಆರೋಗ್ಯ ಮಾಹಿತಿ ಶಿಕ್ಷಣ ಮೂಲಕ ಮಕ್ಕಳಿಗೆ ಮನವರಿಕೆ ಮಾಡುತ್ತಾ ಒಂದನೇ ತರಗತಿ ಮಕ್ಕಳಿಗೆ ಮೂರು ಮಾರಕ ಕಾಯಿಲೆಗಳಿಗೆ ಹೋರಾಟ ಮಾಡುವ ಒಂದೇ ಲಸಿಕೆ ಡಿ.ಪಿ.ಟಿ ಲಸಿಕೆ ನೀಡುವ ಮೂಲಕ ಡಿಪ್ಟೆರಿಯ. ಪರ್ಟಿಸಿಸ್. ಟೆಟನಸ್. ಮೂರು ಮಾರಕ ಕಾಯಿಲೆಗಳು ಡಿಪ್ಟೆರಿಯ ಗಂಟಲು ಮಾರಿ. ಗಂಟಲಿನ ಒಳಗೆ ಟಾನ್ಸಿಲ್ ಆಗಿ ಗಂಟಲು ಬಾವು ಬಂದು ನೋವಾಗಿ ಉಸಿರು ಗಟ್ಟುವ ಮೂಲಕ ಮಕ್ಕಳು ಮರಣ ಹೊಂದುವುದು ತಡೆಗಟ್ಟಲು ಫರ್ ಟುಸಿಸ್ ನಾಯಿ ಕೆಮ್ಮು. ವಿಪರೀತ ಕೊನೆಗೆ ಮಕ್ಕಳು ಮರಣ ಹೊಂದುವ ನಾಯಿ ಕೆಮ್ಮು ತಡೆಗಟ್ಟಲು ಟೇಟನಸ್ ಧನುರ್ ವಾಯು ಕೈ ಮತ್ತು ಅಂಗೈ ಮತ್ತು ಅಂಗಾಲು ಮುಷ್ಟಿ ಹಿಡಿದು ಮೈ ಶೆಟ್ಟೇ ಹಿಡಿದು ಮರಣ ಹೊಂದುವುದು ತಡೆಗಟ್ಟಲು ಮುಂಜಾಗೃತಾ ಕ್ರಮಕ್ಕಾಗಿ ಡಿಪಿಟಿ ಲಸಿಕೆ ನೀಡುವುದು.

ಎರಡು ಮಾರಕ ಕಾಯಿಲೆಗಳು ವಿರುದ್ಧ ಹೋರಾಟ ಮಾಡುವ ಲಸಿಕೆ ಟಿಡಿ ಲಸಿಕೆ 5ನೇ ಮತ್ತು 10 ನೇ. ತರಗತಿ ಮಕ್ಕಳಿಗೆ ಗಂಟಲು ಮಾರಿ ಮತ್ತು ಧನುರ್ ವಾಯು ಕಾಯಿಲೆ ತಡೆಗಟ್ಟಲು ಟಿಡಿ ಲಸಿಕೆ ನೀಡುವುದು ಮಕ್ಕಳಿಗೆ ಲಸಿಕೆ ನೀಡಿದಾಗ ಲಸಿಕೆ ನೀಡಿದ ಸ್ಥಳದಲ್ಲಿ ಸ್ವಲ್ಪ ನೋವಾಗುವುದು ಬಾವು ಆಗುವುದು ಸಹಜ ಆದರೆ ನೋವು ಮಾತು ಬಾವು ಭಯಪಟ್ಟು ಲಸಿಕೆ ಹಾಕದೆ ಇದ್ದಲ್ಲಿ ಮಾರಕ ಕಾಯಿಲೆಗಳಿಗೆ ತುತ್ತಾಗಿ ಮಕ್ಕಳನ್ನು ಕಳೆದು ಕೊಂಡಿದ್ದು ಸಾಕಷ್ಟು ಉದಾಹರಣೆಗಳಿವೆ. ಮಕ್ಕಳಿಗೆ ಪರಿ ಪರಿಯಾಗಿ ಪರಿಣಾಮಕಾರಿಯಾಗಿ ಆರೋಗ್ಯ ಮಾಹಿತಿ ಶಿಕ್ಷಣ ನೀಡುವ ಮೂಲಕ ಮಕ್ಕಳ ಮನವೊಲಿಸಿ ಲಸಿಕೆ ಹಾಕುವ ಮೂಲಕ ಯಶಸ್ವಿ ಯಾದರು ಹಾಗೆ ವಿಕ್ರ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಮಕ್ಕಳಿಗೂ ಮನವರಿಕೆ ಮೂಲಕ ಶಿಕ್ಷಕರ ಸಹಕಾರದೊಂದಿಗೆ ಮಕ್ಕಳಿಗೆ ಲಸಿಕೆ ನೀಡಿದರು. ಪ್ರಸ್ತುತ ಸಂದರ್ಭದಲ್ಲಿ ಶ್ರೀ ಎಂ.ಎನ್ ಪೂಜಾರಿ ಹಿರಿಯ ಆರೋಗ್ಯ ನಿರಕ್ಷಣಾಧಿಕಾರಿಗಳು ಶ್ರೀ ಸಂದೇಶ ಜೋಗುರ್ ಸಂತೋಷ ಹೊಸಮನಿ. ಗುರು ಹೂಗಾರ್ ಆರೋಗ್ಯ ನಿರೀಕ್ಷಣಾಧಿಕಾರಿಗಳು ಜೈಸಿರಿ ಬಿರಾದಾರ. ಪ್ರಾಥಮಿಕ ಆರೋಗ್ಯ ಸುಕ್ಷಾಧಿಕಾರಿಗಳು. ಭಾರತಿ ತಳವಾರ್ ನರ್ಸಿಂಗ್ ಆಫೀಸರ್ ಉಪಸ್ಥಿತರಿದ್ದರು.

ಡಾ, ಪೂಜಾ ವೈದ್ಯಾಧಿಕಾರಿಗಳು ಹರೀಶ್ ಕುಲಕರ್ಣಿ ತಾಲೂಕ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು. ಮಾರ್ಥಾಂಡ್ ಸಂತೋಷ್ ಕುಂಬಾರ್ ಆಪ್ತ ಸಮಾಲೋಚಕರು ಸಂತಸ ವ್ಯಕ್ತಪಡಿಸಿದರು. ಸಂಸ್ಥೆಯ ಪ್ರಾಂಶುಪಾಲರು ಶ್ರೀಮತಿ ನೂತನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು ಕಿರಣ ನಾಯಕ ಶಿಕ್ಷಕರು ಸ್ವಾಗತಿಸಿ ನಿರೂಪಿಸಿದರು ಅನಿಲ್ ಬ್ಯಾಕೋಡ ಮಹದೇವಪ್ಪ ಪರಶುರಾಮ್ ತಳವಾರ್ ಮಹಾನಂದ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವರದಿ:ಬಸವರಾಜ್.ಪಡಶೆಟ್ಟಿ.ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button