79 ನೇ. ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ರಧಾನ ಮಂತ್ರಿಗಳಾ ದನರೇಂದ್ರ ಮೋದಿ ಅವರು – ಹರ್ ಘರ್ ತಿರಂಗಾಕ್ಕೆ ಕರೆ.
ಸಿಂದಗಿ ಆ.13





ನೀಡಿರುವ ಹಿನ್ನೆಲೆಯಲ್ಲಿ ಯುವ ಮೋರ್ಚಾ ಸಿಂದಗಿ ಮಂಡಲದ ವತಿಯಿಂದ ನಡೆದಿರುವ ಬೈಕ್ ರ‍್ಯಾಲಿಯಲ್ಲಿ ಸಿಂದಗಿ ಮಾಜಿ ಶಾಸಕರಾದ ರಮೇಶ್ ಭೂಸನೂರ ಅವರು ತಾಲ್ಲೂಕಿನ ಬಿಜೆಪಿ ಮಂಡಳದ ಅಧ್ಯಕ್ಷರಾದ ಸಂತೋಷ ಪಾಟೀಲ ಡಂಬಳ ಅವರು ಬೈಕ್ ರೈಡ್ ಮಾಡಿ ಬಸವೇಶ್ವರ ವೃತ್ತದಿಂದ ವಿವೇಕಾನಂದ ಸರ್ಕಲ್ ದಿಂದ ಅಂಬೇಡ್ಕರ್ ಸರ್ಕಲ್ ಬಂದು ಮತ್ತೇ ಬಸವೇಶ್ವರ ಸರ್ಕಲ್ ಗೆ ಮುಕ್ತಾಯ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಮೇಶ ಬೂಸನೂರ ಈ ದೇಶದಲ್ಲಿ ಪ್ರತಿ ಒಬ್ಬರು ತಿರಂಗ ಧ್ವಜಾವನ್ನು ತಮ್ಮ ತಮ್ಮ ಮನೆಯ ಮೇಲೆ ಹಾರಿಸಬೇಕು ಎಂದು ವಿನಂತಿ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಿದ್ದು ಬುಳ್ಳಾ ಅಶೋಕ ನಾರಾಯಣಪೂರ ಪ್ರಶಾಂತ ಕದ್ದರಕಿ ಪೀರು ಕೆರೂರ ವಿಠ್ಠಲ ನಾಯ್ಕೋಡಿ ಶ್ರೀಶೖಲಗೌಡ ಬಿರಾದಾರ ಬಿ.ಎಚ್ ಬಿರಾದಾರ ಅಮಲಿಹಾಳ ಮಡಿವಾಳಪ್ಪಗೌಡ ಬಿರಾದಾರ ಶ್ರೀಶೈಲ ಚಳ್ಳಗಿ ಸಮೀ ಬಿಜಾಪುರ ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪಹಚ್ಯಾಳ.ದೇವರ ಹಿಪ್ಪರಗಿ